ಮೈಸೂರು: ಮಣ್ಣಿನ ಋಣದ ಮುಂದೆ ನಾವೆಲ್ಲಾ ಸಣ್ಣವರೆಂದು ಸಿಎಂ ಸಿದ್ದರಾಮಯ್ಯ ತತ್ವದ ಪದಗಳನ್ನಾಡಿದ್ದಾರೆ. ತತ್ವ
ಮೈಸೂರಿನ ಹೊಟೇಲ್‌ವೊಂದರಲ್ಲಿ ತಮ್ಮಜೊತೆಗಾರುರು ಕೆಲ ಸಚಿವರು ಕಾರ್ಯಕರ್ತರೊಡನೆ ಇಡ್ಲಿ, ದೋಸೆ ಸವಿದು ಸಂತಸದ ಕ್ಷಣಗಳನ್ನು ಉಪಹಾರದ ವೇಳೆ ಸಿಎಂ ಕಳೆದು ಭಾವುಕರಾಗಿ ಹಳೆಯ ದಿನಗಳನ್ನು ಸ್ಮರಿಸಿಕೊಂಡರು.
ಇದನ್ನೂ ಓದಿ: ಜಾತಿ ವ್ಯವಸ್ಥೆ, ವರ್ಣಾಶ್ರಮದಿಂದ ಮನುಷ್ಯ ಮನುಷ್ಯನನ್ನು ಶೋಷಿಸುವ ಅಸಮಾನತೆ ಸೃಷ್ಟಿಯಾಯಿತು: ಸಿ.ಎಂ.ಸಿದ್ದರಾಮಯ್ಯ
ಈ ಅನುಭವವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಇಂದು ಬೆಳಗ್ಗೆ ಮೈಸೂರಿನ ಮೈಲಾರಿ ಹೋಟೆಲ್ ನಲ್ಲಿ ತಿಂಡಿ ತಿನ್ನುವಾಗ ನನ್ನ ಕಾಲೇಜು ದಿನಗಳು ನೆನಪಾದವು ಎಂದು ಹಳೆಯ ಸ್ಮರಣೆಯ ಬುತ್ತಿಯನ್ನು ಬಿಚ್ಚಿಟ್ಟರು. ನನ್ನ ಬದುಕಿನ ಅವಿಸ್ಮರಣೀಯ ನೆನಪುಗಳೆಲ್ಲವೂ ಮೈಸೂರಿನ ಜೊತೆ ಬೆಸೆದುಕೊಂಡಿವೆ.
ಮೈಸೂರು ನನಗೆ ಹುಟ್ಟೂರು ಮಾತ್ರವಲ್ಲ ಬದುಕು ಕೊಟ್ಟ ಊರು. ದೈಹಿಕವಾಗಿ ದೂರವಿದ್ದಾಗಲೂ ಮೈಸೂರಿನ ನೆನಪು ಮನಸ್ಸಿಗೆ ಸದಾ ಹತ್ತಿರವಾಗಿರುತ್ತದೆ. ಈ ಮಣ್ಣಿನ ಋಣ ಬಹಳ ದೊಡ್ಡದು, ಅದರೆದುರು ನಾವು ಸಣ್ಣವರು ಎಂದಿದ್ದಾರೆ.
ಇದನ್ನೂ ನೋಡಿ: ಮಣ್ಣಿನ ಮಕ್ಕಳು’ ಎಂದು ಹೇಳಿಕೊಂಡು ದೌರ್ಜನ್ಯ ನಡೆಸಿದ್ದೆ ಜಾಸ್ತಿ | ರೇವಣ್ಣ ರಿಪಬ್ಲಿಕ್Janashakthi Media