ರಾಜಕೀಯ ಪಕ್ಷಗಳಿಗೆ ಹಣ ನೀಡುವವರ ಬಗ್ಗೆ ತಿಳಿಯುವ ಹಕ್ಕು ನಾಗರಿಕರಿಗಿಲ್ಲ: ಕೇಂದ್ರದ ಬಿಜೆಪಿ ಸರ್ಕಾರ

ನವದೆಹಲಿ: ರಾಜಕೀಯ ಪಕ್ಷಕ್ಕೆ ಯಾರು ಹಣಕಾಸು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸೋಮವಾರ ಹೇಳಿದೆ. ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಹೇಳಿಕೆಯ ಮೂಲಕ ನ್ಯಾಯಾಲಯದಲ್ಲಿ ಸರ್ಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಅನಾಮಧೇಯ ಚುನಾವಣಾ ಬಾಂಡ್‌ಗಳ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಐದು ನ್ಯಾಯಮೂರ್ತಿಗಳ ಪೀಠವು ಅಕ್ಟೋಬರ್ 31ರ ಮಂಗಳವಾರ ವಿಚಾರಣೆ ನಡೆಸಿದೆ. ಅದರಕ್ಕೆ ಮುನ್ನಾದಿನ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: “ವಿಷ ತುಂಬಿಕೊಂಡವರು ವಿಷವನ್ನೇ ಉಗುಳುತ್ತಿರುತ್ತಾರೆ”-ಪಿಣರಾಯಿ ವಿಜಯನ್

ಎಲ್ಲವನ್ನೂ ತಿಳಿದುಕೊಳ್ಳುವ ಸಾಮಾನ್ಯ ಹಕ್ಕು ನಾಗರಿಕರಿಗೆ ಇಲ್ಲ ಎಂದು ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. “ಸರಿಯಾದ ನಿರ್ಬಂಧಗಳಿಗೆ ಒಳಪಡದೆ ಏನನ್ನು ಬೇಕಾದರೂ ಹಾಗೂ ಎಲ್ಲವನ್ನೂ ತಿಳಿದುಕೊಳ್ಳುವ ಸಾಮಾನ್ಯ ಹಕ್ಕು ಇರುವುದಿಲ್ಲ. ಎರಡನೆಯದಾಗಿ, ಅಭಿವ್ಯಕ್ತಿಗೆ ಅಗತ್ಯವೆಂದು ತಿಳಿಯುವ ಹಕ್ಕು ನಿರ್ದಿಷ್ಟ ಉದ್ದೇಶಗಳಿಗಾಗಿ ಮಾತ್ರ ಇರಬಹುದು, ಇಲ್ಲದಿದ್ದರೆ ಅಲ್ಲ” ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿ ಅಡ್ವೊಕೇಟ್ ಜನರಲ್ ಹೇಳಿದ್ದಾರೆ.

ಪ್ರಾಮಿಸರಿ ನೋಟ್‌ಗಳನ್ನು ಹೋಲುವ ಚುನಾವಣಾ ಬಾಂಡ್‌ಗಳನ್ನು 2017 ರಲ್ಲಿ ಪರಿಚಯಿಸಲಾಯಿತು. ಈ ಮೂಲಕ ಭಾರತದಲ್ಲಿರುವ ನಾಗರಿಕರು ಮತ್ತು ಸಂಸ್ಥೆಗಳು ಈ ಬಾಂಡ್‌ಗಳನ್ನು ಖರೀದಿಸಬಹುದು ಮತ್ತು ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡಬಹುದಾಗಿದೆ.

ಇದನ್ನೂ ಓದಿ: 81.5 ಕೋಟಿ ಭಾರತೀಯರ ಡೇಟಾ ಸೋರಿಕೆ; ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕಿಟ್ಟ ಹ್ಯಾಕರ್: ವರದಿ

ಅದಾಗ್ಯೂ ಈ ಬಾಂಡ್‌ಗಳನ್ನು ಪರಿಚಯಿಸಿದಾಗಿನಿಂದ ಬಿಜೆಪಿ ಅತ್ಯಂತ ಹೆಚ್ಚು ಲಾಭ ಗಳಿಸಿದೆ. 2018 ರಿಂದ 2022ರಲ್ಲಿ ಬಿಜೆಪಿ 5,270 ಕೋಟಿ ರೂ. ಚುನಾವಣಾ ಬಾಂಡ್‌ಗಳನ್ನು ಪಡೆದಿದೆ. ಕಾಂಗ್ರೆಸ್ 964 ಕೋಟಿ ರೂ. ಪಡೆದಿದ್ದು, ತೃಣಮೂಲ ಕಾಂಗ್ರೆಸ್ 767 ಕೋಟಿ ರೂ.ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ, ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ಸಾರ್ವಜನಿಕಗೊಳಿಸುವಂತೆಯೇ ರಾಜಕೀಯ ಪಕ್ಷಗಳ ಹಣಕಾಸಿನ ಬಗ್ಗೆಯೂ ಸಾರ್ವಜನಿಕಗೊಳಿಸಬೇಕು ಎಂದು ಅರ್ಜಿದಾರರು ವಾದಿಸಿದ್ದರು.

ವಿಡಿಯೊ ನೋಡಿ: ಬಾರಿಸು ಕನ್ನಡ ಡಿಂಡಿಮವ – ಕುವೆಂಪು – ಹಾಡಿದವರು : ಶ್ವೇತಾ ಮೂರ್ತಿ

Donate Janashakthi Media

Leave a Reply

Your email address will not be published. Required fields are marked *