- ಸಂಕಷ್ಟದ ಸುಳಿಯಲ್ಲಿ ಆರ್ ಸಿ ಬಿ
- ಮುಂಬರುವ ಪಂದ್ಯ ಮಾಡು ಇಲ್ಲವೆ ಮಡಿ
2022 ರ ಐಪಿಎಲ್ ನಲ್ಲಿಆರ್‌ಸಿಬಿ ತಂಡದ ಪ್ಲೇ ಆಫ್ ಕನಸು ಸಂಕಷ್ಟಕ್ಕೆ ಸಿಲುಕಿದ್ದು, ತಂಡದ ಸ್ಥಿತಿ ಚಿಂತಾಜನಕವಾಗಿದೆ. ಉಳಿದ ತಂಡಗಳ ಫಲಿತಾಂಶದ ಮೇಲೆ ಆರ್‌ಸಿಬಿ ಭವಿಷ್ಯ ನಿರ್ಧಾರವಾಗಲಿದೆ.
2022 ರ ಆವೃತ್ತಿಯ ಟಾಟಾ ಐಪಿಎಲ್ ನಲ್ಲಿ ಪ್ಲೇ ಆಫ್ ಗೆ ಉಳಿದಿರುವುದು ಒಂದೇ ಒಂದು ಸ್ಥಾನ. ಆ ಸ್ಥಾನಕ್ಕಾಗಿ ನಾಲ್ಕು ತಂಡಗಳು ಪೈಪೋಟಿ ನಡೆಸುತ್ತಿವೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೂಡ ಒಂದು. ಈಗಾಗಲೇ ಆರ್ ಸಿ ಬಿ ತಂಡವು 13 ಪಂದ್ಯಗಳನ್ನ ಆಡಿದ್ದು ಅಂಕಪಟ್ಟಿಯಲ್ಲಿ 16 ಅಂಕಗಳನ್ನ ಪಡೆದುಕೊಂಡು ಐದನೇ ಸ್ಥಾನದಲ್ಲಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಉಭಯ ತಂಡಗಳು ಉತ್ತಮ ಪೈಪೋಟಿ ನೀಡಿದ್ದು, ಡೆಲ್ಲಿ ತಂಡವು 17 ರನ್ ಗಳ ಜಯದೊಂದಿಗೆ ಅಂಕಪಟ್ಟಿಯಲ್ಲಿ 16 ಪಾಯಿಂಟ್ಸ್ ತನ್ನದಾಗಿಸಿಕೊಂಡು ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಹಾಗೂ ಸೂತ ಪಂಜಾಬ್ ತಂಡವು 13 ಪಂದ್ಯಗಳಲ್ಲಿ 6 ಪಂದ್ಯಗಳನ್ನ ಗೆದ್ದು, 12 ಪಾಯಿಂಟ್ಸ್ ಪಡೆದುಕೊಂಡು 7 ಸ್ಥಾನ ಪಡೆದುಕೊಂಡಿದೆ. ಆಗಾಗಿ ನಿನ್ನೆ ದಿವಸ ಪಂಜಾಬ್ ಸೂತಿರುವುದು ಆರ್ ಸಿ ಬಿ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ತಮ್ಮ ಪ್ಲೇ ಆಫ್ ಕನಸನ್ನ ಉಳಿಸಿಕೊಳ್ಳಲು ಸಹಕಾರಿಯಾಯಿತು.
ಇನ್ನು ಡೆಲ್ಲಿ ತಂಡ ಮತ್ತು ಆರ್ ಸಿ ಬಿ ತಂಡಗಳ ಅಂಕಗಳು ಸಮಬಲದಿಂದ ಕೂಡಿದ್ದರು, ಡೆಲ್ಲಿ ತಂಡವು ರನ್ ಪಾಯಿಂಟ್ಸ್ ನಲ್ಲಿ ಆರ್ ಸಿ ಬಿ ತಂಡಕ್ಕಿಂತ ಹೆಚ್ಚು ಪಾಯಿಂಟ್ಸ್ ಹೊಂದಿದೆ. ಆಗಾಗಿ ಆರ್ ಸಿ ಬಿ ತಂಡವು ಉಳಿದ ಒಂದು ಪಂದ್ಯದಲ್ಲಿ ಹೆಚ್ಚು ರನ್ ಗಳಿಂದ ಗೆದ್ದು, ನೆಟ್ ರನ್ ಪಾಯಿಂಟ್ಸ್ ಹೆಚ್ಚಿಸಿಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಆರ್ ಸಿ ಬಿ ತಂಡ ತನ್ನ ಪ್ಲೇಆಫ್ ಕನಸನ್ನ ತೊರೆಯಬೇಕಾಗುತ್ತದೆ. ಇಷ್ಟಾದರು ಕೂಡ ಕೊಲ್ಕತ್ತಾ ತಂಡವು ಉಳಿದ ಒಂದು ಪಂದ್ಯದಲ್ಲಿ ಸೂಲಬೇಕು, ಗೆದ್ದರು ಅತಿ ಹೆಚ್ಚು ರನ್ ಗಳಿಂದ ಗೆಲ್ಲಬೇಕಾಗಿದೆ. ಇದರಿಂದ ಆರ್ ಸಿ ಬಿ ತಂಡಕ್ಕೆ ಅಷ್ಟೇನು ಪರಿಣಾಮ ಬೀರುವುದಿಲ್ಲ.
ಆರ್ ಸಿಬಿ ತಂಡವು ಮುಂದಿನ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ದ ಸೆಣಸಾಡಲಿದ್ದು, ಅತೀ ಹೆಚ್ಚು ರನ್ ಗಳಿಂದ ಗೆಲ್ಲಬೇಕಾಗಿದೆ. ಗೆದ್ದರೆ ತಂಡವು ಪ್ಲೇ ಆಪ್ ಕನಸನ್ನ ಮುಕ್ಕಾಲು ಭಾಗ ಜೀವಂತವಾಗಿಸಿಟ್ಟುಕೊಂಡಂತೆ. ಈ ಒತ್ತಡದ ಮಧ್ಯೆಯು ಆರ್ ಸಿ ಬಿ ತಂಡದ ನಾಯಕ ಡು ಪ್ಲೇಸ್ಸಿ ತಮ್ಮ ತಂಡವನ್ನ ಹೇಗೆ ಮುನ್ನಡೆಸುತ್ತಾರೆ ಎಂಬುದನ್ನ ನೋಡಬೇಕಾಗಿದೆ. ತಂಡದ ನಾಯಕನ ಜೊತೆ ಸಹ ಬಲಿಷ್ಟ ಬ್ಯಾಟ್ಸ್ ಮನ್ ಗಳಾದ ವಿರಾಟ್ ಕೊಹ್ಲಿ, ಪತಿದರ್,ಮ್ಯಾಕ್ಸ್ ವೆಲ್, ಮುಂತಾದವರು ತಂಡದ ಗೆಲುವಿಗೆ ನೆರವಾಗಬೇಕಿಗಿದೆ. ಇನ್ನು ತಂಡದ ಗೆಲುವಿಗೆ ಬೌಲರ್ ಗಳ ಪಾತ್ರ ದೊಡ್ಡದಾಗಿದ್ದು. ಆರ್ ಸಿ ಬಿ ತಂಡದ ಅಭಿಮಾನಿಗಳು ಮುಂಬರುವ ಪಂದ್ಯದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.