ಕಸದಲ್ಲಿ ಸಿಕ್ಕ 5 ಲಕ್ಷದ ಡೈಮಂಡ್ ನೆಕ್ಲೇಸ್ ಮಾಲೀಕರಿಗೆ ಹಿಂತಿರುಗಿಸಿದ ಪೌರ ಕಾರ್ಮಿಕ

ಚೆನ್ನೈ: ಕಸದ ತೊಟ್ಟಿಯಲ್ಲಿ ಸಿಕ್ಕ ಐದು ಲಕ್ಷ ಮೌಲ್ಯದ ವಜ್ರದ ನೆಕ್ಲೇಸನ್ನು ಮಾಲೀಕನಿಗೆ ಹಿಂತಿರುಗಿಸುವ ಮೂಲಕ ಚೆನ್ನೈ ನಗರಪಾಲಿಕೆಯ ಪೌರ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ. ಡೈಮಂಡ್

ಚೆನ್ನೈನ ನಿವಾಸಿಯಾದ ದೇವರಾಜ್ ಎಂಬುವವರ ತಾಯಿ ತಮ್ಮ ಮೊಮ್ಮಗಳ ಮದುವೆಗಾಗಿ ಈ ಡೈಮಂಡ್ ನೆಕ್ಲೇಸನ್ನು ಮಾಡಿಸಿದ್ದರು. ಆದರೆ ಈ ನೆಕ್ಲೇಸ್ ಆಕಸ್ಮಿಕವಾಗಿ ಕಸದ ಬುಟ್ಟಿ ಸೇರಿದೆ. ಕೆಲವೊಮ್ಮೆ ಚಿನ್ನಾಭರಣಗಳು ಕಳೆದು ಹೋಗಿ ಎಷ್ಟೋ ಸಮಯದ ನಂತರ ಅದು ಕಳೆದು ಹೋಗಿರುವುದು ಮನೆಯವರ ಗಮನಕ್ಕೆ ಬರುತ್ತದೆ. ಆದರೆ ಇಲ್ಲಿ ಅದೃಷ್ಟವಶಾತ್ ಮನೆಯವರಿಗೆ ವಜ್ರದ ನೆಕ್ಲೇಸ್ ಕಾಣೆಯಾದ ಸಮಯದಲ್ಲೇ ಅದು ಕಳೆದು ಹೋಗಿರುವುದು ಗಮನಕ್ಕೆ ಬಂದಿದ್ದು ಎಲ್ಲೆಡೆ ಹುಡುಕಲು ಶುರು ಮಾಡಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ನಿಂತು ಮಾತನಾಡಿದ್ದಕ್ಕೆ ದಲಿತ ಯುವಕನ ಕೈ ಕಡಿದ ದುಷ್ಕರ್ಮಿಗಳು

ಅಲ್ಲದೇ ಪೌರ ಕಾರ್ಮಿಕರಿಗೂ ಈ ಬಗ್ಗೆ ಮಾಹಿತಿ ನೀಡಿ ಹುಡುಕಲು ಹೇಳಿದ್ದಾರೆ. ಇದಾದ ನಂತರ ಚೆನ್ನೈ ನಗರದ ಕಸ ಸಾಗಣೆ ಗುತ್ತಿಗೆ ಪಡೆದಿರುವ ಸಂಸ್ಥೆ ಹಾಗೂ ಅದರ ಕಾರ್ಮಿಕರಾದ ಜೆ ಅಂಥೋನಿಸ್ವಾಮಿ, ಚಾಲಕ ಅರ್ಬೇಸರ್ ಸುಮೀತ್ ಸೇರಿದಂತೆ ಎಲ್ಲರೂ ದೇವರಾಜ್ ಮನೆ ಸಮೀಪದ ಕಸದ ತೊಟ್ಟಿಯಲ್ಲಿ ವಜ್ರದ ನೆಕ್ಲೇಸ್‌ಗಾಗಿ ತೀವ್ರವಾಗಿ ಹುಡುಕಾಟ ನಡೆಸಿದಾಗ ಕಡೆಗೂ ನೆಕ್ಲೇಸ್ ಸಿಕ್ಕಿದೆ.

ಕಸದ ತೊಟ್ಟಿಯಲ್ಲಿ ಹೂವಿನ ಹಾರದ ಜೊತೆಗೆ ಈ ನೆಕ್ಲೇಸ್ ಸಿಕ್ಕಿ ಹಾಕಿಕೊಂಡಿತ್ತು. ಇದಾದ ನಂತರ ದೇವರಾಜ್ ಅವರು ತನ್ನ ನೆಕ್ಲೇಸ್ ಹುಡುಕಿ ಕೊಡುವಲ್ಲಿ ಸಹಾಯ ಮಾಡಿದ ಪೌರ ಕಾರ್ಮಿಕರು ಹಾಗೂ ಕಸ ಸಾಗಣೆ ಸಂಸ್ಥೆಯ ಸಿಬ್ಬಂದಿಗೆ ಕೃತಜ್ಞತೆ ತಿಳಿಸಿದ್ದಾರೆ.

ಇದನ್ನೂ ನೋಡಿ: ಸಕ್ಕರೆ ಕಾಯಿಲೆ : ಮಾತ್ರೆ ಇಲ್ಲದೆ ನಿಯಂತ್ರಣ ಮಾಡಿಕೊಳ್ಳಬಹುದೆ? – ಡಾ. ಅನೀಲ್ ಕುಮಾರ್ Janashakthi Media

Donate Janashakthi Media

Leave a Reply

Your email address will not be published. Required fields are marked *