ಚಿಂಚೋಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ನೀಡಿದ್ದ ಹೇಳಿಕೆ ಖಂಡಿಸಿ ಸೋಮವಾರ ನಾಗರಿಕ ಹೋರಾಟ ಸಮಿತಿ ಕರೆ ನೀಡಿದ್ದ ಚಿಂಚೋಳಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶವಯಾತ್ರೆ
ಚಿಂಚೋಳಿ, ಚಂದಾಪುರ, ಅವಲಕಿ ಪಟ್ಟಣಗಳಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತವಾಗಿದೆ. ಆಟೊ, ಜೀಪ್, ಬೈಕ್‌ಗಳ ಓಡಾಟವೂ ಸ್ಥಗಿತವಾಗಿದೆ. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪ್ರತಿಭಟನಾ ಮೆರವಣಿಗೆಗೆ ಚಾಲನೆ ಸಿಕ್ಕಿತು. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಅಮಿತ್ ಶಾ ಅಣಕು ಶವಯಾತ್ರೆ ನಡೆಯಿತು.
ಇದನ್ನೂ ಓದಿ : ಇಂದು ಕೊಪ್ಪಳ ಬಂದ್; ಅಮಿತ್ ಶಾ ರಾಜೀನಾಮೆಗೆ ದಲಿತ ಸಂಘಟನೆಗಳ ಆಗ್ರಹ
ಪ್ರತಿಭಟನಾ ಮೆರವಣಿಗೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಪುರಸಭೆ ಅಧ್ಯಕ್ಷ ಆನಂದ ಟೈಗರ್, ಮುಖಂಡರಾದ ಗೋಪಾಲ ರಾಂಪುರ, ಪಾಂಡುರಂಗ ಲೊಡನೋರ, ಮಾರುತಿ ಗಂಜಗಿರಿ, ಕಾಶಿನಾಥ ಸಿಂಧೆ, ಗೋಪಾಲ ಎಂ. ಪೂಜಾರಿ, ಅನಿಲಕುಮಾರ ಜಮಾದಾರ, ಓಮನರಾವ್ ಕೊರವಿ, ಲಕ್ಷ್ಮಣ ಅವುಂಟೆ, ಶರಣು ಪಾಟೀಲ, ಪವನಕುಮಾರ ಪಾಟೀಲ, ಜಗದೇವ ಗೌತಮ, ಮಾಣಿಕರಾವ್ ಗುಲಗುಂಜಿ, ಸಂಜೀವಕುಮಾರ ಮೇತ್ರಿ, ಬಸವರಾಜ ಮಾಲಿ, ಶಾಮರಾವ್ ಕೊರವಿ, ಜನಾರ್ದನ ಪಾಟೀಲ, ಸಂತೋಷ ಗುತ್ತೇದಾರ, ಶರಣಬಸಪ್ಪ ಮಮಶೆಟ್ಟಿ, ಸಚಿನ್ ಚವ್ಹಾಣ್, ಚೇತನ ನಿರಾಳಕರ, ಶಂಕರ ಹೂವಿನ ಹಿಪ್ಪರಗಿ, ಶ್ರೀಧರ ವಗಿ, ಚಿರಂಜೀವಿ ಪಾಪಯ್ಯ, ಅಂಜಯ್ಯ ಪಾಲ್ಗೊಂಡಿದ್ದರು.
ಡಿವೈಎಸ್ಪಿ ಸಂಗಮನಾಥ ಹಿರೇಮಠ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು. ಬಂದ್‌ನಿಂದಾಗಿ ರಸ್ತೆಯಲ್ಲಿ ಸರಕು ಸಾಗಣೆಯ ವಾಹನಗಳು ಸಾಲುಗಟ್ಟಿ ನಿಂತವು.
ಇದನ್ನೂ ನೋಡಿ : ಮನುವಾದಿ ಅಮಿತ್ ಶಾ ವಜಾಕ್ಕೆ ದಲಿತ ಹಕ್ಕುಗಳ ಸಮಿತಿ ಆಗ್ರಹ Janashakthi Media