ಮಧುಗಿರಿ | ಕೃಷ್ಣಯ್ಯನಪಾಳ್ಯ ಸರ್ಕಾರಿ ಶಾಲೆಯ ಪರಿಸರ ಮಕ್ಕಳ ಕಲಿಕಾ ಸಾಮರ್ಥ್ಯ ನೋಡುಗರನ್ನು ಆಕರ್ಶಿಸುತ್ತದೆ

ಮಧುಗಿರಿ: ಸುಂದರ ಪರಿಸರದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ನೋಡುಗರನ್ನು ಹುಬ್ಬೇರಿಸುತ್ತದೆ. ತಾಲ್ಲೂಕಿನ ಕಸಬಾ ಹೋಬಳಿ ಕೃಷ್ಣಯ್ಯನಪಾಳ್ಯ ಸರ್ಕಾರಿ ಶಾಲೆ ಕೃಷ್ಣಯ್ಯನಪಾಳ್ಯ ಯಾವುದೇ ಬಸ್ ಸೌಕರ್ಯವಿಲ್ಲದ ಕುಗ್ರಾಮ. ಮಧುಗಿರಿ 

1989ರಲ್ಲಿ ಇಲ್ಲಿ ಆರಂಭವಾದ ಸರ್ಕಾರಿ ಶಾಲೆ ಮೊದಲಿಗೆ ಹೆಂಚಿನ ಕೊಠಡಿ ಇತ್ತು. ಜೊತೆಗೆ ಯಾವುದೇ ಮೂಲ ಸೌಲಭ್ಯಗಳನ್ನು ಹೊಂದಿರಲಿಲ್ಲ. ಆದರೆ 1998ರಲ್ಲಿ ಶಿಕ್ಷಕರಾಗಿ ಬಂದ ಎಸ್.ಸಿ. ಗಂಗಾಧರಯ್ಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಗ್ರಾಮಸ್ಥರ ಪ್ರೀತಿ-ವಿಶ್ವಾಸಗಳಿಸುವುದರ ಮೂಲಕ ಶಾಲೆಗೆ ಎಲ್ಲ ಮೂಲಸೌಕರ್ಯ ಕಲ್ಪಿಸಿದರು.

ಇದನ್ನೂ ಓದಿ: ಹಾಸನ | ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಒತ್ತಾಯಿಸಿ SFI ಪ್ರತಿಭಟನೆ

2016ರಲ್ಲಿ ರಾಜಮ್ಮ ಹಾಗೂ ಮುನಿವೆಂಕಟಪ್ಪ ಅವರಿಂದ ಸಭಾವೇದಿಕೆ ನಿರ್ಮಾಣ, ಎಸ್.ಡಿ.ಎಮ್.ಸಿ. ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ಶಾಲಾ ಮುಂಭಾಗ ಹಾಗೂ ಶಾಲಾ ಆವರಣದಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದಾರೆ. ಬರುಡಾಗಿದ್ದ ಶಾಲಾ ಆವರಣದಲ್ಲಿ ತೆಂಗು 12, ಅಡಿಕೆ 80, ನುಗ್ಗೆ 5, ಎಳ್ಳಿಕಾಯಿ 5, ನೇರಳೆ 2, ಕಬ್ಬು, ಬಾಳೆ 10, ವಿವಿಧ ಬಗೆಯ 20 ಹೂವಿನ ಗಿಡಗಳು ನೆಟ್ಟು ಸುಂದರ ಕೈತೋಟ ಮಾಡಿದ್ದಾರೆ.

ಶಾಲೆಯಲ್ಲಿ ಬಿಸಿಯೂಟಕ್ಕೆ ಬೇಕಾದ ತರಕಾರಿ ತೋಟ ನಿರ್ಮಿಸಿಕೊಂಡು ವಿವಿಧ ಬಗೆಯ ತರಕಾರಿ, ಸೊಪ್ಪನ್ನು ಇಲ್ಲಿಯೇ ಬೆಳೆಯುತ್ತಿದ್ದಾರೆ. ಸರ್ಕಾರದ ಅನುದಾನದಿಂದ ಕೊಠಡಿಗಳ ಸುಂದರೀಕರಣಗೊಳಿಸಲಾಗಿದೆ. ದಾನಿಗಳ ಸಹಕಾರದಿಂದ ಅಗತ್ಯ ಸೌಲಭ್ಯ, ಕಲಿಕಾ ಸಾಮಗ್ರಿ ನೀಡಲಾಗಿದೆ. ಕಂಪ್ಯೂಟರ್, ಮೈಕ್‌ಸೆಟ್, 60 ಚೇರ್, 4 ಬೀರು, ಟೇಬಲ್, ಪೋಡಿಯಂಗಳನ್ನು ದಾನಿಗಳಿಂದ ಸಂಗ್ರಹಿಸಿದ್ದಾರೆ.

ಈ ಶಾಲೆಗೆ 2024-25ನೇ ಸಾಲಿನಲ್ಲಿ ಶಾಲೆಗೆ ಉತ್ತಮ ಪರಿಸರ ಪ್ರಶಸ್ತಿ ಬಂದಿದೆ.

ಇದನ್ನೂ ನೋಡಿ: ಸರ್‌ (SIR) ಅಂದ್ರೆ ಮತದಾರರನ್ನು ಹೊರದಬ್ಬುವುದೆ? ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *