ತುಮಕೂರು : ಅಸಂಘಟಿತ- ಗುತ್ತಿಗೆ ಕಾರ್ಮಿಕರು- ಸ್ಕೀಮ್, ಪಂಚಾಯತ್ ನೌಕರರ ಸಾಮಾಜಿಕ ಭದ್ರತೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಹಮ್ಮಿಕೊಂಡಿದೆ.
ಸಿಐಟಿಯು ಅಖಿಲ ಭಾರತ ಮಾಜಿ ಅಧ್ಯಕ್ಷರು- ಸಂಸತ್ ಸದಸ್ಯರಾಗಿದ್ದ ಇ.ಬಾಲನಂದನ್ ಹಾಗೂ ಸಿಐಟಯು ಕರ್ನಾಟಕ ರಾಜ್ಯಅಧ್ಯಕ್ಷ ಮಾಜಿ ಶಾಸಕ, ಹಿರಿಯ ಸ್ವಾತಂತ್ರ ಹೋರಾಟಗಾರರಾಗಿದ್ದ ಸೂರ್ಯನಾರಾಯಾಣರಾವ್ ಅವರ ಜನ್ಮ ಶತಮಾನೋತ್ಸವದ ವರ್ಷಾಚಾರಣೆ ಅಂಗವಾಗಿ ಈ ವಿಚಾರ ಸಂಕಿರಣವನ್ನು ಅಯೋಜಿಸಿದೆ.
ನವೆಂಬರ್ 09 ರಂದು ಬೆಳಿಗ್ಗೆ- 10.30ಕ್ಕೆ ನಗರದ ಭಾಲಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಹಿರಿಯ ಕಾರ್ಮಿಕ ಧುರಿಣ, ಸಿಐಟಿಯು ರಾಜ್ಯ ಉಪಾಧ್ಯಕ್ಷ ವಿಜೆಕೆ ನಾಯರ್ ವಿಚಾರ ಸಂಕಿರಣವನ್ನುಉಧ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಚಿಂತಕ ಪ್ರೋ; ಕೆ.ದೊರೈರಾಜು, ಜಿಲ್ಲಾ ಕ.ಸಾ.ಪ ನಿಕಟ ಪೂರ್ವ ಅಧ್ಯಕ್ಷ ಬಾ.ಹ. ರಮಾಕುಮಾರಿ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಿನಾಕ್ಷಿ ಸುಂದರಂ ಭಾಗವಹಿಸಲಿದ್ದಾರೆ.
ಸುಪಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ, ಎಸ್. ರಮೇಶ್–ಗುತ್ತಿಗೆಕಾರ್ಮಿಕರು ಮತ್ತು ಸಾಮಾಜಿಕ ಭದ್ರತೆ ಬಗ್ಗೆ, ಸಿಐಟಿಯು ರಾಜ್ಯ ಕಾರ್ಯದರ್ಶಿ, ಕಟ್ಟಡಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಕೆ. ಮಹಾಂತೇಶ್“ ಅಸಂಘಟಿತ ಕಾರ್ಮಿಕರು ಮತ್ತು ಸಾಮಾಜಿಕ ಭಧ್ರತೆ ಬಗ್ಗೆ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯರ್ಶಿ ಹೆಚ್. ಎಸ್. ಸುನಂದ“ ಅಂಗನವಾಡಿ-ಬಿಸಿಊಟ- ಅಶಾ & ಸ್ಕೀಂ ನೌಕರರು– ಮತ್ತು ಸಾಮಾಜಿಕ ಭದ್ರತೆ ಬಗ್ಗೆ ಹಾಗೂ ಗ್ರಾಮ ಪಂಚಾಯತ್ನೌಕರರ ಸಂಘದ ರಾಜ್ಯ ಅಧ್ಯಕ್ಷ ಮಂಟನಗೌಡ “ ಪಂಚಾಯತ್ ನೌಕರರು – ಸಾಮಾಜಿಕ ಭದ್ರತೆ ಬಗ್ಗೆ ವಿಚಾರಗಳನ್ನು ಮಂಡಿಸಲಿದ್ದಾರೆ.
ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾಅಧ್ಯಕ್ಷ ಸೈಯದ್ ವಹಿಸಲಿದ್ದಾರೆ. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲ, ಜಿಲ್ಲಾ ಖಜಾಂಚಿ ಎ. ಲೊಕೇಶ್, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು, ಗ್ರಾಮ ಪಂಚಾಯತ್ ನೌಕರ ಸಂಘದ ಜಿ. ಪ್ರ. ಕಾರ್ಯದರ್ಶಿ ನಾಗೇಶ್, ಕಟ್ಟಡ ಮತ್ತುಇತರೆ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾಅಧ್ಯಕ್ಷ ಬಿ. ಉಮೇಶ್ , ಪುಟ್ಪಾತ್ ವ್ಯಾಪಾರಿಗಳ ಸಂಘದ ,ಪ್ರ. ಕಾರ್ಯದರ್ಶಿ ವಸಿಂ ಅಕ್ರಂ, ಅಕ್ಷರ ದಾಸೋಹ ನೌಕರರ ಸಂಘ ದ ಕೆಂಚಮ್ಮ, ಸ್ವಚ್ಚವಾಹಿ ನೌಕರರ ಸಂಘದ ಸುಜಾತಾ, ಜಿಲ್ಲಾ ಬೀಡಿಕಾರ್ಮಿಕರ ಸಂಘದ ಅಬ್ದುಲ್ ಮುನಾಪ್. ಮನೆ ಕೆಲಸಗಾರರ ಸಂಘದ ಅನುಸೂಯ, ಟೈಲರ್ ಗಳ ಸಂಘದ ಗಣೇಶ್, ಕಸದ ವಾಹನ ಚಾಲಕರ ಸಂಘದ ಮಾರುತಿ, ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ಪ್ರಕಾಶ್, ತುಮಕೂರು ಪೌರಕಾರ್ಮಿಕರ ಸಂಘದ,ಮಂಜುನಾಥ್, ನೀರು ಸರಬರಾಜು ನೌಕರರ ಸಂಘದ ಕೆ. ಕುಮಾರ್, ಮೇಕ್ಯಾನಿಕ್ ಗಳ ಸಂಘದ ಕೃಷ್ಣಮೂರ್ತಿ, ಆಟೊಚಾಲಕರ ಸಂಘದ ಇಮ್ತಿಯಾಜ್, ಮತ್ತಿತರು ಭಾಗವಹಿಸಲಿದ್ದಾರೆ.