ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. 234 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟ ಮುನ್ನಡೆಯಲ್ಲಿದೆ.
ಕರುಣಾನಿಧಿ- ಜಯಲಲಿತಾ ಇಲ್ಲದೆ ನಡೆದ ಎದುರಾಗಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಬದಲಾದ ಸನ್ನಿವೇಶದಲ್ಲಿ ತಮ್ಮದೇ ಆದ ಸ್ಥಾನವನ್ನು ರೂಪಿಸಿಕೊಳ್ಳಲು ಶ್ರಮಿಸುತ್ತಿರುವ, ಡಿಎಂಕೆ ಮತ್ತು ಎಐಡಿಎಂಕೆ ಪಕ್ಷಗಳ ಹೊಸ ನಾಯಕತ್ವದ ಭವಿಷ್ಯ ಇಂದು ನಿರ್ಧಾರವಾಗುತ್ತಿದೆ.
ಇದನ್ನು ಓದಿ: ಮಸ್ಕಿಯಲ್ಲಿ ನಡೆಯದ ಆಪರೇಷನ್ ಕಮಲ : ಸೋಲೊಪ್ಪಿಕೊಂಡ ಪ್ರತಾಪಗೌಡ
ಇದುವರೆಗಿನ ಮತ ಎಣಿಕೆಯಲ್ಲಿ ಡಿಎಂಕೆ ಮೈತ್ರಿಕೂಟ 144 ಸ್ಥಾನ, ಎಐಎಡಿಎಂಕೆ ಕೂಟ 89 ಸ್ಥಾನ, ಇತರರು ಒಂದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ಅಧಿಕಾರ ಪಡೆಯಬೇಕಾದರೆ 118 ಸ್ಥಾನಗಳನ್ನು ಗೆಲ್ಲಬೇಕು. ಡಿಎಂಕೆ ಪಕ್ಷದ ಗೆಲುವು ಬಹುತೇಕ ಖಚಿತವಾಗುತ್ತಿದ್ದು, ಮುಂದಿನ ಮುಖ್ಯಮಂತ್ರಿಯಾಗಿ ಎಂ.ಕೆ.ಸ್ಟಾಲಿನ್ ಅಧಿಕಾರ ಸ್ವೀಕಾರದ ಮೂಹೂರ್ತ ನಿಗಧಿಯಾಗಿದೆ.
ಮೇ 6 ರಂದು ತಮಿಳುನಾಡು ಮುಖ್ಯಮಂತ್ರಿಯಾಗಿ ಎಂ.ಕೆ. ಸ್ಟಾಲಿನ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕೊಲತೂರ್ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸ್ಟಾಲಿನ್ 16,031 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಕೂಡಾ ಮುನ್ನಡೆ ಸಾಧಿಸಿದ್ದಾರೆ.
ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂ, ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದೆ.
Ok