ಹಾವೇರಿ: ತಾಲ್ಲೂಕಿನ ಗಾಂಧಿಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಅನೇಕ ಬಾರಿ ಬೃಹತ್ ತೆರನಾದ ಹೋರಾಟ ಮಾಡಿ ಮನವಿ ಸಲ್ಲಿಸಿದರು. ಎಸ್ಎಫ್ಐ ಹೋರಾಟದ ಪ್ರತಿಫಲವಾಗಿ ಕೆಎಸ್ಆರ್ಟಿಸಿ ಸಂಸ್ಥೆಯು ನಿರಂತರ ಸಂಚಾರಕ್ಕೆ ಸಿಟಿ ಬಸ್ಸು ಬಿಟ್ಟ ಹಿನ್ನೆಲೆ ಸೋಮವಾರ ರಂದು ಮಹಾವಿದ್ಯಾಲಯ ಎದುರು ಕಾರ್ಯಕರ್ತರು ಬಸ್ಸಿಗೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು.
ಎಸ್ಎಫ್ಐ ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೃಹತ್ ತೆರನಾದ ಪ್ರತಿಭಟಿಸಿ, ಬಸ್ ನಿಲ್ದಾಣ ಬಂದ್ ಮಾಡಿ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ಹಾಗೂ ನಗರ ಸಾರಿಗೆ ಪ್ರಾರಂಭಿಸಲು ಒತ್ತಾಯಿಸಲಾಗಿತ್ತು. ಪ್ರತಿಭಟನೆ ಸ್ಥಳಕ್ಕೆ ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕರು ಆಗಮಿಸಿ ಬಹುತೇಕ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.
ಎಸ್ಎಫ್ಐ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟದ ನಂತರ ಎಚ್ಚೆತು ಕೆಎಸ್ಆರ್ಟಿಸಿ ಸಂಸ್ಥೆ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಬಸ್ಸಿನ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ನಡೆಸಿ ಕಾಲೇಜಿಗೆ ಬಸ್ ಬಿಟ್ಟಿದ್ದು, ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಹಾಗೂ ನಗರ ಸಾರಿಗೆ ಪ್ರಾರಂಭಿಸಬೇಕು ಎಂಬ ಪ್ರಮುಖ ಬೇಡಿಕೆಯನ್ನು ಇಟ್ಟಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಾಂಧಿಪುರಕ್ಕೆ ವಿಭಾಗದ ಎಲ್ಲಾ ವಾಹನಗಳಲ್ಲಿ ನಿಲುಗಡೆ ನೀಡುವಂತೆ ಈಗಾಗಲೇ ಆದೇಶಿಸಲಾಗಿದೆ. ಆದರೆ ಸದರಿ ಕಾಲೇಜು ಮಾರ್ಗವಾಗಿ ಕಾರ್ಯಾಚರಣೆಯಲ್ಲಿರುವ ಎಲ್ಲಾ ಸಾರಿಗೆಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗೆ ನಿಲುಗಡೆ ನೀಡದೇ ಇರುವುದರಿಂದ ಹಾಗೂ ಚಾಲನಾ ಸಿಬ್ಬಂದಿಗಳು ವಿಭಾಗದ ವ್ಯಾಪ್ತಿಯಲ್ಲಿ ಸಾಯಂಕಾಲ 6:00 ಗಂಟೆಯ ನಂತರ ಬಸ್ ಪಾಸ್ ಅನುಮತಿಸುತ್ತಿಲ್ಲವೆಂದು ವಿದ್ಯಾರ್ಥಿ ಸಂಘಟನೆಗಳು ಪದೇ ಪದೇ ಪ್ರತಿಭಟನೆ ಮಾಡುತ್ತಿರುತ್ತಾರೆ. ಬಸ್ಸು
ಇದನ್ನೂ ಓದಿ : ಪಿಡಿಒ ಹುದ್ದೆ ನೇಮಕಾತಿ ಪರೀಕ್ಷೆ: ಬ್ಲೂಟೂತ್ ಸಾಧನ ಬಳಸಿ ಅಕ್ರಮ – ಅಭ್ಯರ್ಥಿ ಪೊಲೀಸ್ ವಶ
ಆದ್ದರಿಂದ. ಹಾವೇರಿಯಿಂದ ಗುತ್ತಲ/ಹೊಸರಿತ್ತಿ ಮಾರ್ಗವಾಗಿ ಹಾಗೂ ಮುಂದಕ್ಕೆ ಸಂಚರಿಸುವ (ಹೋಗುವಾಗ/ಬರುವಾಗ) ಎಲ್ಲಾ ಸಾರಿಗೆಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಾಂಧಿಪುರಕ್ಕೆ ಕಡ್ಡಾಯವಾಗಿ ನಿಲ್ಲಿಸಿ, ವಿದ್ಯಾರ್ಥಿಗಳು/ಸಾರ್ವಜನಿಕ ಪ್ರಯಾಣಿಕರನ್ನು ಹತ್ತಿಸಿ/ಇಳಿಸಿಕೊಂಡು ಕಾರ್ಯಾಚರಣೆ ಮಾಡುವಂತೆ ಸದರಿ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುವ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲು ಸೂಚಿಸಲಾಗಿದೆ. ಬಸ್ಸು
ಮುಂದುವರೆದು, ಹಾವೇರಿ ಘಟಕದ ಅನುಸೂಚಿ ಸಂಖ್ಯೆ-159/160 ರಲ್ಲಿ ಆರ್.ಟಿ.ಓ ಕಚೇರಿಯಿಂದ ಸಿಂದಗಿ ಶಾಂತವೀರೇಶ್ವರ ಕಾಲೇಜ, ಲಕಮಾಪುರ, ಎಲ್.ಐ.ಸಿ. ಹಾವೇರಿ ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್. ಯತ್ನಳ್ಳಿ, ಗಾಂಧೀಪುರ ಕಾಲೇಜ ಮಾರ್ಗವಾಗಿ ಅಗಡಿಗೆ 16 ಸರತಿಗಳನ್ನು ಕಾರ್ಯಾಚರಣೆ ಮಾಡಲು ನಮೂನೆ-4 ನ್ನು ನೀಡಿದ್ದು, ಸಾರ್ವಜನಿಕರು/ವಿದ್ಯಾರ್ಥಿಗಳಿಂದ ಯಾವುದೇ ದೂರುಗಳು ಬರದಂತೆ ಸದರಿ ಅನುಸೂಚಿಗಳನ್ನು ನಮೂನೆ-4 ರಂತೆ ವ್ಯವಸ್ಥಿತವಾಗಿ ಕಾರ್ಯಾಚರಣೆ ಮಾಡಲು ತಿಳಿಸಲಾಗಿದೆ ಎಂದು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆದೇಶ ಹೋರಡಿಸಿದ್ದಾರೆ.
ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದ್ದು. ಅನೇಕ ಜನ ಸಾಮಾನ್ಯರ ಬೇಡಿಕೆ ಕೂಡವಾಗಿದ್ದು ಹಾಗೂ ಅನೇಕ ಬಾರಿ ಮಾದ್ಯಮ ಬಳಗವು ಬಸ್ಸಿನ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ವರದಿ ಮಾಡುವ ಮೂಲಕ ನಗರ ಸಾರಿಗೆ ಬೇಡಿಕೆಯನ್ನು ಒತ್ತಾಯಿಸಿದರು. ಹಾವೇರಿ ನಗರ ವಿಶಾಲವಾಗಿ ವಿಸ್ತೀರ್ಣವಾಗಿ ಬೆಳೆಯುತ್ತಿದ್ದು ಪ್ರಮುಖವಾಗಿ ನಗರ ಸಾರಿಗೆ ಬಸ್ಸಿನ ಅವಶ್ಯಕತೆಯನ್ನು ಪೂರೈಸಿದೆ ಸಾರಿಗೆ ಸಂಸ್ಥೆಗೆ ವಿದ್ಯಾರ್ಥಿ ಸಮುದಾಯದ ಪರವಾಗಿ ಎಸ್ಎಫ್ಐ ಕೃತಜ್ಞತೆಯನ್ನು ಸಲ್ಲಿಸುತ್ತದೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಕಾಲೇಜ್ ಘಟಕ ಅಧ್ಯಕ್ಷ ತಿರಕಪ್ಪ ಬಾತಿ, ಕಾರ್ಯದರ್ಶಿ ಲಕ್ಷ್ಮಿ ಲಮಾಣಿ, ಉಪಾಧ್ಯಕ್ಷೆ ಲಿಂಗರಾಜ ಸಿ ಎಮ್, ಜ್ಯೋತಿ ಪಟ್ಟಣಶೆಟ್ಟಿ, ಸಂಜನಾ ಬಾರ್ಕಿ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಉಪಸ್ಥಿತರಿದ್ದರು. ಬಸ್ಸು
ಇದನ್ನೂ ನೋಡಿ : ಚಲನಚಿತ್ರ ವಾಣಿಜ್ಯ ಮಂಡಳಿ |ಲೈಂಗಿಕ ದೌರ್ಜನ್ಯ ತಡೆ? ಸಮಿತಿ ರಚಿಸಿ ತಡೆ ಹಿಡಿದದ್ದು ಯಾಕೆ? – ಕವಿತಾ ಲಂಕೇಶ್