CITU ರಾಜ್ಯ ಸಮ್ಮೇಳನ |ಎಲ್ಲ ಶೋಷಣೆಯಿಂದಲೂ ಮುಕ್ತವಾದ ಸಮಾಜ ನಿರ್ಮಾಣ ಸಿಐಟಿಯು ಗುರಿ- ಕೆ. ಹೇಮಲತಾ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಶ್ರಮ ಶಕ್ತಿ ನೀತಿ ವಿರುದ್ಧ ಹೋರಾಟಕ್ಕೆ ಕರೆ
ಹಾಸನ: ನವೆಂಬರ್‌ 13ರಂದು ಆರಂಭವಾಗಿರೊ ಕಾರ್ಮಿಕ ಸಂಘಟನೆ ಸಿಐಟಿಯು 16 ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಐಟಿಯು ರಾಷ್ಟ್ರೀಯ ಅದ್ಯಕ್ಷರಾದ ಹೇಮಲತಾ, ಕಾರ್ಮಿಕ ವಿರೋಧಿಯಾದ ಕೇಂದ್ರ ಸರ್ಕಾರದ ಶ್ರಮ ಶಕ್ತಿ ನೀತಿಗಳ ವಿರುದ್ದ ಹೋರಾಟ ತೀವೃಗೊಳ್ಳಬೇಕು ಎಂದು ಕರೆ ನೀಡಿದರು. ಶೋಷಣೆ

ಕಾರ್ಮಿಕರು ಶತಮಾನಗಳಿಂದ ಹೋರಾಟದ ಮೂಲಕ ಪಡೆದು ಹಕ್ಕುಗಳನ್ನ ಕಾನೂನು ತಿದ್ದುಪಡಿ ಮೂಲಕ ನಾಶಮಾಡಲಾಗುತ್ತಿದೆ. ಶ್ರಮ ಶಕ್ತಿ ಯೋಜನೆ ಮೂಲಕ‌ ಕಾರ್ಮಿಕ ಸಚಿವಾಲಯವನ್ನೇ ನಿತ್ರಾಣಗೊಳಿಸೊ ಕೆಲಸ ನಡೆಯುತ್ತಿದೆ, ಕಾರ್ಮಿಕ ಇಲಾಖೆ ಕಾರ್ಮಿಕರ ರಕ್ಷಣೆ ಮಾಡೋ ಬದಲು ಮಾಲೀಕರ ಪರವಾಗಿ ವಕಾಲತ್ತು ವಹಿಸೊ ಸಂಪರ್ಕ ಸಾಧನ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ಶ್ರಮ ಶಕ್ತಿ ಯೋಜನೆ ಸಂವಿಧಾನಾತ್ಮಕ ಹಕ್ಕುಗಳನ್ನು ನಾಶ ಮಾಡುವ ಮನುಸ್ಮೃತಿ ಆದಾರಿತ ನೀತಿಗಳ ಜಾರಿಗೆ ಸಂಚು ರೂಪಿಸಿದೆ. ಮಹಿಳಾ ಶೋಷಣೆ, ದೀನ ದಲಿತರ ಶೋಷಣೆ ಈ ನೀತಿಯಲ್ಲಿ ಅಡಗಿದೆ. ಇದು ಆರ್‌ಎಸ್‌ಎಸ್‌ ನೀತಿಗಳನ್ನು ದುಡಿಯೊ ಜನರ ಮೇಲೆ ಹೇರೋ ಯತ್ಬ ಎಂದು ಅವರು ಕಿಡಿ ಕಾರಿದರು.

ಇದನ್ನೂ ಓದಿ: ತ್ರಿಶೂರ್ | ಬೀದಿ ನಾಯಿಗಳ ದಾಳಿಯಿಂದ : ತ್ರಿಶೂರ್ ವನ್ಯಜೀವಿ ಉದ್ಯಾನದಲ್ಲಿ 10 ಜಿಂಕೆಗಳ ಸಾವು

ಕೇಂದ್ರ ಸರ್ಕಾರ ಕಳೆದ ಹನ್ನೊಂದು ವರ್ಷಗಳಿಂದ ಕಾರ್ಮಿಕ ಸಂಘಟನೆಗಳ ಜೊತೆಗೆ ಕೇಂದ ಸರ್ಕಾರ ಕನಿಷ್ಠ ಸಮಾಲೋಚನೆ ನಡೆಸಲಿಲ್ಲ, ಕಾರ್ಮಿಕ ಹಕ್ಕುಗಳ ಜಾರಿ ಬಗ್ಗೆ ಭಾರತದ ಕಾರ್ಮಿಕ ಸಂಘಟನೆಗಳ ಸಮ್ಮೇಳನವನ್ನೇ ನಡೆಸಿಲ್ಲ ಎಂದು ಅವರು ಅಸಮದಾನ ಹೊರ ಹಾಕಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅದಿಕಾರ ಬಂದ ನಂತರ ಕಾರ್ಮಿಕ ಕಾನೂನಿನ ಉಲ್ಲಂಘನೆ ಕ್ರಿಮಿನಲ್ ಅಪರಾಧ ಅಲ್ಲ ಎನ್ನೋ ನೀತಿ ಜಾರಿಯಾಗಿದೆ, ಬದಲಾಗಿ ಅದು ಕೇವಲ ದಂಡಕ್ಖೆ ಸೀಮಿತಗೊಳಿಸಲಾಗಿದೆ, ಇದಕ್ಕೆ ಬದಲಾಗಿ ಬದಲಾಗಿ ಕಾರ್ಮಿಕರು ಹೋರಾಟಕ್ಕೆ ಕರೆ ನೀಡಿದರೆ ಅದನ್ನ ಗೃಹ ಬಂಧನಕ್ಕೆ ಒಳಪಡಿಸೊ ಮೂಲಕ ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನ ನಾಶಮಾಡಲಾಗುತ್ತಿದೆ. ಇದು ಕೇವಲ ಬಿಜೆಪಿ ಅದಿಕಾರದಲ್ಲಿ ಇರೋ ರಾಜ್ಯದಲ್ಲಿ ಮಾತ್ರ ಅಲ್ಲ ಕಾಂಗ್ರೆಸ್ ಆಡಳಿತ ರಾಜ್ಯದಲ್ಲೂ ಕೂಡ ಇದೇ ನೇಯುತ್ತಿದೆ.

ಸಿಐಟಿಯು 17 ನೆ ರಾಷ್ಟ್ರೀಯ ಸಮ್ಮೇಳನ ಕಾರ್ಮಿಕರ ಮೇಲಿನ ಈ ದಾಳಿಗಳನ್ನ ಗುರ್ತಿಸಿ ಹೋರಾಟಕ್ಕೆ ಕರೆ ನೀಡಿತ್ತು, ಜಗತ್ತಿನ ಕೋಟಿ ಕೋಟಿ ದುಡಿಯುವ ವರ್ಗ ಸಮಸ್ಯೆಗೆ ಸಿಲುಕಿದೆ. ಕೂಲಿ ಅಭದ್ರತೆ, ಕೆಲಸದ ಅಭದ್ರತೆ, ಸಾಮಾಜಿಕ ಅಭದ್ರತೆ ಕಾರ್ಮಿಕರನ್ನ ಆತಂಕದಲ್ಲಿ ಇರುವಂತೆ ಮಾಡಿದೆ. ಇದಕ್ಕೆ ಬಂಡವಾಳ ಶಾಹಿ ವ್ಯವಸ್ಥೆಯ ಬಿಕ್ಕಟ್ಟು ಕಾರಣ ಆಗಿದ್ದು, ಈ ಬಿಕ್ಕಟ್ಟಿನ ಹೊರೆಯನ್ನ ಕಾರ್ಮಿಕರ ಮೇಲೆ ವರ್ಗಾವಣೆ ಮಾಡಿ ಶೋಷಣೆ ಮಾಡಲಾಗುತ್ತಿದೆ ಎಂದರು.

ಶೋಷಣೆ ವಿರೋದಿಸಿ ಜಗತ್ತಿನ ದುಡಿಯೊ ವರ್ಗದ ಹೋರಾಟ ಕೂಡ ಹೆಚ್ಚಾಗಿದೆ, ಎಲ್ಲಾ ವರ್ಗದ ಜನರು ಹೋರಾಟಕ್ಕೆ ಇಳಿಯುತ್ತಿದ್ದಾರೆ, ಆದರೆ ದುಡಿಯೊ ಜನರು ಹೋರಾಟಕ್ಕೆ ಇಳಿದರೆ ಬೇರೆ ಬೇರೆ ರೀತಿಯ ಶಡ್ಯಂತ್ರ ದ ಮೂಲಕ ಅವರ ಹೋರಾಟ ಒಡೆಯಲು ದಿಕ್ಕು ತಪ್ಪಿಸಲು ಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್. ಉಮೇಶ್, ಹಿರಿಯ ಕಾರ್ಮಿಕ ನಾಯಕರಾದ ವಿಜೆಕೆ ನಾಯರ್, ವಿ.ಸುಕುಮಾರ್, ಹಾಸನ ಜಿಲ್ಲಾಧ್ಯಕ್ಷ ಧರ್ಮೇಶ್, ಕಾರ್ಯದರ್ಶಿ ಪುಷ್ಪಾ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಪರಮಶಿವಯ್ಯ ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ ವಹಿಸಿದ್ದರು. ವಿವಿಧ ಜಿಲ್ಲೆಗಳಿಂದ ಸಿಐಟಿಯು ನಾಯಕರು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.

ಇದನ್ನೂ ನೋಡಿ: CITU 16 ನೇ ರಾಜ್ಯ ಸಮ್ಮೇಳದ ಉದ್ಘಾಟನೆಯ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *