ಚುನಾವಣೆ: ಬೃಹತ್‌ ರ‍್ಯಾಲಿ ನಡೆಸದಿರಲು ಸಿಪಿಐ(ಎಂ) ನಿರ್ಧಾರ

ಕೋಲ್ಕತ್ತಾ: ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿ ಈಗಾಗಲೇ ನಾಲ್ಕು ಹಂತದ ಮತದಾನ ಪ್ರಕ್ರಿಯೆಯಲ್ಲಿ ನಾಲ್ಕು ರಾಜ್ಯಗಳ ಮತದಾನ ಮುಗಿದಿದೆ. ಪಶ್ಚಿಮ ಬಂಗಾಳದ 45 ವಿಧಾನಸಭಾ ಕ್ಷೇತ್ರಗಳಿಗೆ ಐದನೇ ಹಂತದ ಮತದಾನ ಇಂದು ನಡೆಯುತ್ತಿದೆ.

ರಾಜ್ಯದಲ್ಲಿ ಆಡಳಿತರೂಢ ಟಿಎಂಸಿ ಮತ್ತು ಬಿಜೆಪಿ ಪಕ್ಷಗಳು ಸೇರಿದಂತೆ ಸಿಪಿಐ(ಎಂ) ನೇತೃತ್ವದ ಸಂಯುಕ್ತ ಮೋರ್ಚಾ ರಂಗವು ಚುನಾವಣಾ ಕಣದಲ್ಲಿದೆ.

ಇದನ್ನು ಓದಿ: ಕೋವಿಡ್ 2ನೇ ಅಲೆ : ಸೋಂಕಿತರ ಪ್ರಮಾಣ ಹೆಚ್ಚಳ

ತೃಣಮೂಲ ಕಾಂಗ್ರೆಸ್‌ (ಟಿಎಂಸಿ) 290 ಕ್ಷೇತ್ರಗಳಲ್ಲಿ ಮತ್ತು ಮೈತ್ರಿ ಪಕ್ಷ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಭಾರತೀಯ ಜನತಾ ಪಕ್ಷ(ಬಿಜೆಪಿ)ವು 293 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ಒಂದು ಕ್ಷೇತ್ರವನ್ನು ಮೈತ್ರಿ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.

ಸಂಯುಕ್ತ ಮೋರ್ಚಾ ರಂಗ:

ಎಡಪಕ್ಷಗಳು ಮತ್ತು ಕಾಂಗ್ರೆಸ್‌ ಪಕ್ಷಗಳ ಸ್ಪರ್ಧೆ ಇಂತಿವೆ: ಸಿಪಿಐ(ಎಂ)-137, ಆಲ್‌ ಇಂಡಿಯಾ ಫಾರ್ವಡ್‌ ಬ್ಲಾಕ್-18‌, ಆರ್‌ಎಸ್‌ಪಿ-11, ಸಿಪಿಐ-10, ಮಾರ್ಕ್ಸಿಸ್ಟ್‌ ಫಾರ್ವಡ್‌ ಬ್ಲಾಕ್‌-1 ಮತ್ತು ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌-91 ಮತ್ತು ಇಂಡಿಯನ್‌ ಸೆಕ್ಯೂಲರ್‌ ಫ್ರೆಂಟ್‌(ಐಎಸ್‌ಎಫ್‌)-28 ಕ್ಷೇತ್ರಗಳಲ್ಲಿ ಸ್ಪರ್ಧೆಯಲ್ಲದೆ.

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಬಾಕಿ ಉಳಿದಿರುವ ಮೂರು ಹಂತದ ಚುನಾವಣಾ ಕ್ಷೇತ್ರಗಳಲ್ಲಿ ಬೃಹತ್‌ ಬಹಿರಂಗ ಸಭೆಗಳನ್ನು ನಡೆಸದಿರಲು ತೀರ್ಮಾನಿಸಿದೆ.

ಕೋವಿಡ್‌ ನಿಯಮ: ದೇಶದಲ್ಲಿ ಲಕ್ಷಗಳ ಗಡಿ ದಾಟುತ್ತಿರುವ ಕೋವಿಡ್‌ ದೃಢ ಪ್ರಕರಣಗಳ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯವು ದೇಶದ ಅಗ್ರ 10 ರಾಜ್ಯಗಳ ಪೈಕಿ 8ನೇ ಸ್ಥಾನದಲ್ಲಿದೆ.

ಇದನ್ನು ಓದಿ: ಉಪಚುನಾವಣೆ: ಪ್ರಚಾರದಲ್ಲಿ ಭಾಗಿಯಾದ ನಾಯಕರಿಗೆ ಕೋವಿಡ್‌ ದೃಢ

ಸಿಪಿಐ(ಎಂ) ಪಕ್ಷದ ಭಿನ್ನ ನಡೆ: ಸಂಯುಕ್ತ ಮೋರ್ಚಾ ಮೈತ್ರಿ ರಂಗದಲ್ಲಿ ಅಗ್ರಸ್ಥಾನದಲ್ಲಿರುವ ಸಿಪಿಐ(ಎಂ) ಪಕ್ಷವು 137 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಚುನಾವಣೆ ಪ್ರಚಾರವನ್ನು ಆರಂಭದಿಂದಲೂ ವಿವಿಧ ರೀತಿಯಲ್ಲಿ ಹಮ್ಮಿಕೊಳ್ಳುತ್ತಾ ಬಂದಿರುವ ಸಿಪಿಐ(ಎಂ) ಪಕ್ಷವು ವಿಧಾನಸಭೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಮತ್ತು ಮುಖಂಡರು, ಕಾರ್ಯಕರ್ತರು ನೇರವಾಗಿ ಮತದಾರರನ್ನು ಭೇಟಿ ಮಾಡುತ್ತಿದ್ದಾರೆ, ಮನೆಮನೆಗಳಿಗೆ ತೆರಳಿ ಪ್ರಚಾರ ಕೈಗೊಳ್ಳುತ್ತಿದ್ದಾರೆ.

ಈಗಾಗಲೇ ಪಾದಯಾತ್ರೆ, ರ‍್ಯಾಲಿ, ಮನೆಮನೆ ಪ್ರಚಾರಗಳ ನಡುವೆಯೂ ಬೃಹತ್‌ ಬಹಿರಂಗ ಪ್ರಚಾರ ಸಭೆಗಳನ್ನು ನಡೆಸಿರುವ ಸಿಪಿಐ(ಎಂ) ಪಕ್ಷವು ಬಾಕಿ ಉಳಿದಿರುವ ಕ್ಷೇತ್ರಗಳಲ್ಲಿ ಬೃಹತ್‌ ಮಟ್ಟದ ಸಭೆಗಳನ್ನು ಹಮ್ಮಿಕೊಳ್ಳಲಾಗುವುದಿಲ್ಲ ಎಂದು ದೃಢಪಡಿಸಿದೆ.

ಸಿಪಿಐ(ಎಂ) ಪಕ್ಷದ ಅಭ್ಯರ್ಥಿ ಹಾಗೂ ನಾಯಕ ಮೊಹಮ್ಮದ್‌ ಸಲೀಂ ಅವರು ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಬೃಹತ್‌ ಚುನಾವಣಾ ಪ್ರಚಾರಗಳನ್ನು ಹಮ್ಮಿಕೊಳ್ಳಲಾಗುವುದಿಲ್ಲ ಎಂದು ಹೇಳಿರುವ ಅವರು ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ನಿಲುವಿಗೆ ಬರಲಾಗಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಕೋವಿಡ್‌ ದೃಢಗೊಂಡಿದೆ. ಆದರೆ ಪಶ್ಚಿಮ ಬಂಗಾಳದಲ್ಲಿಯೂ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯಕ್ಕೆ ಪ್ರಧಾನಿ ಮತ್ತು ಕೇಂದ್ರ ಗೃಹ ಮಂತ್ರಿಗಳು ಭಾಗವಹಿಸುತ್ತಿದ್ದಾರೆ. ಕೋವಿಡ್‌ ಎರಡನೇ ಅಲೆಯಿದೆ ಹೆಚ್ಚಾಗುತ್ತಿವೆ. ಆದರೂ ಸಹ ಚುನಾವಣಾ ಆಯೋಗ ಕೋವಿಡ್‌ ನಿಯಮಗಳ ಪಾಲನೆಯಲ್ಲಿ ಉಲ್ಲಂಘನೆಯಾಗುತ್ತಿದ್ದರೂ ಕಣ್ಮುಚ್ಚಿಕೊಂಡು ಕುಳಿತಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಪ್ರಬಲ ಪೈಪೋಟಿ ಪಕ್ಷಗಳಾದ ಟಿಎಂಸಿ ಹಾಗೂ ಬಿಜೆಪಿ ನಡುವೆ ಚುನಾವಣಾ ಪ್ರಚಾರ ರಣರಂಗವೆಂದೆ ಬಿಂಬಿತವಾಗುತ್ತಿರುವ ನಡುವೆಯೇ ಈ ಪಕ್ಷಗಳ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರುಗಳ ಚುನಾವಣಾ ಪ್ರಚಾರದ ಶೈಲಿ ಕೋವಿಡ್‌ ನಿಯಮಗಳು ಪಾಲನೆಯಾಗುತ್ತಿಲ್ಲ ಎಂಬುದು ಪದೇಪದೇ ಸಾಬೀತಾಗುತ್ತಿವೆ.

ಇದನ್ನು ಓದಿ: ಇದು ವ್ಯಾಕ್ಸೀನ್ ರಾಷ್ಟ್ರವಾದವಲ್ಲ, ವ್ಯಾಕ್ಸೀನ್ ವರ್ಣಬೇಧ !!

ವಿಧಾನಸಭಾ ಕ್ಷೇತ್ರವಾರು ಪ್ರಚಾರ ಸಭೆಗಳು ನಡೆದರೂ ಸಹ ಕ್ಷೇತ್ರದ ಕಾರ್ಯಕರ್ತರಿಗಿಂತ ಕ್ಷೇತ್ರದ ಹೊರಗಿನ ಜನರು ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ ಎಂಬ ಆರೋಪವೂ ಈ ಪಕ್ಷಗಳ ಮೇಲೆ ಕೇಳಿಬರುತ್ತಿವೆ.

ಬಿಜೆಪಿಯಿಂದ ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮೀತ್‌ ಷಾ ಒಳಗೊಂಡು ಕೇಂದ್ರ ಸಚಿವರು ಮತ್ತು ರಾಷ್ಟ್ರೀಯ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಟಿಎಂಸಿಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಳಗೊಂಡು ವಿವಿಧ ನಾಯಕರೂ ಭಾಗವಹಿಸಿದ್ದಾರೆ.

ರಾಜ್ಯದ 294 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ನಾಲ್ಕು ಹಂತಗಳಲ್ಲಿ 135 ಕ್ಷೇತ್ರಗಳಲ್ಲಿ ಮತದಾನ ನಡೆದು ಮತಯಂತ್ರಗಳು ಭದ್ರಾತಾ ಕೊಠಡಿಗಳಲ್ಲಿ ಭದ್ರವಾಗಿವೆ. ಐದನೇ ಹಂತದ ಮತದಾನ ಇಂದು 45 ಕ್ಷೇತ್ರಗಳಿಗೆ ನಡೆಯುತ್ತಿದೆ.

ಬಾಕಿ ಇವೆ 3 ಹಂತದ ಮತದಾನ: ಏಪ್ರಿಲ್‌ 22ರಂದು 43 ವಿಧಾನಸಭಾ ಕ್ಷೇತ್ರಗಳಿಗೆ, ಏಪ್ರಿಲ್‌ 26ರಂದು 36 ವಿಧಾನಸಭಾ ಕ್ಷೇತ್ರಗಳಿಗೆ, ಏಪ್ರಿಲ್‌ 29ರಂದು 35 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು. ಮೇ 2ರಂದು ರಾಜ್ಯದ ಎಲ್ಲಾ 294 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.

ವರದಿ: ವಿನೋದ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *