ನವೆಂಬರ್ 13, 14 ಮತ್ತು 15 ಹಾಸನದಲ್ಲಿ ಸಿಐಟಿಯು 16ನೇ ರಾಜ್ಯ ಸಮ್ಮೇಳನ

ಹಾಸನ: ಭಾರತದ ದುಡಿಯುವ ಜನರ ಮುಂಚೂಣಿ ಸಂಘಟನೆಯಾದ ‘ಸೆಂಟರ್ ಆಫ಼್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)’ಕರ್ನಾಟಕ 16ನೇ ರಾಜ್ಯ ಸಮ್ಮೇಳನವು 2025ರ ನವೆಂಬರ್ ತಿಂಗಳ ದಿನಾಂಕ 13, 14 ಮತ್ತು 15 ರಂದು ಹಾಸನದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಸಮ್ಮೇಳನದ  ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎಚ್.ಎನ್. ಪರಮಶಿವಯ್ಯ, ಅಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಖಜಾಂಚಿ ಜಿ.ಪಿ. ಸತ್ಯನಾರಾಯಣ, ಜಿಲ್ಲಾ ಖಂಜಾಂಚಿ ಅರವಿಂದ್ ಪತ್ರಿಕಾಗೋಷ್ಟಿ ನಡೆಸಿ ಸಮ್ಮೇಳನದ ವಿವರಗಳನ್ನು ನೀಡಿದರು.

ತಿಂಗಳಿಗೆ ರೂ. 36 ಸಾವಿಕ ಕನಿಷ್ಟ ವೇತನ, ರೂ. 10 ಸಾವಿರ ಪಿಂಚಣಿ, ಉದ್ಯೋಗ ಹಾಗೂ ಸಾಮಾಜಿಕ ಭದ್ರತೆಗಾಗಿ ಒತ್ತಾಯಿಸಿ; ಕರಾಳ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ; ಸಮೃದ್ಧ ಹಾಗೂ ಸೌಹಾರ್ದ ಕರ್ನಾಟಕದ ನಿರ್ಮಾಣದ ಆಶಯದೊಂದಿಗೆ ಸಿಐಟಿಯು 16ನೇ ರಾಜ್ಯ ಸಮ್ಮೇಳನ ನಡೆಯುತ್ತಿದೆ ಎಂದರು.

ಸಿಐಟಿಯು ಭಾರತದ ಒಂದು ಪ್ರಮುಖ ಕೇಂದ್ರ ಕಾರ್ಮಿಕ ಚಳಿವಳಿಯಾಗಿದ್ದು ಭಾರತದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ತನ್ನ ಘಟಕಗಳನ್ನು ಹೊಂದಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸಿಐಟಿಯು ಅತ್ಯಂತ ಸಕ್ರಿಯವಾಗಿ ದುಡಿಯುವ ಜನರಾದ ಕಾರ್ಮಿಕರು, ರೈತರು, ಕೂಲಿಕಾರರು ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ ಎಂದರು.

ಇದನ್ನೂ ಓದಿ: ಬೆಂಗಳೂರು | ನಟ ವಶಿಷ್ಠ ಸಿಂಹ : ನೀರಿದ್ದರೆ ನಾಳೆ’ ಯೋಜನೆ: ಜಾಗೃತಿ ಅಭಿಯಾನಕ್ಕೆ ರಾಯಭಾರಿಯಾಗಿ ಆಯ್ಕೆ

ಹಾಸನ ಜಿಲ್ಲೆಯ ಎಲ್ಲಾ 8 ತಾಲ್ಲೂಕುಗಳಲ್ಲಿ ಸಿಐಟಿಯು ಸಮಿತಿಗಳಿದ್ದು, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಜಿಲ್ಲೆಯ ಅಂಗನವಾಡಿ, ಗ್ರಾಮ ಪಂಚಾಯತಿ, ಬಿಸಿಯೂಟ, ಹಾಸ್ಟೆಲ್ ನೌಕರರ ನಡುವೆ; ಪ್ಲಾಂಟೇಷನ್, ಫ಼್ಯಾಕ್ಟರಿ, ಮುನಿಸಿಪಲ್, ಆಸ್ಪತ್ರೆ ಕಾರ್ಮಿಕರ ನಡುವೆ ಹಾಗೂ ಗುತ್ತಿಗೆ, ಹೊರಗುತ್ತಿಗೆ ಮತ್ತು ಅಸಂಘಟಿತ ಕಾರ್ಮಿಕರ ನಡುವೆ ಸಂಘಗಳನ್ನು ರಚಿಸಿ ಅವರ ಹಕ್ಕುಗಳಿಗಾಗಿ ಸಿಐಟಿಯು ಸಕ್ರಿಯವಾದ ಮತ್ತು ನಿರಂತರವಾದ ಹೋರಾಟದಲ್ಲಿ ತೊಡಗಿಕೊಂಡಿದೆ ಎಂದು ತಿಳಿಸಿದರು.

ಜೊತೆಗೆ ಹಾಸನ ಜಿಲ್ಲೆಯ ಅಭಿವೃದ್ಧಿ ಪ್ರಶ್ನೆಗಳು, ಸಾಮಜಿಕ ಸಮಸ್ಯೆಗಳು ಹಾಗೂ ಅಸ್ಪೃಶ್ಯತೆ – ಜಾತಿ ತಾರತಮ್ಯ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ರಾಜಿ ರಹಿತವಾದ ಹೋರಾಟ ನಡೆಸುತ್ತಿದೆ. ಸಾರ್ವಜನಿಕ ಶಿಕ್ಷಣ, ಜನಾರೋಗ್ಯ, ವಸತಿ – ನಿವೇಶನ ಮತ್ತು ಉದ್ಯೋಗದ ಪ್ರಶ್ನೆಗಳ ಆಧಾರದಲ್ಲಿ ಹೋರಾಟ ರೂಪಿಸುತ್ತಿದೆ.

ನವ ಉದಾರವಾದಿ ನೀತಿಗಳು ತೀವ್ರವಾಗಿ‌ ಜಾರಿಯಾಗುತ್ತಾ ಕಾರ್ಮಿಕರು, ರೈತರು, ಕೂಲಿಕಾರರು, ದಲಿತರು ಮತ್ತು ಮಹಿಳೆಯರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ತೀವ್ರವಾಗಿ ಮೊಟಕುಗೊಳ್ಳುತ್ತಿವೆ. ಕಾರ್ಮಿಕರ ಶ್ರಮ ಶಕ್ತಿಯನ್ನು ಲೂಟಿ ಮಾಡುವ ಮತ್ತು ರೈತರ‌ ಭೂಮಿಯನ್ನು ಕಿತ್ತುಕೊಳ್ಳುವ ಸಲುವಾಗಿಯೇ ಕಾಯ್ದೆಗಳನ್ನು‌ ಜಾರಿಮಾಡಲಾಗುತ್ತಿದೆ. ದೇಶದಲ್ಲಿ ಜಾತಿವಾದ, ಕೋಮುವಾದ ಮತ್ತು ಪಾಳೆಗಾರಿ ಮೌಲ್ಯಗಳು ವಿಜೃಂಭಿಸುತ್ತಿವೆ. ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ದೇಶದ ಸಂವಿಧಾನದ ಮೂಲ ಚೌಕಟ್ಟಾದ ಸಮಾಜವಾದ, ಮತಧರ್ಮ‌ ನಿರಪೇಕ್ಷ, ಪ್ರಜಾಸತ್ತಾತ್ಮಕ ಮತ್ತು ಗಣರಾಜ್ಯ ಒಕ್ಕೂಟದ ತತ್ವಗಳನ್ನೇ ಬದಲಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ‌ಕಾರ್ಮಿಕರು, ರೈತರು, ಕೂಲಿಕಾರರು, ದಲಿತರು, ಮಹಿಳೆಯರು ಮತ್ತು ಜನಸಾಮಾನ್ಯರ ಹಕ್ಕುಗಳ ರಕ್ಷಣೆಗಾಗಿ ಪ್ರಭಲವಾದ ಜನ ಚಳವಳಿಗಳನ್ನು ಕಟ್ಟಿ ಹೋರಾಟಕ್ಕಿಳಿಯಬೇಕಾದ ಅನಿವಾರ್ಯತೆಯಿದೆ ಎಂದರು.

ಈ ಹಿನ್ನೆಲೆಯಲ್ಲಿ 16ನೇ ಸಿಐಟಿಯು ಕರ್ನಾಟಕ ರಾಜ್ಯ ಸಮ್ಮೇಳನವು ಅತ್ಯಂತ ಮಹತ್ವದ್ದಾಗಿದೆ. ಈ ಸಮ್ಮೇಳನಕ್ಕೆ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿರುವ ಸಿಐಟಿಯುಗೆ ಸಂಯೋಜನೆಗೊಂಡಿರುವ ಕಾರ್ಮಿಕ ಸಂಘಗಳಿಂದ ಸುಮಾರು 450 ಪ್ರತಿನಿಧಿಗಳು ಮತ್ತು‌ ಸೌಹಾರ್ದ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಈ ಸಮ್ಮೇಳನದಲ್ಲಿ ದುಡಿಯುವ ಜನರು ಮತ್ತು ಜನಸಾಮಾನ್ಯರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಮುಂದೆ ಮಾಡಬೇಕಾದ ಹೋರಾಟಗಳ ಕುರಿತು ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಹಾಗೂ ಹಾಸನ ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 

ಇದನ್ನೂ ನೋಡಿ: ಗಾಂಧೀಜಿ ಪರಿಕಲ್ಪನೆ ಇಂದಿಗೂ ಪ್ರಸ್ತುತ – ನಾ ದಿವಾಕರ Janashakthi Media

Donate Janashakthi Media

Leave a Reply

Your email address will not be published. Required fields are marked *