ಚಿತ್ರಮಂದಿರದಲ್ಲಿ ನಮ್ಗೆ 100% ಭರ್ತಿ ಬೇಕು: ಪುನೀತ್‌ ರಾಜಕುಮಾರ್‌

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಬೇಕು. ಜನ ಕೂಡ ಕೊರೊನಾ ಅಂತಾ ಹೆದರಿಕೊಳ್ಳದೆ ಮಾಸ್ಕ್ ಹಾಕಿಕೊಂಡು ಥಿಯೇಟರ್​ಗೆ ಬಂದು ಸಿನೆಮಾ ನೋಡಿ ಪ್ಲೀಸ್ ಎಂದು ನಟ ಪುನೀತ್‌ ರಾಜ್‌ಕುಮಾರ್‌  ಅವರು ಹೇಳಿದರು.

ಸಿನಿಮಾ ರಂಗದಲ್ಲಿ ಸಾವಿರಾರು ಕುಟುಂಬಗಳು ಕೆಲಸ ಮಾಡುತ್ತಿವೆ. ಚಿತ್ರಮಂದಿರಗಳಿಗೆ ಶೇ.50ರಷ್ಟು ಪ್ರೇಕ್ಷರಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದಿರುವ ಪುನೀತ್‌ ರಾಜ್‌ಕುಮಾರ್‌ ಇಂಡಸ್ಟ್ರೀಗೆ ಸಾಕಷ್ಟು ತೊಂದರೆಗಳಾಗುತ್ತವೆ. ಹೊಸಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ. 11 ದಿನದಲ್ಲಿ ಯುವರತ್ನ ಸಿನಿಮಾ ಕೂಡಾ ತೆರೆಗೆ ಬರ್ತಿದೆ. ಚಿತ್ರಮಂದಿರದಲ್ಲೂ ಸಾಕಷ್ಟು ಮುಂಜಾಗ್ರತೆ ವಹಿಸಲಿದ್ದಾರೆ ಎಂಬ ಭರವಸೆ ನನಗಿದೆ. ಜನರೂ ಸಹ ಮಾಸ್ಕ್‌ ಧರಿಸಿ ಸ್ಯಾನಿಟರ್‌ ಬಳಸಿ ಕೊರೊನಾವನ್ನು ತೊಲಗಿಸಿ ಎಂದು ಕರೆ ನೀಡಿದರು.

ಸಾಲುಸಾಲು ಚಲನಚಿತ್ರಗಳು ಬಿಡುಗಡೆಗೆ ಸಿದ್ಧವಾಗಿರುವ ಈ ಸಮಯದಲ್ಲಿ ಸರಕಾರದ ಈ ನಿರ್ಧಾರದ ವಿರುದ್ಧ ಚಿತ್ರರಂಗದವರಿಂದ ಸಾಕಷ್ಟು ವಿರೋಧ ವ್ಯಕ್ತಪಡಿಸಿದರು.

ಸಿನಿಮಾರಂಗದವರ ಮನವಿಗೆ ಸ್ಪಂದಿಸಿದ ಸಿಎಂ

ಚಿತ್ರ ರಂಗದವರಿಂದ ಗಂಭೀರವಾಗಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರವರು ಚಿತ್ರಮಂದಿರಗಳಲ್ಲಿ  ಶೇ.50ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ಎಂಬ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ. ಪ್ರೇಕ್ಷಕರು ಮತ್ತು ಚಿತ್ರಮಂದಿರಗಳ ಮಾಲೀಕರು ಎಲ್ಲಾ ಅವಶ್ಯಕವಾದ ಮುಂಜಾಗ್ರತೆಯನ್ನು ವಹಿಸಬೇಕೆಂದು ತಿಳಿಸಿದರು.

ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸರ್ಕಾರದ ಜೊತೆ ಜನತೆಯೂ ಸಂಪೂರ್ಣವಾಗಿ ಸಹಕರಿಸಬೇಕೆಂದು ಸಿಎಂ ಮನವಿ ಮಾಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *