ಚಿರತೆ ಸೆರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆ ರಚನೆ

ಮೈಸೂರು: ಜಿಲ್ಲೆಯ ವನ್ಯಜೀವಿ ಉಪವಿಭಾಗದ ಭಾಗಗಳಲ್ಲಿ ಚಿರತೆ ಹಾವಳಿಯಿಂದಾಗಿ ಜನರು ಕಂಗಾಲಾಗಿದ್ದು, ಪದೇ ಪದೇ ಚಿರತೆ ಹಾವಳಿಯಿಂದ ಜನರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ನೇತೃತ್ವದ 58 ಸಿಬ್ಬಂದಿ ಒಳಗೊಂಡ ನಾಲ್ಕು ಚಿರತೆ  ಸೆರೆ ಕಾರ್ಯಪಡೆಯನ್ನು ರಚನೆ ಮಾಡಿ ಅದೇಶ ಹೊರಡಿಸಲಾಗಿದೆ.

ರಾಜ್ಯ ಸರ್ಕಾರ ಚಿರತೆ ಸೆರೆ ಕಾರ್ಯಪಡೆ ರಚನೆ ಸಂಬಂಧಿಸಿ ಆದೇಶವನ್ನು ಹೊರಡಿಸಿಸಲಾಗಿದ್ದು, ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸೌರವ್ ಕುಮಾರ್ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿದೆ. ನಾಲ್ವರು ಉಪವಲಯ ಅರಣ್ಯಾಧಿಕಾರಿಗಳು, 8 ಜನ ಗಸ್ತು ಅರಣ್ಯ ಪಾಲಕರು, 40 ಮಂದಿ ಕಾರ್ಯಪಡೆ ಸಹಾಯಕರು, 5 ವಾಹನ ಚಾಲಕರು ಸೇರಿ 58 ಮಂದಿ ಸಿಬ್ಬಂದಿಯನ್ನೊಳಗೊಂಡಿದೆ. ಮೈಸೂರಿನ ಅರಣ್ಯ ಭವನದಲ್ಲಿ ನಿಯಂತ್ರಣ ಕೊಠಡಿ ಹೊಂದಿದ್ದು, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ.

ಇದನ್ನು ಓದಿ: ಬೆಂಗಳೂರು ವಿವಿ ಆವರಣದಲ್ಲಿ ಕಾಣಿಸಿದ್ದು ಚಿರತೆಯಲ್ಲ ಕಾಡುಬೆಕ್ಕು: ವಿದ್ಯಾರ್ಥಿಗಳು ನಿರಾಳ!

ಸಿಬ್ಬಂದಿಗಳ ನಿಯೋಜನೆಗೆ ಸಂಬಂಧಪಟ್ಟಂತೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಆದೇಶ ಹೊರಡಿಸಲಿದ್ದು, ಸಿಬ್ಬಂದಿ ನೇಮಕಾತಿ ನಡೆಯಲಿದೆ. ಚಿರತೆ ಕಾರ್ಯಪಡೆ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಅಗತ್ಯವಾದ ಸಹಾಯ ಪಡೆಯುವಂತೆ ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ನಾಲ್ಕು ತಂಡಗಳು ದಿನದ 24 ಗಂಟೆಯೂ ಸನ್ನದ್ಧವಾಗಿರಲಿದ್ದು, ಚಿರತೆಯ ಉಪಟಳದ ಬಗ್ಗೆ ಮಾಹಿತಿ ಬಂದ ತಕ್ಷಣ ಕಾರ್ಯಾಚರಣೆ ನಡೆಸಲಿವೆ ಎಂದು ಮೈಸೂರು ವಿಭಾಗದ ಅರಣ್ಯ ಮುಖ್ಯಸ್ಥೆ ಡಾ ಮಾಲತಿ ಪ್ರಿಯ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ತಿಂಗಳಿಂದ ಆತಂಕ ಮೂಡಿಸಿದ ಚಿರತೆ ಸೆರೆ; ಖಚಿತಪಡಿಸಲು ಗ್ರಾಮಸ್ಥರ ಪಟ್ಟು

ಮೈಸೂರು ವನ್ಯಜೀವಿ ಉಪವಿಭಾಗ ಒಳಗೊಂಡು ಮೈಸೂರು, ನಂಜನಗೂಡು, ಎಚ್ ಡಿ ಕೋಟೆ, ಸರಗೂರು, ಟಿ. ನರಸೀಪುರ, ಮಂಡ್ಯ, ಪಾಂಡವಪುರ, ನಾಗಮಂಗಲ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ಚಿರತೆಗಳ ಸೆರೆಗೆ ತಂಡ ರಚಿಸಲಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *