ಜಯನಗರ ಬೀದಿಬದಿ ಅಂಗಡಿಗಳ ತೆರವು| ಬಿಬಿಎಂಪಿ ಬೆನ್ನಿಗೆ ನಿಂತ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಜಯನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಬೀದಿಬದಿ ವ್ಯಾಪಾರಿಗಳ ತೆರವು ಮಾಡಿದ್ದ ಬಿಬಿಎಂಪಿಗೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬೆಂಬಲ ಸೂಚಿಸಿದ್ದಾರೆ. ಅಂಗಡಿಗಳ

ಬಿಬಿಎಂಪಿ ಕ್ರಮದ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆ.ಶಿವಕುಮಾರ್ ಅವರು, ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳಲ್ಲಿ ತಮ್ಮ ಜೀವನೋಪಾಯವನ್ನು ನಡೆಸಬಹುದು. ಆದರೆ, ಬಿಬಿಎಂಪಿ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದ ಅಂಗಡಿಗಳನ್ನಷ್ಟೇ ತೆರವುಗೊಳಿಸಿದ್ದಾರೆಂದು ಹೇಳಿದರು.

ಇದನ್ನೂ ಓದಿ:ಬೀದಿ ವ್ಯಾಪಾರಿಗಳು 1053; ಬೀದಿ ವ್ಯಾಪಾರದ ಹೆಸರಿನಲ್ಲಿ ಸಾಲ ಪಡೆದವರು 4000 ಮಂದಿ! | ಮಂಗಳೂರು ಪಾಲಿಕೆಯಿಂದಲೆ ಯೋಜನೆಯ ದುರುಪಯೋಗ?

ಜಯನಗರ 4ನೇ ಬ್ಲಾಕ್‌ನಲ್ಲಿ ಬೀದಿಬದಿ ವ್ಯಾಪಾರಿಗಳು ರಸ್ತೆಗಳನ್ನು ಯಾವ ರೀತಿಯಲ್ಲಿ ಆಕ್ರಮಿಸಿಕೊಂಡಿದ್ದಾರೆಂಬುವುದರ ವಿಡಿಯೋವನ್ನು ಬಿಬಿಎಂಪಿ ಆಯುಕ್ತರು ನನಗೆ ತೋರಿಸಿದ್ದಾರೆ. ಹೀಗಾಗಿಯೇ ಅಂಗಡಿಗಳ ತೆರವಿಗೆ ಒಪ್ಪಿಗೆ ನೀಡಲಾಗಿತ್ತು. ಪರಿಹಾರ ಕಂಡುಕೊಳ್ಳಲು ಬೀದಿ ಬದಿ ವ್ಯಾಪಾರಿಗಳೊಂದಿಗೆ ಸರ್ಕಾರ ಸಭೆ ಕರೆಯಲಿದೆ ಎಂದು ತಿಳಿಸಿದರು.

ಬಿಬಿಎಂಪಿ ವಿರುದ್ಧ ವ್ಯಾಪಾರಸ್ಥರ ಆಕ್ರೋಶ

ಮತ್ತೆ ಬೆಂಗಳೂರಿನ ಶಾಪಿಂಗ್ ಹಾಟ್​ಸ್ಪಾಟ್​ಗಳಲ್ಲಿ ಜೆಸಿಬಿ ಸದ್ದು ಮಾಡಿದ್ದು, ಜಯನಗರದ  ಬಿಡಿಎ ಕಾಂಪ್ಲೆಕ್ಸ್ ಬಳಿ ಬೀದಿಬದಿ ವ್ಯಾಪಾರಿಗಳ ತೆರವು ಮಾಡಲಾಗಿದೆ. ಫುಟ್​​ಪಾತ್​​ನಲ್ಲಿದ್ದ ಅಕ್ರಮ ಶೆಡ್​, ಬಟ್ಟೆ ಅಂಡಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರವುಗೊಳಿಸಿದೆ. ಬಿಬಿಎಂಪಿ ಮಾರ್ಷಲ್‌ಗಳ ತಂಡ ಸ್ಥಳಕ್ಕೆ ಆಗಮಿಸಿ, ಜೆಸಿಬಿ‌ ಮೂಲಕ ಅಂಗಡಿಗಳನ್ನ ಕೆಡವಲಾಗಿದೆ. ಆ ಮೂಲಕ ಪಾದಚಾರಿಗಳ ಮಾರ್ಗ ಸುಗಮಗೊಳಿಸಲಾಗಿದೆ. ಅಂಗಡಿಗಳ ತೆರವಿನಿಂದ ಬೀದಿಬದಿ ವ್ಯಾಪಾರಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಜಯನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಬೀದಿಬದಿ ಅಂಗಡಿಗಳ ತೆರವು ಕಾರ್ಯಕ್ಕೆ ಬಿಬಿಎಂಪಿ ಅಧಿಕಾರಿಗಳ ವಿರುದ್ದ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ವ್ಯಾಪಾರಿ ಒಬ್ಬರು, ನಾನೊಬ್ಬ ಅಂಗವಿಕಲ. ಗಂಧದ ಕಟ್ಟಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದೆ. ಆದರೆ ಇವತ್ತು ನನ್ನ ಅಂಗಡಿಯನ್ನ ತೆರವು ಮಾಡಿದ್ದಾರೆ. ಮುಂದೆ ನನ್ನ ಜೀವನಕ್ಕೆ ಏನು ಮಾಡಲಿ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಬೀದಿಬದಿ ವ್ಯಾಪಾರಿಗಳಿಗೆ ಸಮಸ್ಯೆ ಎದುರಾಗಿದೆ ನಿರ್ದಿಷ್ಠ ಕ್ರಮಗಳನ್ನು ಕೈಗೊಳ್ಳಿ

ಉಸ್ತುವಾರಿ ಅಧಿಕಾರಿ ಸೋಮಶೇಖರ್​ ಮಾಧ್ಯಮಗಳೊಂದಿಗೆ ಮಾತನಾಡಿ, ಸುಮಾರು 200 ಅನಧಿಕೃತ ಮಳಿಗೆಗಳನ್ನು ತೆಗೆದುಹಾಕಲಾಗಿದೆ. ಈ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು ಅಕ್ರಮವಾಗಿ ವ್ಯಾಪಾರ ನಡೆಸುತ್ತಿದ್ದಾರೆ ಎಂದು ತಿಳಿಸಿ ಫುಟ್ ಪಾತ್ ತೆರವು ಮಾಡಬೇಕು ಎಂದು ಆರು ತಿಂಗಳ ಹಿಂದೆ ಹೇಳಲಾಗಿತ್ತು. ಬಳಿಕ ಸುಮಾರು ಮೂರು ತಿಂಗಳ ಹಿಂದೆ ಮತ್ತೆ ಎಚ್ಚರಿಕೆ ನೀಡಿಲಾಗಿತ್ತು.

ನವೆಂಬರ್ 4 ರಂದು, ನಾವು ಈ ಪ್ರದೇಶದಲ್ಲಿ ತೆರೆದ ಮೈಕ್ ಬಳಸಿ, ಅಕ್ರಮ ಮಳಿಗೆಗಳನ್ನು ತೆರವುಗೊಳಿಸುವುದಾಗಿ ನಾವು ಹೇಳಿದ್ದೇವು. ಆ ಹಿನ್ನೆಲೆ ಇಂದು ನಾವು ಫುಟ್‌ಪಾತ್‌ಗಳಲ್ಲಿನ ಅಕ್ರಮ ಅಂಗಡಿಗಳನ್ನು ನೆಲಸಮಗೊಳಿಸಿದ್ದೇವೆ ಎಂದು ಹೇಳಿದ್ದಾರೆ.

ಇಲ್ಲಿನ ವ್ಯಾಪಾರಿಗಳಿಗೆ ಇನ್ನು ಯಾವುದೇ ಪರ್ಯಾಯ ಜಾಗಗಳನ್ನು ನೀಡಲಾಗಿಲ್ಲ ಎಂದು ಆರೋಪವಾಗಿದೆ. ಆದಾಗ್ಯೂ ಪೊಲೀಸರ ನೆರವಿನೊಂದಿಗೆ ಸಂಕೀರ್ಣದ ಸುತ್ತಲಿನ ಎಲ್ಲ ಅತಿಕ್ರಮಣ ಫುಟ್‌ಪಾತ್‌ ಅಂಗಡಿಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಹೆಚ್ಚಿನ ಮಾರಾಟಗಾರರು ಹತ್ತಾರು ವರ್ಷಗಳಿಂದ ಇಲ್ಲಿ ಅಂಗಡಿಗಳನ್ನು ಹಾಕಿಕೊಂಡಿದ್ದಾರೆ. ಅವುಗಳನ್ನು ಈಗ ತೆರವುಗೊಳಿಸುವುದು ಅವರ ಜೀವನೋಪಾಯವನ್ನು ಕಸಿದುಕೊಳ್ಳುವಂತಾಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಬಿಬಿಎಂಪಿ 

ವಿಡಿಯೋ ನೋಡಿ:ದುಡಿಯುವ ಜನರ ಮಹಾಧರಣಿ ನವೆಂಬರ್ 26 ರಿಂದ 28 Janashakthi Media

Donate Janashakthi Media

Leave a Reply

Your email address will not be published. Required fields are marked *