ಬೆಂಗಳೂರು :ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು, ಜನಪರ ಪರ್ಯಾಯ ನೀತಿ ಗಳನ್ನು ಜಾರಿಗೊಳಿಸಬೇಕು ಹಾಗೂ ದುಡಿಯುವ ವರ್ಗದ ಹಕ್ಕನ್ನು ಸಂರಕ್ಷಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ‘ದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿ’ ಎಂಬ ಘೋಷಣೆಯೊಂದಿಗೆ ದೇಶಾದ್ಯಂತ ಸಿಐಟಿಯು ನಡೆಸುತ್ತಿರುವ ಸಹಿಸಂಗ್ರಹದಲ್ಲಿ ರಾಜ್ಯದ ಕಾರ್ಮಿಕರಿಂದ ಉತ್ತಮ ಸ್ಪಂದನೆ ದೊರೆತಿದೆ.
ಸಿಐಟಿಯು ಅಖಿಲ ಭಾರತ ಸಮಿತಿಯ ಕರೆಯಂತೆ ಸ್ವಾಮಿ ವಿವೇಕಾನಂದ ಜಯಂತಿ ದಿನದಿಂದ ಮಹಾತ್ಮ ಗಾಂಧಿ ಹುತಾತ್ಮ ದಿನದ ವರೆಗೆ ಸಿಐಟಿಯು ನೇತೃತ್ವದಲ್ಲಿ ಸಹಿ ಸಂಗ್ರಹ ನಡೆಯುತ್ತಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಮಂಡ್ಯ, ರಾಮನಗರ, ಮೈಸೂರು, ಚಾಮರಾಜ ನಗರ, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಧಾರವಾಡ, ಬೆಳಗಾವಿ, ಗದಗ್, ವಿಜಯಪುರ, ಬಾಗಲಕೋಟೆ, ಕೊಪ್ಪಳ, ವಿಜಯನಗರ, ಬಳ್ಳಾರಿ, ಕಲಬುರ್ಗಿ, ಯಾದಗಿರಿ, ಬೀದರ್, ರಾಯಚೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾವೇರಿಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ.
ತುಮಕೂರು : ದೇಶದಲ್ಲಿ ಜನ, ರೈತ, ಕಾರ್ಮಿಕರು, ಮಹಿಳೆಯುರು, ವಿದ್ಯಾರ್ಥಿ ಯುವಜನರು ಆಳರಸರ ನೀತಿಗಳಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ, ನಿರಂತರ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ಹೆಚ್ಚುತ್ತಿರುವ ನಿರುದ್ಯೋಗ, ಅಸಂಘಟಿತರಿಗೆ ಸಿಗದ ಸಾಮಾಜಿಕ ಭದ್ರತೆ, ದುಡಿಯುವವರಿಗೆ ಸಿಲುಕದ ಬದುಕಲು ಯೋಗ್ಯವಾದ ಕೂಲಿ ಈ ಪ್ರಶ್ನೆಗಳ ಜೊತೆಗೆ ಗುತ್ತಿಗೆ ಕಾರ್ಮಿಕರ ಸಂಕಷ್ಟಗಳು ಹಾಗೂ ಸರ್ಕಾರದ ಸ್ಕೀಂಗಳಲ್ಲಿ ಕೆಲಸ ಮಾಡುವ ನೌಕರರ ಬದುಕು ಸಂಕಷ್ಟಗಳ ಸರಮಾಲೆಯಿಂದ ತುಂಬಿದೆ. ಈ ಎಲ್ಲಾ ಬದುಕಿನ ಪ್ರಶ್ನೆಗಳನ್ನು ನಿರ್ದರಿಸುವ ನೀತಿಗಳು ರೂಪಿಸುವ ಕೇಂದ್ರ ಸರ್ಕಾರವು ಜನ ಹಿತ ಮರೆತ ಕಾರಣವೆ ಹಿಗಾಗುತ್ತಿದೆ. ಜನ ಹಿತ ಮರೆತ ರಾಜಕಾರಣ ಬದಲಿಸದೆ ಈ ಸಂಕಷ್ಟಗಳಿಗೆ ಪರಿಹಾರ ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಸಿಐಟಿಯು ನಡೆಸುತ್ತಿರುವ ಕೋಟಿ ಸಹಿ ಸಂಗ್ರಹ ಕೈಜೊಡಿಸಿ ಸಹಕಾರಿಸುವಂತೆ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಸೈಯದ ಮುಜೀಬ್ ಅವರು ಮನವಿ ಮಾಡಿದುರು. ಸಿಐಟಿಯು
ಅವರು, ಅಂತರಸನ ಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಿಐಟಿಯು ರಾಜ್ಯದ್ಯಂತ ನಡೆಸುತ್ತಿರುವ ಕೋಟಿ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು . ಮುಂದುವರಿದು ಮಾತನಾಡಿದ ಅವರು ಕೈಗಾರಿಕಾ ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ, ಹಾಗು ಕಾರ್ಮಿಕ ಸಂಹಿತೆಗಳ ಜಾರಿ ಮೂಲಕ ಕೇಂದ್ರ ಸರ್ಕಾರ ಮತ್ತೆ ಗುಲಾಮಿ ಸಮಾಜಕ್ಕೆ ಹಿಂಚಲನೆಗೆ ಸರ್ಕಾರ ಸಾಗುತ್ತಿದೆ ಇದು ಸಮಾಜದ ಮುನ್ನಡೆಗೆ ಮಾರಕ ಎಂದರು. ಸಿಐಟಿಯು
ಇದನ್ನು ಓದಿ : ಕೇಂದ್ರ ಕಾಂಗ್ರೆಸ್ v/s ಯುಪಿ ಕಾಂಗ್ರೆಸ್ | ಮಕರ ಸಂಕ್ರಾಂತಿಯಂದು ರಾಮಮಂದಿರಕ್ಕೆ ತೆರಳಲಿರುವ ರಾಜ್ಯ ಘಟಕ!
ದಕ್ಷಿಣ ಕನ್ನಡ : ಮಂಗಳೂರು, ತೊಕ್ಕೊಟ್ಟು, ಗುರುಪುರ ಕೈಕಂಬ, ಬೆಳ್ತಂಗಡಿಯಲ್ಲಿ ಸಹಿ ಸಂಗ್ರಹ ಚಳುವಳಿಗೆ ಚಾಲನೆ ನೀಡಲಾಯಿತು. ಮಂಗಳೂರಿನಲ್ಲಿ ಸಹಿ ಸಂಗ್ರಹ ಚಳುವಳಿಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕೇಂದ್ರದ ನರೇಂದ್ರ ಮೋದಿ ಸರಕಾರವು ಕಾರ್ಪೊರೇಟ್ ಕೋಮುವಾದಿಗಳ ಅಕ್ರಮ ಕೂಟವಾಗಿದೆ. ತನ್ನ ಜನವಿರೋಧಿ ನೀತಿಗಳಿಂದ ದುಡಿಯುವ ವರ್ಗ ಹಾಗೂ ಜನಸಾಮಾನ್ಯರ ಬದುಕನ್ನು ನಾಶಗೊಳಿಸಿದೆ ಎಂದು ಆರೋಪಿಸಿದರು. ಈ ಸಂದರ್ಭ ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಮುಹಮ್ಮದ್ ಮುಸ್ತಫಾ, ಕಾರ್ಮಿಕ ಮುಖಂಡರಾದ ರಿಯಾಝ್, ಗುಡ್ಡಪ್ಪಮತ್ತಿತರರು ಉಪಸ್ಥಿತರಿದ್ದರು.
ತೊಕ್ಕೋಟುನಲ್ಲಿ ಜರುಗಿದ ಸಹಿಸಂಗ್ರಹ ಚಳುವಳಿಯನ್ನು ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಗುರುಪುರ ಕೈಕಂಬ ದಲ್ಲಿ ರೈತ ನಾಯಕರಾದ ಸದಾಶಿವದಾಸ್, ಬೆಳ್ತಂಗಡಿಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಿ.ಎಂ.ಭಟ್ ಉದ್ಘಾಟಿಸಿ ಮಾತನಾಡಿದರು.
ತೊಕ್ಕೊಟ್ಟಿನಲ್ಲಿ ಜಯಂತ ನಾಯಕ್, ಸುಂದರ ಕುಂಪಲ, ರೋಹಿದಾಸ್, ಪದ್ಮಾವತಿ ಶೆಟ್ಟಿ, ಜನಾರ್ದನ ಕುತ್ತಾರ್, ಚಂದ್ರ ಹಾಸ ಪಿಲಾರ್, ಕೈಕಂಬದಲ್ಲಿ ನೋಣಯ್ಯ ಗೌಡ, ವಸಂತಿ ಕುಪ್ಪೆಪದವು, ವಾರಿಜಾ, ಕುಸುಮಾ, ಬೆಳ್ತಂಗಡಿಯಲ್ಲಿ ಜಯರಾಮ ಮಯ್ಯ, ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು.
ಉತ್ತರ ಕನ್ನಡ : ಸಿಐಟಿಯು ಮುಖಂಡರಾದ ಸಲೀಂ ಸೈಯದ್ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಕಟ್ಟಡ ಕಾರ್ಮಿಕರ 1996 ರ ಕಾಯ್ದೆ & ಸೆಸ್ ಕಾಯ್ದೆಯನ್ನು ಪುನರ್ ಸ್ಥಾಪಿಸಬೇಕು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಮೇಲಿನ ಜಿಎಸ್ಟಿ ಕಡಿತ ಮಾಡಬೇಕು, ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾರ್ಮಿಕ ಸಂಹಿತೆ ರದ್ದುಗೊಳಿಸಬೇಕು, ಎಲ್ಲ 29 ಕಾರ್ಮಿಕ ಕಾನೂನುಗಳನ್ನು ಪುನರ್ ಸ್ಥಾಪಿಸಬೇಕು, ರಾಜ್ಯದಲ್ಲಿ ನೀಡಲಾಗುತ್ತಿದ್ದ ಶೈಕ್ಷಣಿಕ ಸಹಾಯಧನ ಕಡಿತ ವಾಪಸ್ ಪಡೆಯಬೇಕು, ಹಿಂದಿನಂತೆ ಶೈಕ್ಷಣಿಕ ಸಹಾಯಧನ ನೀಡಬೇಕು, ಪೆಟ್ರೋಲ್-ಡೀಸೆಲ್, ಎಲ್ ಪಿಜಿ ಗ್ಯಾಸ್, ಅಕ್ಕಿ, ಅಡುಗೆ ಎಣ್ಣೆ, ಬೇಳೆಕಾಳು ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು, ನಿರುದ್ಯೋಗ ತಡೆಗಟ್ಟಿ, ಉದ್ಯೋಗ ಅವಕಾಶ ಸೃಷ್ಟಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಈ ವೇಳೆ ಡಿವೈಎಫ್ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ ಸ್ಯಾಮಸನ್, ಜಗದೀಶ ನಾಯ್ಕ, ಭವರ್ ಸಿಂಗ್, ಕೃಷ್ಣ ಭಟ್, ದಿನೇಶ್ ನಾಯ್ಕ, ವಿಠ್ಠಲ್ ರೇಣುಕೆ, ರಾಮಾಂಜನೇಯ, ರತ್ನಾದೀಪಾ.ಎನ್.ಎಂ, ಯಾಕೋಬ್ ಜಾಕೋಬ್ ದರ್ಶಿ ಹಾಗೂ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಗದಗ : ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಐಟಿಯು ಮುಖಂಡ ಮಾರುತಿ ಚಟಗಿ “ಕೇಂದ್ರ ಸರಕಾರವು ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಮಹಿಳಾ ವಿರೋಧಿ ಕಾನೂನು ಜಾರಿಗೊಳಿಸುತ್ತಿದೆ. ಜನರಿಗೆ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ಬಗ್ಗೆ ಅರಿವು ಮೂಡಿಸಲು ದೇಶದಲ್ಲಿ ಎರಡು ಕೋಟಿ ಸಹಿ ಸಂಗ್ರಹಕ್ಕೆ ಕರೆ ಕೊಟ್ಟಿದ್ದೇವೆ. ಗ್ಯಾಸ್, ತೈಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದೆ. ರೈಲ್ವೆ, ವಿದ್ಯುತ್ ಖಾಸಗೀಕರಣಗೊಳಿಸಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಇಂತಹ ಕೇಂದ್ರ ಸರಕಾರಕ್ಕೆ ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ :ಬೆಂ.ಉತ್ತರ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಎನ್.ಪ್ರತಾಪ್ ಸಿಂಹ ರವರು ಸಹಿ ಸಂಗ್ರಹ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ಮುಖಂಡರಾದ ಕಾಂ.ನಂಜರಾಜ್ ರವರು ಮಾತನಾಡಿದರು. ಸಂಜೆ 5.30 ರಿಂದ 7 ಗಂಟೆಯವರೆಗೆ ಸಹಿ ಸಂಗ್ರಹ ಮುಂದುವರಿಸಲಾಯಿತು. ಪೀಣ್ಯ ಕೈಗಾರಿಕಾ ಪ್ರದೇಶದ ವಿವಿಧ ಕಾರ್ಮಿಕ ಸಂಘಗಳ ಸದಸ್ಯರು ಹಾಗೂ ಮುಖಂಡರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಹನುಮಂತರಾವ್ ಹವಾಲ್ದಾರ್, ವಲಯ ಸಮಿತಿ ಮುಖಂಡರಾದ ಮಂಗಳ ಕುಮಾರಿ, ಚಂದ್ರಶೇಖರ್, ಬಿ.ವಿ.ವಿನಾಯಕ್, ಎ.ಹೆಚ್.ವಿಜಯಲಕ್ಷ್ಮಿ, ಸುನೀತಾ ಹಾಗೂ ಹುಳ್ಳಿ ಉಮೇಶ್ ಭಾಗವಹಿಸಿದ್ದರು.
ಉಡುಪಿ : ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್ ನರಸಿಂಹ ಕುಂದಾಪುರದಲ್ಲಿ ನಡೆದ ಸಹಿಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಕೇಂದ್ರ ಸರಕಾರದ ಕಾರ್ಪೋರೇಟ್ ಪರ ನೀತಿಗಳಿಂದ ಹಸಿವಿನ ಸೂಚ್ಯಂಕದಲ್ಲಿ ಭಾರತವು 111ನೇ ಸ್ಥಾನದಲ್ಲಿರುವ ದಯನೀಯ ಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಈ ವೇಳೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ.ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ತಾಲೂಕು ಸಂಚಾಲಕರಾದ ಚಂದ್ರಶೇಖರ ವಿ, ಸಿಐಟಿಯು ಮುಖಂಡರಾದ ಚಿಕ್ಕ ಮೊಗವೀರ, ಸಂತೋಷ ಹೆಮ್ಮಾಡಿ, ಮಧುಶ್ರಿ, ಸುಧೀರ್, ಕ್ರಷ್ಣ ಪೂಜಾರಿ, ಅಣ್ಣಪ್ಪ ಅಬ್ಬಿಗುಡ್ಡಿ,ಚಂದ್ರ ದೇವಾಡಿಗ, ಮೋಹನ, ರಾಜು ದೇವಾಡಿಗ, ಸುಧಾಕರ, ಅಲೆಕ್ಸಾಂಡರ್, ರೆಹಮಾನ್, ಗುಲಾಬಿ ಮುಂತಾದವರಿದ್ದರು.
ಪ್ರಸ್ತಾವಿಕವಾಗಿ ಮಾತನಾಡಿದ ಕರ್ನ ಲಿರ‍್ಸ್ ಕಾರ್ಮಿಕ ಸಂಘದ ಸಹ ಕಾರ್ಯಧರ್ಶಿ ಶಿವಕುಮಾರ್ ಸ್ವಾಮಿ ಅವರು . ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತರಿಪಡಿಸಬೇಕು, ರೈತ- ಕಾರ್ಮಿಕ ವಿರೋಧಿ ನೀತಿಗಳನ್ನು ಬದಲಿಸುವಂತೆ ಅಗ್ರಹಿಸಿದರು.
ಇದನ್ನು ನೋಡಿ : ‘ಯುವನಿಧಿ’ ಯೋಜನೆಗೆ ಇಂದು ಅಧಿಕೃತ ಚಾಲನೆ