‘ಮಹಾರಾಷ್ಟ್ರ ಮಾದರಿ’ಯಲ್ಲಿ ಕರ್ನಾಟಕದಲ್ಲೂ ಆಪರೇಷನ್‌; ಸಿಎಂ ಏಕನಾಥ್‌ ಶಿಂಧೆ ಸುಳಿವು – ಹಗಲುಗನಸು ಎಂದ ಕಾಂಗ್ರೆಸ್‌

ಮುಂಬೈ : ಕರ್ನಾಟಕ ರಾಜಕೀಯದಲ್ಲಿ ಲೋಕಸಭಾ ಚುನಾವಣೆ ಬಳಿಕ  ಕ್ಷಿಪ್ರ ಬೆಳವಣಿಗೆಗಳಾಗುವ ಸಾಧ್ಯತೆ ಇದೆ.  ಜೂನ್‌ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ, ಈ ಸರ್ಕಾರ ಬಹಳಷ್ಟು ದಿನ ಇರಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಹೇಳಿಕೆಗಳನ್ನು ಈಗಾಗಲೇ ನೀಡಿದ್ದಾರೆ. ಇದರ ನಡುವೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರು ನೀಡಿರುವ ಹೇಳಿಕೆ ಈಗ ಮಹತ್ವವನ್ನು ಪಡೆದುಕೊಂಡಿದೆ. ಆಪರೇಷನ್‌

‘ಮಹಾರಾಷ್ಟ್ರ ಮಾದರಿ’ಯಲ್ಲಿ ಕರ್ನಾಟಕದಲ್ಲೂ ಆಪರೇಷನ್‌ ನಡೆಯುವ ಸುಳಿವನ್ನು ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ನೀಡಿದ್ದಾರೆ. ಮಹಾರಾಷ್ಟ್ರದ ಸತಾರಾದಲ್ಲಿ ಮಾತನಾಡಿರುವ ಏಕನಾಥ್‌ ಶಿಂಧೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದ ಪತನಕ್ಕೆ ತೆರೆಮರೆಯಲ್ಲಿ ಸರ್ಕಸ್ ನಡೆಯುತ್ತಿದೆ ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಪತನಕ್ಕೆ ಕ್ಷಣಗಣನೆ ಶುರುವಾಗಿದ್ಯಾ ಎಂಬ ಅನುಮಾನ ಬರುತ್ತಿದೆ.

ಸತಾರ್‌ನಲ್ಲಿ ಮಾತನಾಡಿದ ಏಕನಾಥ್‌ ಶಿಂಧೆ, ನಾನು ಇತ್ತಿಚೇಗೆ ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ. ಕರ್ನಾಟಕದಲ್ಲಿಯೂ ‘ನಾಥ’ ಆಪರೇಷನ್ ಮಾಡೋದಿದೆ ಎಂದು ಅಲ್ಲಿಯ ನಾಯಕರು ಹೇಳಿದ್ದಾರೆ. ‘ನಾಥ ಆಪರೇಷನ್’ ಅಂದ್ರೆ ಏನು? ಅಂತ ನಾನು ಅವರನ್ನು ಕೇಳಿದೆ. ಆಗ ಅವರು ನೀವು ಮಹಾರಾಷ್ಟ್ರದ ಮಹಾಘಟಬಂಧನ ಸರ್ಕಾರವನ್ನು ಪತನ ಮಾಡಿದ್ದೀರಾ, ಹೀಗಾಗಿ ನಿಮ್ಮ ಅನುಭವ ನಮಗೆ ಬಹಳ ಅವಶ್ಯಕವಿದೆ ಎಂದು ಹೇಳಿದ್ದಾರೆ. ಅದಕ್ಕೆ ಚುನಾವಣೆ ಮುಗಿದ ಮೇಲೆ ನಾನು ಕರ್ನಾಟಕಕ್ಕೆ ಮತ್ತೆ ಬರುತ್ತೇನೆ ಎಂದು ಹೇಳಿದ್ದೇನೆ ಎಂದು ಹೇಳಿದ್ದಾರೆ. ಆಪರೇಷನ್‌

ಇದನ್ನು ಓದಿ : ಭಾರತ ಚುನಾವಣಾ ಆಯೋಗ ವಿಫಲದ‌ ವಿರುದ್ಧ ‘#GrowASpineOrResign’ ಅಭಿಯಾನ

ಏಕನಾಥ್‌ ಶಿಂಧೆ ಅವರ ಹೇಳಿಕೆ ಈಗ ಕರ್ನಾಟಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. 136 ಶಾಸಕರ ಬಲ ಇರುವ ಕಾಂಗ್ರೆಸ್‌ ಸರ್ಕಾರವನ್ನು ಕೆಡವುದು ಅಷ್ಟೊಂದು ಸುಲಭವಾ ಎಂಬ ಪ್ರಶ್ನೆಯೂ ಮೂಡಿದೆ. ಆದರೆ, ಮೊದಲಿನಿಂದಲೂ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಸರ್ಕಾರ ಉಳಿಯಲ್ಲ ಎಂದು ಹೇಳುತ್ತಾ ಬಂದಿದ್ದರು. ಈಗ ಏಕನಾಥ್‌ ಶಿಂಧೆ ಅವರ ಮಹಾರಾಷ್ಟ್ರ ಮಾದರಿ ಆಪರೇಷನ್‌ ಹೇಳಿಕೆ ಅದಕ್ಕೆ ಪುಷ್ಠಿ ನೀಡಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ 2019ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದವು. ಬಿಜೆಪಿ 105 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಶಿವಸೇನೆ 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಅಧಿಕಾರ ಹಂಚಿಕೆ ವಿಚಾರಕ್ಕೆ ಎರಡು ಪಕ್ಷಗಳ ನಡುವೆ ಬಿರುಕು ಮೂಡಿ ಮೈತ್ರಿ ಪತನವಾಯಿತು. ಇದಾದ ಬಳಿಕ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಜೊತೆ ಸೇರಿ ಮಹಾ ವಿಕಾಸ್‌ ಅಘಾಡಿ ಸರ್ಕಾರ ರಚಿಸಿತ್ತು.

ಅದಾದ ಬಳಿಕ ಶಿವಸೇನೆ ನಾಯಕ ಏಕನಾಥ್‌ ಶಿಂಧೆ ಮೂರನೇ ಎರಡರಷ್ಟು ಶಾಸಕರ ಜೊತೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು. ಇದರಿಂದ ಮಹಾ ವಿಕಾಸ್‌ ಅಘಾಡಿ ಸರ್ಕಾರ ಪತನವಾಗಿ, ಬಿಜೆಪಿ ಹಾಗೂ ಶಿವಸೇನೆ ಸರ್ಕಾರ ಅಸ್ತಿತ್ವಕ್ಕೆ ಬಂತು. ಬಳಿಕ ಎನ್‌ಸಿಪಿಯ ಅಜಿತ್‌ ಪವಾರ್‌ ಕೂಡ ಬಿಜೆಪಿ ಜೊತೆ ಕೈ ಜೋಡಿಸಿದರು. ಈ ಕಾರಣಕ್ಕಾಗಿ ಶಿವಸೇನೆ ಹಾಗೂ ಎನ್‌ಸಿಪಿ ಪಕ್ಷಗಳು ಮಹಾರಾಷ್ಟ್ರದಲ್ಲಿ ವಿಭಜನೆಯಾಗಿವೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ, ಮಹಾರಾಷ್ಟ್ರದಲ್ಲಿ ಆದಂತೆ ʼಆಪರೇಶನ್ ಕಮಲʼ ನಡೆಯಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ  “ಈಗಾಗಲೇ ಕಳೆದ ಒಂದು ವರ್ಷದಿಂದ ಇಂಥ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಇನ್ನೊಂದು ಬಾರಿ ಏಕೆ ಪ್ರಯತ್ನಿಸುತ್ತಾರೆ. ನಮ್ಮ ಶಾಸಕರು ಯಾರೂ ಮಾರಾಟವಾಗಲು ತಯಾರಿಲ್ಲ. ಮಹಾರಾಷ್ಟ್ರದಲ್ಲಿ ಆದಂತೆ ಆಗಲೂ ಸಾಧ್ಯವಿಲ್ಲ” ಎಂದರು.

ಅದು ಅವರ ಭ್ರಮೆ. ಆಪರೇಷನ್ ಕಮಲ ಸಾಧ್ಯ ಇಲ್ಲ. ಅವರು ಪಾರ್ಲಿಮೆಂಟ್ ಸೋಲ್ತಾ ಇದ್ದಾರೆ. ಎನ್ ಡಿಎ ಸೋಲ್ತಾ ಇದೆ. ಅವರು ಪ್ರಯತ್ನ ಮಾಡಿ ವಿಫಲ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ಪ್ರಯತ್ನ ಮಾಡಿ ವಿಫಲ ಆಗಿದ್ದಾರೆ. ಆದರೂ ಆಪರೇಷನ್‌ ಮಾಡ್ತಾನೆ ಇದ್ದಾರೆ. ಅಂತಹ ಪ್ರಯತ್ನ ಯಶಸ್ವಿಯಾಗಲ್ಲ. ಅವರ ಪ್ರಯತ್ನ ಸಫಲ ಆಗಲ್ಲ ಎಂದರು.

ಇದನ್ನು ನೋಡಿ : 90 ದಿನ ವಿದೇಶದಲ್ಲಿ ಇರ್ತಾರಾ ಪ್ರಜ್ವಲ್‌ ರೇವಣ‍್ಣ!ಇಂಟರ್‌ ಪೋಲ್‌ ಬಂಧಿಸಿ ಭಾರತಕ್ಕೆ ಕರೆ ತರುತ್ತಾ?

Donate Janashakthi Media

Leave a Reply

Your email address will not be published. Required fields are marked *