ನವದೆಹಲಿ: ಚೀನಾದ “ದ ಪೀಪುಲ್’ಸ ಬ್ಯಾಂಕ್ ಆಫ್ ಚೈನಾ” ತನ್ನ ನಾಣ್ಯವಾದ ರೆನ್ಮಿನ್ಬಿಯನ್ನು ಡಿಜಿಟಲೀಕರಿಸಿ ಹತ್ತು ಆಸೆಯನ್ (ASEAN) ದೇಶಗಳ ಮತ್ತು ಆರು ಮಧ್ಯ ಪೌರಾತ್ಯ ದೇಶಗಳ ನಡುವೆ ನಿಧಿ ಇತ್ಯರ್ಥಗೊಳಿಸುವಿಕೆಯನ್ನು ನಿರಂತರ ಸಂಪರ್ಕ ವ್ಯವಸ್ಥೆಯಡಿ ತಂದಿದೆ. ಹಣಕಾಸು
ಜಗತ್ತಿನಾದ್ಯಂತ ಸ್ವಿಫ್ಟ್ (SWIFT-Society for Worldwide Interbank Financial Telecommunications) ಎಂಬ ಡಾಲರ್ ಅಧಿಪತ್ಯದ ವ್ಯವಸ್ಥೆ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹಣಕಾಸು ವ್ಯವಹಾರದಲ್ಲಿ ಜಾರಿಯಲ್ಲಿತ್ತು ಮತ್ತು ಅದಕ್ಕೆ ಬದಲಿ ಇರಲಿಲ್ಲ. ಹಣಕಾಸು
ಡಾಲರ್ ಅಧಿಪತ್ಯವೆಂದರೆ ಅಮೆರಿಕ ಮತ್ತು ಅದರ ಗೆಳೆತನದ ದೇಶಗಳ ಅನುಕೂಲ ಮತ್ತು ಲಾಭಕ್ಕೆ ಈ ವ್ಯವಸ್ಥೆ ಅನುವಾಗಿ ಇತ್ತು ಎಂಬುದು ವಾಸ್ತವ. ಇಂತಹ ಅಧಿಪತ್ಯಕ್ಕೆ ಚೀನಾದ ಈ ಹೊಸ ವ್ಯವಸ್ಥೆಯಿಂದ ಹೊಡೆತ ಬಿದ್ದಿದೆ ಎಂಬುದು ಸ್ಪಷ್ಟ. ಜಗತ್ತಿನ ವ್ಯಾಪಾರದ ಶೇ 38 ರಷ್ಟು ಈಗ ಡಾಲರಿನ ಹಂಗು ತೊರೆದು ವ್ಯಾಪಾರ ನಡೆಸಬಹುದು ಎಂದರೆ ಈ ಸಾಧನೆಯ ಮಹತ್ವ ಅರಿವಾದೀತು. ಚೀನಾ ಅತ್ಯಾದುನಿಕ ಬ್ಲಾಕ್ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡಿದೆ ಎಂಬುದೂ ಈ ಹೊಸ ವ್ಯವಸ್ಥೆಯ ಗಟ್ಟಿತನದ ಲಕ್ಷಣ.
ಸ್ವಿಫ್ಟ್ ಪದ್ದತಿಯಲ್ಲಿ ಹಣವನ್ನು ಗಡಿಯ ಹೊರಗಿನ ದೇಶಗಳಿಗೆ ಕಳುಹಿಸಿದಾಗ ಅದು ಆ ದೇಶಗಳ ಖಾತೆಗಳಿಗೆ ಹೋಗಿ ಇತ್ಯರ್ಥವಾಗಲು 3 ರಿಂದ 5 ದಿನಗಳ ಕಾಲ ತೆಗೆದುಕೊಳ್ಳುತ್ತಿತ್ತು. ಕೋಟ್ಯಂತರದಲ್ಲಿ ಈ ಹಣಗಳು ಇರುವಾಗ ಅದರ ಮೇಲಿನ ಬಡ್ಡಿ ದೊಡ್ಡದಾಗಿರುತ್ತಿತ್ತು. ನಡುವೆ ಬ್ಯಾಂಕ್ ರಜಗಳು ಬಂದಾಗ ಈ ಅವಧಿ ಇನ್ನೂ ಹೆಚ್ಚುತ್ತಿತ್ತು.
ಇದನ್ನೂ ಓದಿ: ಕಲಬುರಗಿ| ತಾಪಮಾನ ಹೆಚ್ಚಳ: ಪ್ರಿಯಾಂಕ್ ಖರ್ಗೆ ಸೂಚನೆಗಳು
ಚೀನಾ ಈ ಅವಧಿಯನ್ನು 7 ಸೆಕೆಂಡುಗಳಿಗೆ ಇಳಿಸಿದೆ!!! ಇದಲ್ಲದೆ ಬೇರೆ ಅನುಕೂಲಗಳು ಇವೆ. ಉದಾಹರಣೆಗೆ, ಹಾಂಗ್ ಕಾಂಗ್ ಮತ್ತು ಅಭೂ ಧಾಬಿ ನಡುವೆ ಮಧ್ಯಪೂರ್ವ ದೇಶದ ಒಂದು ಕಂಪನಿಯ ಹಣಕಾಸು ಪಾವತಿಯಾಗಲು ಹಳೆಯ ಪದ್ದತಿಯ ಆರು ಬ್ಯಾಂಕ್ ಮಧ್ಯವರ್ತಿಗಳ ಅವಶ್ಯಕತೆ ಇರಲಿಲ್ಲ. ಇದರ ಪರಿಣಾಮ: ನಿರ್ವಹಣಾ ಶುಲ್ಕದಲ್ಲಿ ಶೇ 98 ರಷ್ಟು ಕಡಿತ!!!
ಪಾಶ್ಚಾತ್ಯ ದೇಶಗಳಿಗೆ ಭಯ ಹುಟ್ಟಿಸಿರುವುದು ಈ ವ್ಯವಸ್ಥೆ ಬರೀ ಶೀಘ್ರವಷ್ಟೆ ಅಲ್ಲ ಅದು ಭದ್ರವೂ ಹೌದು ಎಂಬುದು ಮತ್ತು ಎಲ್ಲ ಹಂತಗಳಲ್ಲಿ ಕುರುಹುಗಳನ್ನು(ಪುರಾವೆಗಳನ್ನು) ಸ್ಪಷ್ಟ ಮತ್ತು ಪರಿಶೀಲಿಸಲು ಯೋಗ್ಯವಾಗಿ ಇಡುತ್ತದೆ ಎಂಬುದು. ಇದಲ್ಲದೆ ಎಲ್ಲ ತರಹದ ಅಕ್ರಮಗಳನ್ನು ಅದು ತಡೆಯಬಲ್ಲದು.
ಇದು ಇಂತಹ ಕಾರ್ಯಕ್ಷಮತೆ ಇರುವ ವ್ಯವಸ್ಥೆಯಾಗಿರುವುದರಿಂದ ಜಗತ್ತಿನಾದ್ಯಂತ 23 ದೇಶಗಳ ಕೇಂದ್ರೀಯ ಬ್ಯಾಂಕುಗಳು (ನಮ್ಮ ಭಾರತೀಯ ರಿಸರ್ವ್ ಬ್ಯಾಂಕಿನಂತವು) ಈ ವ್ಯವಸ್ಥೆಗೆ ಸೇರಿಕೊಂಡಿವೆ. ಇರುವ ವ್ಯವಸ್ಥೆಗಿಂತ ನೂರು ಪಟ್ಟು ಹೆಚ್ಚು ಸಮರ್ಥವಿರುವ ವ್ಯವಸ್ಥೆ ಬಂದರೆ ಅಂತಹ ವ್ಯವಸ್ಥೆಗೆ ಸೇರಿಕೊಳ್ಳಲು ದೇಶಗಳು ನಾ ಮುಂದು ತಾ ಮುಂದು ಎಂದು ಸೇರಿಕೊಳ್ಳದೆ ಹಿಂದುಳಿಯುತ್ತಾರೆಯೇ?
ಜಾಗತಿಕ ರಾಜಕೀಯದಲ್ಲಿ ಯಾವುದೇ ದೇಶ ತನ್ನ ಹಣಕಾಸಿನ ಸಾರ್ವಭೌಮತೆ ಕಾಯ್ದುಕೊಳ್ಳುವಲ್ಲಿ ಇದು ಅತ್ಯಂತ ನ್ಯಾಯಯುತ ಮತ್ತು ಸಮಂಜಸ ವ್ಯವಸ್ಥೆಯಾಗಿದೆ. ಅಮೆರಿಕ ಇರಾನಿನ ಮೇಲೆ ನಿರ್ಬಂಧಗಳನ್ನು ಹೇರಲು ಹವಣಿಸಿದಾಗ ಸ್ವಿಫ್ಟ್ ಬದಲು ಚೀನಾದ ಆರ್ ಎಂ ಬಿ ವ್ಯವಸ್ಥೆ ನೆರವಿಗೆ ನಿಂತಿತು.
ಜಗತ್ತಿನ ಶೇ 87 ರಷ್ಟು ದೇಶಗಳು ಚೀನಾದ ಈ ಆರ್ ಎಂ ಬಿ ವ್ಯವಸ್ಥೆಯೊಳಗೆ ಬರಲು ತಯಾರಾಗುತ್ತಿರುವಾಗ ಅಮೆರಿಕ ಡಿಜಿಟಲ್ ನಾಣ್ಯದಿಂದ ತನ್ನ ಡಾಲರ್ ಅಧಿಪತ್ಯಕ್ಕೆ ಅಪಾಯವಿದೆಯೇ ಎಂಬ ಚರ್ಚೆಯಲ್ಲಿ ತೊಡಗಿರುವಂತಿದೆ. ಚೀನಾ ಗದ್ದಲವಿಲ್ಲದೆ ಜಗತ್ತಿನ 200 ಕ್ಕೂ ಹೆಚ್ಚು ದೇಶಗಳನ್ನು ಈ ವ್ಯವಸ್ಥೆಯಡಿ ತರುವ ಕೆಲಸ ಮಾಡುತ್ತಿದೆ.
ಇದು ಜಗತ್ತಿನ ಬಹು ದೊಡ್ಡ ಸುದ್ದಿ. ಯಾಕೆಂದರೆ, ಈ ವ್ಯವಸ್ಥೆ ಬೆಳೆದಂತೆ ಡಾಲರಿನ ಅಪಮೌಲ್ಯೀಕರಣ ಆಗುತ್ತಾ ಹೋಗುತ್ತದೆ. ಜಗತ್ತನ್ನೇ ಬದಲಿಸುವ ತಾಕತ್ತು ಇದರಲ್ಲಿ ಇರುವಂತಿದೆ.
ಇದನ್ನೂ ನೋಡಿ: RRv/s GT| ಗೆಲುವಿನ ಲಯ ಉಳಿಸಿಕೊಳ್ಳುವವರುಯಾರು? Janashakthi Media