ಹೊಳೆನರಸೀಪುರ| ಚಿಟ್ಟನಹಳ್ಳಿ ಗ್ರಾಮದ ವಾಟರ್‌ಮನ್ ಭೈರಯ್ಯ ಬದುಕು ದುಸ್ತರ

ಹೊಳೆನರಸೀಪುರ: ವಾಟರ್‌ಮನ್ ಕೆಲಸ ಮಾಡುತ್ತಿರುವ ನಮಗೆ ಸರಿಯಾಗಿ ಸಂಬಳ ಕೊಡದೇ ಇರುವುದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ತಾಲೂಕಿನ ಚಿಟ್ಟನಹಳ್ಳಿ ಗ್ರಾಮದ ಭೈರಯ್ಯ ಹಾಗೂ ಅವರ ಕುಟುಂಬದವರು ಕಣ್ಣೀರಿಡುತ್ತಿದ್ದಾರೆ. ಚಿಟ್ಟನಹಳ್ಳಿ

ಭೈರಯ್ಯ ಅವರು ಕಳೆದ 30 ವರ್ಷದಿಂದ ಐಚನಹಳ್ಳಿ ಗ್ರಾಪಂ ನಲ್ಲಿ ನೀರು ಬಿಡುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಮಾಸಿಕ 12 ಸಾವಿರ ಸಂಬಳ ನೀಡಲಾಗುತ್ತಿತ್ತು. ಆದರೆ ಕಂದಾಯ ಸಂಗ್ರಹ ಇತ್ಯಾದಿ ಮೂಲಗಳಿಂದ ಗ್ರಾಪಂ ಆದಾಯ ಬರುತ್ತಿಲ್ಲ ಎಂಬ ಕಾರಣದಿಂದ ಇವರಿಗೆ ಕಳೆದ ಒಂದು ವರ್ಷದಿಂದ ಸಂಬಳವನ್ನೇ ಕೊಡುತ್ತಿಲ್ಲ. ಈ ನಡುವೆ ಗಾಯದ ಮೇಲೆ ಬರೆ ಎಂಬಂತೆ ಭೈರಯ್ಯ ಅವರು 8 ತಿಂಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದು, ನಡೆದಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಕುಳಿತಲ್ಲಿಯೇ ಅಥವಾ ಮಲಗಿಕೊಂಡೇ ದಿನ ದೂಡಬೇಕಿದೆ.

ಇದನ್ನೂ ಓದಿ:11,170 ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೇವಾ ಭದ್ರತೆ

ಆದರಿಂದ ಕುಟುಂಬ ಸಂಕಷ್ಟದಲ್ಲಿದೆ, ಸಂಬಳ ಕೊಡಿ ಎಂದು ಕೇಳಿದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂಬುದು ಬಡಕುಟುಂಬದವರ ಅಳಲಾಗಿದೆ.

ಈ ನಡುವೆ ತಂದೆಯ ಕೆಲಸವನ್ನು ಅವರ ಪುತ್ರ ಸಂಜಯ್ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇವರಿಗೂ ಕಳೆದ 6 ತಿಂಗಳಿಂದ ಸಂಬಳ ನೀಡಿಲ್ಲ. ಭೈರಯ್ಯ ಅವರಿಗೆ ತಿಂಗಳಿಗೆ 12 ಸಾವಿರ ಕೊಡಲಾಗುತ್ತಿತ್ತು. ಸಂಜಯ್‌ಗೆ ಅದರ ಅರ್ಧದಷ್ಟು ಅಂದರೆ 6 ಸಾವಿರ ನೀಡಲಾಗುತ್ತಿದೆ. ಅದನ್ನೂ ಸಕಾಲಕ್ಕೆ ಕೊಡದೇ ಇರುವುದರಿಂದ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಈ ಬಗ್ಗೆ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಓ ಅವರನ್ನು ಕೇಳಿದರೆ ಕಂದಾಯ ಸಂಗ್ರಹ ಆಗಿಲ್ಲ, ಆದ ನಂತರ ಕೊಡುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತ ಕಾಲ ಹರಣ ಮಾಡುತ್ತಿದ್ದಾರೆ. ಆದರೂ ಬೇರೆ ದಾರಿ ಇಲ್ಲ ಎಂಬ ಕಾರಣ ಸಂಜಯ್ ನೀರು ಬಿಡೋ ಕೆಲಸವನ್ನು ಮುಂದುವರಿಸಿದ್ದಾನೆ.

ಮನೆಯೂ ಇಲ್ಲ:

ವಿಪರ್ಯಾಸವೆಂದರೆ ಭೈರಯ್ಯ ಅವರ ಮೂವರು ಸದಸ್ಯರ ಕುಟುಂಬ ಇರುವ ಮನೆಯೂ ಒಂದು ಭಾಗ ಮುರಿದು ಬಿದ್ದಿದೆ. ಉಳಿದ ಮನೆ ಯಾವಾಗ ಕುಸಿದು ಬೀಳುವುದೋ ಎಂಬ ಆತಂಕದಲ್ಲೇ ಇಡೀ ಕುಟುಂಬ ದಿನ ದೂಡುವಂತಾಗಿದೆ. ಮನೆಯಲ್ಲಿರುವುದು ಭೈರಯ್ಯ, ಅವರ ಪತ್ನಿ ಹಾಗೂ ಮಗ ಮೂವರೇ, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವ ಸಾಗಿಸುತ್ತಿದ್ದಾರೆ. ಆದರೆ ಒಂದೆಡೆ ಗ್ರಾಪಂ ನವರು ಸಂಬಳ ಕೊಡದೇ ಇರುವುದು ಮತ್ತೊಂದೆಡೆ ಇರುವ ಮನೆಯೂ ಕ್ರಮೇಣ ಮುರಿದು ಬೀಳುತ್ತಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ. ಇನ್ನಾದರೂ ಮೇಲಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಬಡಕುಟುಂಬದ ನೆರವಿಗೆ ಧಾವಿಸಬೇಕಿದೆ. ಚಿಟ್ಟನಹಳ್ಳಿ

ವಿಡಿಯೋ ನೋಡಿ:ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಸಿಡಿದೆದ್ದ ಗ್ರಾಮ ಪಂಚಾಯಿತಿ ನೌಕರರು Janashakthi Media

Donate Janashakthi Media

Leave a Reply

Your email address will not be published. Required fields are marked *