ಬೆಂಗಳೂರು : ಎಸ್‌ಕೆಎಂ ನೇತೃತ್ವದಲ್ಲಿ ನಡೆದ ಐತಿಹಾಸಿಕ ರೈತರ ಹೋರಾಟಕ್ಕೆ ಮಣಿದ ಮೋದಿ ಸರಕಾರ ಕೃಷಿ ಕಾಯಿದೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಲು ಮತ್ತು ದೇಶದ ಜನತೆಯಲ್ಲಿ ಕ್ಷಮೆಯಾಚಿಸಲು ಪ್ರಧಾನಿಗೆ ಅನಿವಾರ್ಯತೆ ಸೃಷ್ಟಿಸಿದ ಚಳುವಳಿಯಾಗಿದೆ.
ಕಳೆದ ವರ್ಷ ತಮ್ಮ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ತಮ್ಮ ಸರ್ಕಾರ ಹಿಂಪಡೆಯಲಿದೆ ಎಂದು ಪ್ರಧಾನಿಯವರು ಮಾಧ್ಯಮಗಳ ಮೂಲಕ ನೀಡಿದ ಹೇಳಿಕೆಯನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಗಮನಿಸಿದ್ದು, ಇದಕ್ಕೆ ಸಂಸತ್ತಿನ ಕಾರ್ಯವಿಧಾನಗಳ ಅನ್ವಯ ಶಾಸನವನ್ನು ತರಬೇಕಾಗಿದೆ ಎಂದು ಆಗ್ರಹಿಸಿದೆ.
ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ರೈತರು ನಡೆಸಿದ ನಿರಂತರ ಹೋರಾಟವು ಆಳರಸರು ಒಂದು ಹೆಜ್ಜೆ ಹಿಂದೆ ಇಡುವಂತೆ ಮಾಡಿದೆ. ಇದಲ್ಲದೆ ಪ್ರಧಾನಿ ರಾಷ್ಟ್ರದ ಕ್ಷಮೆಯಾಚಿಸುವಂತೆ ಮಾಡಿದೆ. ಸಂಪತ್ತು ಉತ್ಪಾದಿಸುವ ವರ್ಗ, ಕಾರ್ಮಿಕರು ಮತ್ತು ರೈತರು ಆಡಳಿತದ ಜನವಿರೋಧಿ ನೀತಿಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ.
ಅದೇ ಸಮಯದಲ್ಲಿ ಉದ್ದೇಶಿತ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂತೆಗೆದುಕೊಳ್ಳುವ ವಿಷಯದ ಬಗ್ಗೆ ಮತ್ತು ಎಲ್ಲಾ ಬೆಳೆಗಳಿಗೆ ಖಾತರಿಪಡಿಸಿದ ಉತ್ಪಾದಕ ವೇಚ್ಚ + 50% ದರದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧವಾಗಿ ಜಾರಿಗೋಳಿಸುವ ವಿಷಯದ ಕುರಿತು ಪ್ರಧಾನಿಯವರು ಮೌನವಾಗಿದ್ದಾರೆ. ರೈತರ ಹೋರಾಟದ ಪ್ರಮುಖ ಬೇಡಿಕೆಗಳುನ್ನು ಹಾಗು ಸಮಸ್ಯೆಗಳು ಬಗ್ಗೆ ಹರಿಸಲು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಸಿಐಟಿಯು ಅಗ್ರಹಿಸಿದೆ.
ಈ ಹೋರಾಟದಲ್ಲಿ ಸುಮಾರು 700 ರೈತರು ಪ್ರಾಣ ತ್ಯಾಗ ಮಾಡಿದ್ದಾರೆ. ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರ ಮತ್ತು ಪತ್ರಕರ್ತನ ಭೀಕರ ಹತ್ಯೆಯ ಆರೋಪಿ ಪ್ರಮುಖ ಆರೋಪಿಯಾಗಿರುವ ಶ್ರೀ ಅಜಯ್ ಮಿಶ್ರಾ ತೇನಿ ಇನ್ನೂ ಮೋದಿ ಸಂಪುಟದಲ್ಲಿ ಸಚಿವರಾಗಿ ಮುಂದುವರಿದಿದ್ದಾರೆ. ಕೊಲೆ ಆರೋಪಿಗಳನ್ನು ಕೂಡಲೇ ಬಂಧನಕ್ಕೆ ಒಳಪಡಿಸಬೇಕು. ಸರ್ಕಾರದ ರೈತ ವಿರೋಧಿ – ಜನ ವಿರೋಧಿ ನೀತಿಗಳನ್ನು ಹಿಮ್ಮೆಟ್ಟುವಿಕೆಯನ್ನು ಸಾಧಿಸಿದ ರೈತರ ಐತಿಹಾಸಿಕ ಐಕ್ಯ ಹೋರಾಟಕ್ಕಾಗಿ ಹೋರಾಟಕ್ಕಾಗಿ ಸಿಐಟಿಯು ರೈತರನ್ನು ಅಭಿನಂದಿಸುತ್ತಾ, ಸರ್ಕಾರದ ಕಾರ್ಮಿಕ-ವಿರೋಧಿ ರೈತ-ಜನವಿರೋಧಿ ನೀತಿಗಳನ್ನು ಬದಲಾಯಿಸಲು ಕಾರ್ಮಿಕ- ರೈತ ಜಂಟಿ ಕ್ರಮಗಳು ಮತ್ತು ಹೋರಾಟಗಳನ್ನು ಬಲಪಡಿಸುವ ಸಂಕಲ್ಪವನ್ನು ಸಿಐಟಿಯು ಪುನರುಚ್ಚರಿಸುತ್ತೇವೆ.
ಈ ನಿಟ್ಟಿನಲ್ಲಿ ಭವಿಷ್ಯದ ಹೋರಾಟದ ಹಾದಿಯಲ್ಲಿ ಎಸ್‌ಕೆಎಂ ಯಾವುದೆ ಜನ ಹಿತದ ನಿರ್ಧಾರಗಳನ್ನು ತೆಗೆದುಕೊಂಡರೂ ಸಿಐಟಿಯು ತನ್ನ ಬೇಂಬಲವನ್ನು ಮುಂದುವರಿಸುವುದಾಗಿ ತಿಳಿಸಿದೆ. ಬಿಜೆಪಿ/ಎನ್‌ಡಿಎ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟಗಳನ್ನು ತೀವ್ರಗೊಳಿಸಲು ಮತ್ತು ಏಕತೆಯನ್ನು ಬಲಪಡಿಸಲು ಸಿಐಟಿಯು ಕಾರ್ಮಿಕ ವರ್ಗ ಮತ್ತು ರೈತರಿಗೆ ಕರೆ ನೀಡಿದೆ. ರಾಜ್ಯ ಸರ್ಕಾರ ರೈತ – ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಹಿಂದಕ್ಕೆ ಪಡೆಯುವಂತೆ ಸಿಐಟಿಯು ರಾಜ್ಯ ಸಮಿತಿ ಸರ್ಕಾರವನ್ನು ಅಗ್ರಹಿಸಿದೆ.ರಾಜ್ಯ ಸರ್ಕಾರ ಜಾರಿಗೆ ತಂದಿರುವ ಏಪಿಎಂಸಿ ಕಾಯಿದೆ, ಭೂಸುಧಾರಣಾ ಕಾಯಿದೆ, ಮತ್ತು ಜಾನುವಾರು ಹತ್ಯೆ ನಿಷೇದ ಕಾಯಿದೆಗಳಿಗೆ ತಂದಿರುವ ತಿದ್ದುಪಡಿಗಳನ್ನು ಹಿಂಪಡೆಯದೆ ಕರ್ನಾಟಕ ರಾಜ್ಯದ ರೈತರ ಸಂಕಟಗಳು ಬಗೆಹರಿಯಲಾರವು ಎಂದಿದೆ. ಈ ಎಲ್ಲಾ ರೈತ ವಿರೋಧಿ ಕಾಯಿದೆಗಳನ್ನು ಹಿಂಪಡಯುವಂತೆ ರಾಜ್ಯ ಸರ್ಕಾರವನ್ನು ಅಗ್ರಹಿಸುತ್ತದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಿನಾಕ್ಷಿ ಸುಂದರಂ ತಿಳಿಸಿದ್ದಾರೆ.