ಬೆಂಗಳೂರು : ರಾಜ್ಯದ 37 ಲಕ್ಷ ಮಕ್ಕಳ ಕಲಿಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯರಿಗೆ ತಲಾ 1000 ಹಾಗೂ ಸಹಾಯಕರಿಗೆ ತಲಾ 700 ಸಹಾಯಧನ ಹೆಚ್ಚಳ ಮಾಡಿ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿದರು. ಶುಕ್ರವಾರ ತಮ್ಮ ದಾಖಲೆಯ 16 ನೇ ಬಜೆಟ್ ಮಂಡನೆಯ ವೇಳೆ ಗೃಹಲಕ್ಷ್ಮಿ ಯೋಜನೆಯಲ್ಲಿ 1.22 ಕೋಟಿ ಮಂದಿಗೆ ಹಣ ನೀಡಿರುವುದಾಗಿ ಘೋಷಿಸಿದ ಸಿಎಂ, ಪ್ರಸಕ್ತ ಸಾಲಿನಲ್ಲಿ 28608 ಕೋಟಿ ರೂ. ಮೀಸಲಿಟ್ಟಿರುವುದಾಗಿ ಮಾಹಿತಿ ನೀಡಿದರು.
ಇದನ್ನು ಓದಿ :-ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್‌ನಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ!
ಮಹಿಳೆಯನ್ನು ಆರ್ಥಿಕವಾಗಿ ಸ್ವತಂತ್ರ್ಯವಾಗಿಸದೇ ಮಾಡುವ ಎಲ್ಲಾ ಅಭಿವೃದ್ಧಿಗಳು ಟೊಳ್ಳಾಗಿರುತ್ತದೆ ಎಂಬ ಡಾ. ಬಿ.ಆರ್ . ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದ ಸಿಎಂ, ರಾಜ್ಯದ 17454 ಅಂಗನವಾಡಿ ಕೇಂದ್ರಗಳ ಸೌಲಭ್ಯ ಹೆಚ್ಚಳಕ್ಕೆ 175 ಕೋಟಿ ರೂ ಮೀಸಲಿಟ್ಟಿರುವುದಾಗಿ ಘೋಷಿಸಿದರು.
ಜೊತೆಗೆ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಲಭ್ಯವಿರುವ 173 ಸಿಎ ನಿವೇಶನಗಳನ್ನು ಕೊಳ್ಳಲು 10 ಕೋಟಿ ರೂ. ಮೀಸಲಿಟ್ಟಿರುವುದಾಗಿ ಘೋಷಿಸಿದರು