ಎಲ್ಲಾ ಗುತ್ತಿಗೆ ಮುನಿಸಿಪಲ್ ಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಸಿಎಂ ಭರವಸೆ

ಬೆಂಗಳೂರು: ರಾಜ್ಯದ ಎಲ್ಲಾ ಮುನಿಸಿಪಾಲಿಟಿ, ಮಹಾನಗರ ಪಾಲಿಕೆಗಳಲ್ಲಿ ಇರುವ ಎಲ್ಲಾ ಪೌರ ಕಾರ್ಮಿಕರನ್ನು ಮೇ. 1 ರಿಂದ ಖಾಯಂ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿರುವುದನ್ನು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ, ಸಿಐಟಿಯು ರಾಜ್ಯ ಸಮಿತಿಯು ಸ್ವಾಗತಿಸಿದೆ.

ಮುಖ್ಯಮಂತ್ರಿಗಳು ಕಸದ ವಾಹನ ಚಾಲಕರು, ಸಹಾಯಕರು, ಒಳಚರಂಡಿ ಸ್ವಚ್ಛತಾ ಕೆಲಸಗಾರನ್ನು ಖಾಯಂ ಮಾಡುವುದಾಗಿ ಹೇಳಿರುವುದು ಸ್ವಾಗತರ್ಹ ನಡೆ ಎಂದಿರುವ ಮುನಿಸಿಪಾಲ್ ಕಾರ್ಮಿಕರ ಸಂಘ ಮುಖ್ಯ ಮಂತ್ರಿಗಳು ಆಡಿರುವ ಮಾತಿಗೆ ಬದ್ದರಾಗಿ ಅದನ್ನು ತಪ್ಪದೆ ಜಾರಿ ಮಾಡಲು ಅಗತ್ಯ ಕ್ರಮಗಳನ್ನು ವಹಿಸುವಂತೆ ಮುನಿಸಿಪಾಲ್ ಕಾರ್ಮಿಕರ ಸಂಘ ಸಿಐಟಿಯು ವಿನಂತಿಸಿದೆ. ಸರ್ಕಾರ ಈ ತೀರ್ಮಾನಕ್ಕೆ ಬರಲು ಹತ್ತಾರು ವರ್ಷಗಳಿಂದ ನಿರಂತರವಾಗಿ, ಈ ಪ್ರಶ್ನೆಯ ಮೇಲೆ ಹಲವು ಸಂಘಟನೆಗಳು ನಡೆಸಿದ ನಿರಂತರ ಹೋರಾಟದ ಪಾಲು ಇದೆ ಎಂದು ಸಂಘವು ಅಭಿಪ್ರಾಯಪಟ್ಟಿದೆ.

ಇದನ್ನು ಓದಿ :-ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ!

ಈ ಹಿಂದೆ ಸಹ ಪೌರ ಕಾರ್ಮಿಕರ ನೇರ ನೇಮಕಾತಿ ಮತ್ತು ನೇರ ಪಾವತಿಯ ಮುನ್ನ ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ಸಮಾವೇಶದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಶ್ರೀ ಸಿದ್ದರಾಮಯ್ಯನವರು ಎಲ್ಲಾ ಮುನಿಸಿಪಾಲ್ ಕಾರ್ಮಿಕನ್ನು ಗುತ್ತಿಗೆ ಕಾರ್ಮಿಕ ಪದ್ದತಿಯಿಂದ ಹೊರ ತಂದು ನೇಮಕಾತಿ ಮತ್ತು ನೇರ ಪಾವತಿಯಡಿಯಲ್ಲಿ ತರುವುದಾಗಿ ತಿಳಿಸಿದ್ದರು. ಅದರೆ ಕೆಲ ಅಧಿಕಾರಿಗಳು ಕುತಂತ್ರದಿಂದಾಗಿ ಕಸದ ಜತೆಯಲ್ಲಿಯೆ ಕೆಲಸ ಮಾಡುವವರನ್ನು ಪೌರ ಕಾರ್ಮಿಕರು ವಿಭಜನೆ ಮಾಡಿ ಮುನಿಸಿಪಾಲಿಟಿಗಳಲ್ಲಿ ಕಸದ ಜತೆ ಕೆಲಸ ಮಾಡುವವರೆಲ್ಲರು ಖಾಯಂ ಅಗದೆ ಉಳಿದು ಕೇವಲ ಪೌರ ಕಾರ್ಮಿಕರ ನೇರ ನೇಮಕಾತಿ ಅಡಿ ಖಾಯಂ ಆದರೆ ಉಳಿದವರು ನೇರ ನೇಮಕಾತಿಯಡಿಯಲ್ಲಿ ಬಂದರು .ಈ ನಡೆಯು ಗುತ್ತಿಗೆ ಮುನಿಸಿಪಲ್ ಕಾಮಿಕರಲ್ಲಿ ವಿಭಜನೆ ತಂದು ಅನಾರೋಗ್ಯಕರ ಪರಿಸ್ಥಿತಿಯನ್ನು ಉಂಟು ಮಾಡಿತ್ತು.

ನಗರ ಮತ್ತು ಪಟ್ಟಣಗಳ ಜನರಿಗೆ ಸೇವೆ ಸಲ್ಲಿಸುವ ಎಲ್ಲಾ ಮುನಿಸಿಪಲ್ ಕಾರ್ಮಿಕರ ಸೇವೆಗಳು ಅತ್ಯಗತ್ಯವಾಗಿದೆ. ಪಾರ್ಕ, ಸ್ಮಶಾಣ, ಘನ ತ್ಯಾಜ್ಯವಿಲೆವಾರಿ ಘಟಕ, ಶೌಚಾಲಯಗಳಲ್ಲಿ ಕಾರ್ಮಿಕರು, ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು, ನೀರು ಸರಬರಾಜು ನೌಕರರ, ಕಂಪ್ಯೂಟರ್ ಅಪರೇಟರ್‌ಗಳು ನಡುವೆ ತಾರತಮ್ಯ ಮಾಡದೆ ಹಂತ ಹಂತವಾಗಿ ಖಾಯಂಗೊಳಿಸಲು ಮುನಿಸಿಪಲ್ ನೌಕರರು ದಶಕಗಳಿಂದ ಒತ್ತಾಯಿಸುತ್ತಲೆ ಬಂದಿದ್ದಾರೆ. ಅದರೆ ಸರ್ಕಾರ ಈ ಎಲ್ಲಾ ಕಾರ್ಮಿರ ಸೇವಗಳನ್ನು ಖಾಯಂ ಮಾಡಲು ಅಗತ್ಯ ಕ್ರಮವನ್ನು ವಹಿಸುವಂತೆ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘವು ದಿ; 6-3-2025 ಗುರುವಾರ ಮುನಿಸಿಪಲ್ ಕಾರ್ಮಿಕರ ವಿಧಾನ ಸೌಧ ಚಲೋ ನಡೆಸಿತ್ತು. ಈಗಲೂ ಈ ಎಲ್ಲಾ ಕಾರ್ಮಿಕರ ಸೇವೆಗಳ ಖಾಯಂಗೆ ಸರ್ಕಾರ ಕ್ರಮ ವಹಿಸುವಂತೆ ಸಂಘವು ಸರ್ಕಾರವನ್ನು ಒತ್ತಾಯಿಸುತ್ತದೆ.

ಇದನ್ನು ಓದಿ :-ರಾಜ್ಯಪಾಲರಿಗೆ ಮಸೂದೆಗಳನ್ನು ತಡೆಯುವ ಅಧಿಕಾರವಿಲ್ಲ – ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪು

ನಿಯಮಗಳ ಅಡಿಯಲ್ಲಿ ಕಸ ಗುಡಿಸುವವರು, ಕಸವನ್ನು ಮನೆಗಳಿಂದ ಸಂಗ್ರಹಿಸುವವರು, ಟ್ರಾಕ್ಟರ್-ಲಾರಿ ಅಥವಾ ಆಟೋಗಳಿಗೆ ತುಂಬುವವರನ್ನು ಲೋಡರ್ಸ್‌, ಕಸ ಸಾಗಿಸುವವರನ್ನು ಚಾಲಕರು, ಮತ್ತು ಒಳಚರಂಡಿಗಳಲ್ಲಿ ಕಟ್ಟಿಕೊಂಡ ಮಲ-ಮೂತ್ರಗಳನ್ನು ತೆರವುಗೊಳಿಸಿಸ್ವ ಚ್ಚಮಾಡುವವರು ಎಂದು ಕಾರ್ಮಿಕರನ್ನು ವಿಂಗಡಿಸಲಾಗಿದೆ. ಇದಲ್ಲದೆ ಲೋರ‍್ಸ, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ , ಪಾರ್ಕ, ಸ್ಮಶಾಣ, ಘನ ತ್ಯಾಜ್ಯವಿಲೆವಾರಿ ಘಟಕ, ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು ,ಶೌಚಾಲಯ ಕಾರ್ಮಿಕರು, ನೀರು ಸರಬರಾಜು ನೌಕರರ ವಿಂಗಡಿಸಿದ್ದರ ಪರಿಣಾಮ 75% ರಷ್ಟು ಗುತ್ತಿಗೆ ಮುನಿಸಿಪಲ್ ಕಾರ್ಮಿಕರು ಖಾಯಂ ಆಗಿಲ್ಲ. ಹಾಗಾಗಿ ಈ ಎಲ್ಲಾ ಮುನಿಪಲ್ ಗುತ್ತಿಗೆ , ಹೊರಗುತ್ತಿಗೆ ಮತ್ತು ಬಾಕಿ ಉಳಿದಿರುವ ನೇರ ಪಾವತಿಯಲ್ಲಿ ಕೆಲಸ ಮಾಡುತ್ತಿರುವ ಸೇವೆಗಳನ್ನು ಖಾಯಂಮಾತಿಗೆ ಒತ್ತಾಯಸಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘವು ಜಿಲ್ಲಾ ಮಟ್ಟದಲ್ಲಿ ಹಲವು ಹೋರಟಗಳನ್ನು ನಡೆಸಿತ್ತು ಮತ್ತು ಇದೆ ಮಾರ್ಚಿ 6 ರಂದು ವಿಧಾನ ಸೌಧ ಚಲೋ ನಡೆಸಲಾಗಿತ್ತು ಎಂಬುದನ್ನು ನೆನಪಿಸಿಕೊಂಡಿದೆ.

ಸಿಂಧುತ್ವ ಪ್ರಶ್ನೆಯನ್ನು ಬಗೆಹರಿಸುವುದಾಗಿ ಮುಖ್ಯ ಮಂತ್ರಿಗಳು ಹೇಳಿದ್ದಾರೆ. ಅಮಾಯಕ ಪೌರ ಕಾರ್ಮಿಕರಿಂದ ಸಿಂಧುತ್ವದ ಹೆಸರಲ್ಲಿ ಸಾವಿರಾರು ರೂಪಾಯಿಗಳನ್ನು ಲಂಚ ಪಡೆಯಲಾಗಿದೆ. ನೀಡದೆ ಇದ್ದಲ್ಲಿ ಅನಗತ್ಯವಾಗಿ ಅಲೆಸಲಾಗುತ್ತಿದೆ ಎಂದು ಸಂಘವು ಅರೋಪಿಸಿದೆ. ಕಾರವಾರ,ಬೆಳಗಾವಿ. ಮತ್ತಿತರೆ ಜಿಲ್ಲೆಯಲ್ಲಿ ಸಿಂಧುತ್ವದ ಸಮಸ್ಯೆಯು ವಿಶಿಷ್ಟವಾಗಿದ್ದು ಇದನ್ನು ಸರ್ಕಾರ ಪರಿಹಾರ ರೂಪಿಸುವಂತೆ ವಿನಂತಿಸಿದೆ.

ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಯಾಕಿಲ್ಲ ನೇಮಕಾತಿ?

2018 ರಿಂದ ರಾಜ್ಯ ವಿವಿಧೆಡೆಗಳಲ್ಲಿ ನೇರ ಪಾವತಿ / ನೇಮಕಾತಿ ಪ್ರಕ್ರೀಯೆಯನ್ನು ನಡೆಸಿದ್ದರು ಇದುವರೆವಿಗೋ ಕಲುಬುರ್ಗಿ ಮಹಾ ನಗರ ಪಾಲಿಕೆ ಸಾವಿರಾರು ಪೌರ ಕಾರ್ಮಿಕರಲ್ಲಿ ಒಬ್ಬರಿಗೂ ನೇರ ಪಾವತಿ/ ನೇಮಕಾತಿ ಯಾಕೆ ಮಾಡಲಾಗಿಲ್ಲ ಎಂದು ಪ್ರಶ್ನೆಮಾಡಿರುವ ಮುನಿಸಿಪಾಲ್ ಕಾರ್ಮಿಕರ ಸಂಘವು ಈ 6-7 ವರ್ಷಗಳ ಕಾಲ ದಲಿತ ಪೌರ ಕಾರ್ಮಿಕರಿಗೆ ಅಗಿರುವ ಅನ್ಯಾಯಕ್ಕೆ ಯಾರು ಹೋಣೆ ಎಂದು ಸಂಘವು ಖಾರವಾಗಿ ಪ್ರಶ್ನಿಸಿದೆ. ಈ ಕೂಡಲೆ ಎಲ್ಲಾ ಪೌರ ಕಾರ್ಮಿಕರನ್ನು ಖಾಯಂ ಮಾಡಿ ಭಾಕಿ ಸಮೇತ ವೇತನ ಮತ್ತು ಇತರೆ ಸೌಲಭ್ಯಗಳನ್ನು ನೀಡುವಂತೆ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘವು ಒತ್ತಾಯಿಸಿದೆ.

ಎಲ್ಲಾ ವಸತಿ ಇಲ್ಲದೆ ಮುನಿಸಿಪಾಲ್ ಕಾರ್ಮಿಕರಿಗೆ ವಸತಿ/ನಿವೇಶನ, ಮೃತ ಮುನಿಸಿಪಾಲ್ ಕಾರ್ಮಿಕರ ಕುಟುಂಬಗಳಿಗೆ ಕೆಲಸ ಮತ್ತು ಕಾಯಿದೆ ಅನ್ವಯ ಉಪಧನ, ಮಕ್ಕಳ ಶಿಕ್ಷಣಕ್ಕೆ ವಿಧ್ಯಾರ್ಥಿ ವೇತನ, ಹತ್ತಾರು ವರ್ಷ ದುಡಿದು ಬರಿಗೈಯಲ್ಲಿ ಹೋತ್ತಿರುವ ಮುನಿಸಿಪಲ್ ಕಾರ್ಮಿಕರಿ ಮಾಸಿಕ 5000 ಪಿಂಚಣಿ, , ಕಾರ್ಮಿಕರ ಕಾನೂನುಗಳ ಅನ್ವಯ ವಾರದ ಪೂರ್ಣ ರಜೆ, ಹಬ್ಬದ ರಜೆ, ಎಂಟು ಗಂಟೆ ಕೆಲಸ, ಹೆಚ್ವುವರಿ ಕೆಲಸಕ್ಕೆ ಕಾನೂನಿಂತೆ ವೇತನ ನೀಡಲು ಬೇಕಾಗಿರುವ ಕ್ರಮಗಳನ್ನು ಸಹ ವಹಿಸಲು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಜಾರಿಗೆ ಸಹ ಸರ್ಕಾರ ಕ್ರಮ ವಹಿಸಲು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ ಒತ್ತಾಯಿಸಿದೆ.

ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರು ಮಾಸಿಕ ಸಂಬಳ 50,ಸಾವಿರ ಆಗಲಿದೆ ಎಂದು ತಿಳಿಸಿದ್ದಾರೆ . ಇದು ನಿಜವಾಗಿ ಎಲ್ಲಾರಿಗೂ ಸಿಗಲಿ ಎಂದು ಸಂಘವು ಆಶಿಸಿದೆ. ಕಳೆದ ಮೂರು – ನಾಲ್ಕು ತಿಂಗಳಿಂದ ರಾಜ್ಯದ ಹಲವು ಮುನಿಸಿಪಾಲಿಟಿ/ ಮಹಾ ನಗರ ಪಾಲಿಕೆಗಳಲ್ಲಿ ಖಾಯಂ ಸಿಬ್ಬಂದಿಗೂ ಸೇರಿದಂತೆ ಪೌರ ಕಾರ್ಮಿಕರಿಗೆ ಸಂಬಳವೆ ಅಗದೆ ಇರುವ ಬಗ್ಗೆ ಸಹ ಸರ್ಕಾರ ಗಮನ ಹರಿಸಲು ಸಂಘವು ವಿನಂತಿಸಿದೆ.

Donate Janashakthi Media

Leave a Reply

Your email address will not be published. Required fields are marked *