ಸಿಎಂ ದೆಹಲಿ ಭೇಟಿ-ಸಚಿವ ಸಂಪುಟ ವಿಸ್ತರಣೆ ಊಹಾಪೋಹ: ಸಚಿವ ವಿ.ಸೋಮಣ್ಣ

ಮಡಿಕೇರಿ: ತೀವ್ರ ಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ದೆಹಲಿ ಭೇಟಿ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ವಸತಿ ಸಚಿವ ವಿ.ಸೋಮಣ್ಣ ಅವರು ಕೊಡಗಿನಲ್ಲಿ ಮಾತನಾಡುತ್ತಾ ʻʻಸಿಎಂ ಅವರು ಅನುಭವಿ ರಾಜಕಾರಣಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವವರು. ರಾಜ್ಯ ಸರಕಾರದ ಕೆಲಸಗಳ ನಿಮಿತ್ತ ಅವರು ದೆಹಲಿ ಭೇಟಿ ಮಾಡುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಎಂಬುದು ಊಹಾಪೋಹʼʼ ಎಂದು ಸುದ್ದಿಗಾರರಿಗೆ ಉತ್ತರಿಸಿದರು.

ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಹಾರಂಗಿ ಜಲಾಶಯ ಭರ್ತಿಯಾಗಿದ್ದರಿಂದ ಬಾಗಿನ ಅರ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಭೇಟಿ ನೀಡಿದ್ದಾರೆ.

ಸಚಿವ ವಿ ಸೋಮಣ್ಣ ಸಚಿವ ಸಂಪುಟ ಪುನರ್‌ ರಚನೆ ಸಿಎಂ ಅವರ ಪರಮಾಧಿಕಾರ. ಅವರ ಅಧಿಕಾರವನ್ನು ಅವರು ಬಳಸುತ್ತಾರೆ ಎಂದರು.

ಇದನ್ನು ಓದಿ: ಸಿಎಂ ದೆಹಲಿ ಪ್ರವಾಸ : ಕೂತುಹಲ ಮೂಡಿಸಿದ ಯಡಿಯೂರಪ್ಪ ನಡೆ

ರಾಜ್ಯ ಬಿಜೆಪಿ ಸರಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರಗಳು ಇನ್ನೂ ಗುಸುಗುಸು ಇರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿ ಭೇಟಿ ಕುತೂಹಲ ಮೂಡಿಸಿದೆ.

ಜಲಾಶಯದ ಮುಂಭಾಗ ಇರುವ ಕಾವೇರಿ ಮಾತೆ ಬಳಿಗೆ ಸಂಪ್ರದಾಯ ಬದ್ಧವಾಗಿ ಮಂಗಳ ವಾದ್ಯಗಳೊಂದಿಗೆ ಆಗಬಿಸಿದ ಸಚಿವರು ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಜಲಾಶಯ ತುಂಬಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಹಾರಂಗಿ ಜಲಾಶಯದಲ್ಲಿ ಹೂಳೆತ್ತುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಸೋಮಣ್ಣ ಅವರು ಈಗಾಗಲೇ ಎರಡು ಬಾರಿ ಟೆಂಡರ್‌ ಕರೆಯಲಾಗಿತ್ತು. ಅದು ವಿಫಲಗೊಂಡಿತು. ಮತ್ತೆ ಶೀಘ್ರದಲ್ಲೇ ಟೆಂಡರ್‌ ಕರೆದು ಹೂಳೆತ್ತಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಸಚಿವರು ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಉಪಸ್ಥಿತರಿದ್ದರು.

ವರದಿ: ಆರ್ವಿ ಹಸನ್‌

Donate Janashakthi Media

Leave a Reply

Your email address will not be published. Required fields are marked *