ಭಾಲ್ಕಿ : ಸಿಎಂ ಬೊಮ್ಮಾಯಿವರು ತಾವೇ ಹೊರಡಿಸಿರುವ ಆದೇಶವನ್ನು ಪದೇ ಪದೇ ಉಲ್ಲಂಘನೆ ಮಾಡ್ತಿದ್ದಾರೆ. ಜೊತೆಗೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪವು ಕೇಳಿ ಬಂದಿದೆ ಎಲ್ಲಿ ಅಂತೀರಾ ಈ ಸ್ಟೋರಿ ಓದಿ.
ಏಯ್ ಫೋಟೋ ತೆಗಿಬೇಡ್ರಪ್ಪ, ಎಲೆಕ್ಷನ್ ಐತಿ.. ಹೀಗಂತ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಳಿಗೆ ಹಾಗೂ ಸ್ಥಳೀಯ ಜನತೆಯಲ್ಲಿ ಮನವಿ ಮಾಡಿಕೊಂಡಿರುವ ಘಟನೆ, ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ. ಅವರು ಪರಿಷತ್ ಚುನಾವಣೆ ಪ್ರಚಾರ ನಿಮಿತ್ತ ನಗರಕ್ಕೆ ಬಂದ ವೇಳೇಯಲ್ಲಿ ಅವರಿಗೆ ಮಹಿಳೆಯರು ಆರತಿ ಬೆಳಗಲು ಮುಂದಾಗುತ್ತಾರೆ. ಆ ಆರತಿ ತಟ್ಟಿಗೆ ಸಿಎಂ 500 ರೂ ಗಳ ಗರಿ ಗರಿ ನೋಟನ್ನು ಹಾಕಿತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏಳಕ್ಕೂ ಹೆಚ್ಚು ಮಂದಿ ಆರತಿ ತಟ್ಟೆ ಹಿಡಿದು ಬೆಳಗಿದ್ದಾರೆ. ಆ ವೇಳೆ ಒಬ್ಬೊಬ್ಬರ ತಟ್ಟಗೆ 500 ರೂ ಹಾಕಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಪರ ಚುನಾವಣೆ ಪ್ರಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಈ ವೇಳೆ ಉಪಸ್ಥಿತರಿದ್ದರು. ಇವರೆಲ್ಲರ ಮೇಲೆ ಚುನಾವಣಾ ಆಯೋಗ ಸ್ವಯಂ ದೂರು ದಾಖಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತೆ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಭೆ ಸಮಾರಂಭಗಳಲ್ಲಿ ಹೂ, ಹಣ್ಣು, ಹಾರ, ತುರಾಯಿ ಸಂಪ್ರದಾಯ ನಿಲ್ಲಿಸಿ ಪುಸ್ತಕ ನೀಡಿ ಎಂದು ಹೇಳಿದ್ದ ಸಿಎಂ ಇಲ್ಲಿ ಗುಲಾಭಿ ಹೂ ಸ್ವೀಕರಿಸಿದ್ದಾರೆ, ಜೊತೆಗೆ ತಾವೇ ಹಣ ನೀಡಿದ್ದಾರೆ. ಅವರೇ ಮಾಡಿದ ಆದೇಶವನ್ನು ಈಗ ಅವರೇ ಉಲ್ಲಂಘಿಸಿದ್ದಾರೆ. ಇದು ಏನನ್ನು ಸೂಚಿಸುತ್ತದೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.