ಮೌಖಿಕ ಹೇಳಿಕೆಯ ಸುದ್ದಿ: ಚುನಾವಣಾ ಆಯೋಗದ ಮನವಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ನ್ಯಾಯಾಲಯಗಳು ನೀಡುವ ಮೌಖಿಕ ಆದೇಶಗಳನ್ನು ಮಾಧ್ಯಮಗಳಲ್ಲಿ ವರದಿ ಮಾಡಬಾರದೆಂದು ಭಾರತದ ಚುನಾವಣಾ ಆಯೋಗವು ಸಲ್ಲಿಸಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಮಾಡಿದೆ.

ದೇಶದಲ್ಲಿ ತೀವ್ರಗೊಳ್ಳುತ್ತಿರುವ ಕೋವಿಡ್ -19ರ ಎರಡನೇ ಅಲೆಗೆ ಚುನಾವಣಾ ರ‍್ಯಾಲಿ ಕಾರಣವಾಗಿದೆ ಈ ಬಗ್ಗೆ ಚುನಾವಣಾ ಆಯೋಗವು ಕಣ್ಣುಮುಚ್ಚಿ ಕುಳಿತಿದ್ದಕ್ಕಾಗಿ ಮದ್ರಾಸ್ ಹೈಕೋರ್ಟ್ ಏಪ್ರಿಲ್‌ 26ರಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.

ಇದನ್ನು ಓದಿ: ರಾಜ್ಯಪಾಲರ ಹುದ್ದೆಗೆ ಲಂಚ-ನ್ಯಾಯಾಧೀಶರ ಘನತೆಗೆ ಧಕ್ಕೆ: ಹೈಕೋರ್ಟ್‌

ಈ ಬಗ್ಗೆ “ಚುನಾವಣಾ  ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು” ಎಂದು ಮೌಖಿಕವಾಗಿ ಹೇಳಿತ್ತು. “ಕೆಲವು ಜನ ಚುನಾವಣಾ ಅಧಿಕಾರಿಗಳನ್ನು ಕೊಲೆಗಾರರು ಎಂದು ಕರೆಯುವುದರೊಂದಿಗೆ ಅವರ ಮೇಲೆ ಎಫ್ಐಆರ್ ದಾಖಲಿಸಲು ಮುಂದಾಗಿದ್ದಾರೆ, ಅಂತಹವರಿಗೆ ರಕ್ಷಣೆ ನೀಡಬಹುದೆ ಎಂದು ಆಯೋಗದ ಪರ ವಕೀಲರು ಅರ್ಜಿಯಲ್ಲಿ ಕೇಳಿದ್ದರು. ಅದಕ್ಕೆ ಸಮ್ಮತಿಸಲು ನಿರಾಕರಿಸಿದ ನ್ಯಾಯಪೀಠ, “ನ್ಯಾಯಾಲಯಗಳು ಅಂತಹ ಕ್ಷುಲ್ಲಕ ವಿಷಯಗಳನ್ನು ನಿಭಾಯಿಸಲು ಇರುವುದಲ್ಲ” ಎಂದು ಅಭಿಪ್ರಾಯಪಟ್ಟಿದೆ.

“ಯಾವುದನ್ನೂ ಸಂವೇದನಾಶೀಲಗೊಳಿಸದಂತೆ ಮಾಧ್ಯಮಗಳಿಗೆ ಸೂಚನೆ ನೀಡಬೇಕು, ಈ ಕಾಲದಲ್ಲಿ ಚುನಾವಣೆ ನಡೆಸುವುದು ಕಷ್ಟದ ಕೆಲಸ” ಎಂದು ದ್ವಿವೇದಿ ಮನವಿ ಸಲ್ಲಿಸಿದ್ದರು. ಆದರೆ, ನ್ಯಾಯಪೀಠವು “ನಾವು ಅದನ್ನು ಒಪ್ಪುವುದಿಲ್ಲ” ಎಂದು ಹೇಳಿತು.

ಇದನ್ನು ಓದಿ: ಕೇರಳದಲ್ಲಿ ಎಡರಂಗ – ತಮಿಳುನಾಡಿಗೆ ಸ್ಟಾಲಿನ್‌, ಬಂಗಾಳದಲ್ಲಿ ತೃಣಮೂಲ

ಸುಯೋ ಮೋಟು ಮನವಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ ಕುಮಾರ್ ರಾಮಮೂರ್ತಿ ಅವರನ್ನೊಳಗೊಂಡ ನ್ಯಾಯಪೀಠ ಭಾರತದ ಚುನಾವಣಾ ಆಯೋಗದ ಪರ  ರಾಕೇಶ್ ದ್ವಿವೇದಿ ಸಲ್ಲಿಸಿದ ಮನವಿ ತಿರಸ್ಕರಿಸಿದರು.

ಮತ ಎಣಿಕೆ ದಿನದಂದು ಎಲ್ಲಾ ರಾಜಕೀಯ ಪಕ್ಷಗಳು ಕೋವಿಡ್ -19 ಪ್ರೋಟೋಕಾಲ್ ಅನ್ನು ಅನುಸಬೇಕೆಂದು ನ್ಯಾಯಾಲಯವು ನಿರ್ದೇಶಿಸಿತು. ವಿಜಯೋತ್ಸವದ ಅಂಗವಾಗಿ ಮೆರವಣಿಗೆ, ಪಟಾಕಿ ಸಿಡಿಸಿ ಸಂಭ್ರಮಾಚರಣೆಗಳನ್ನು ನಡೆಸಬಾರದು ಎಂದು ಸಹ ಸೂಚಿಸಿದೆ.

Donate Janashakthi Media

Leave a Reply

Your email address will not be published. Required fields are marked *