ಕೆಂಗೇರಿ ಕೆರೆ ಪಾಲಾಗಿದ್ದ ಮಕ್ಕಳು ಮೃತ: ಅವಘಡ ನಡೆದ ಪ್ರದೇಶಕ್ಕೆ ಸಿ.ಪಿ.ಐ(ಎಂ) ಭೇಟಿ

ಬೆಂಗಳೂರು: ಬೆಂಗಳೂರಿನಲ್ಲಿ ನೆನ್ನೆ ಸುರಿದ ತೀವ್ರ ಮಳೆಗೆ ಕೆಂಗೇರಿ ಕೆರೆಯ ಅಂಗಳದಲ್ಲಿ ಆಟವಾಡುತ್ರಿದ್ದ ಮಕ್ಕಳು ಕೆರೆಯಪಾಲಾಗಿದ್ದು, ಇಂದು ಮೃತ ಮಕ್ಕಳ ತಾಯಿಯನ್ನು ಮತ್ತು ಅವಘಡ ನಡೆದ ಪ್ರದೇಶಕ್ಕೆ ಸಿ.ಪಿ.ಐ (ಎಂ ) ಕೆಂಗೇರಿವಲಯ ಸಮಿತಿಯ ನಿಯೋಗ ಭೇಟಿ ನೀಡಿತ್ತು.

ನಿಯೋಗದ ಭಾಗವಾಗಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಎಸ್ ಲಕ್ಷ್ಮಿ, ವಲಯ ಸಮಿತಿ ಮುಖಂಡರಾದ ಎನ್.ಬಿ ಮಹಾಂತೇಶ್,  ಕಪಿನಿ ಗೌಡ,  ಗುರುಪ್ರಸಾದ್,ನವೀನ್ ಇದ್ದರು.

ಇದನ್ನು ಓದಿ : ಬೆಂಗಳೂರು ಮಳೆ: ಕೆಂಗೇರಿ ಕೆರೆಯಲ್ಲಿ ಕೊಚ್ಚಿ ಹೋಗಿದ್ದ ಅಣ್ಣ- ತಂಗಿ ಸಾವು

ಈ ಕೆರೆ ಅಂಗಳಕ್ಕೆ ತಂತಿ ಬೇಲಿ ಇಲ್ಲದಿರುವುದು..ಮಳೆ ಎಚ್ಚರಿಕೆ ಘೋಷಣೆಯಾದ ನಂತರವಾದರು ರೆಡ್ ಅಲರ್ಟ್ ಪಟ್ಟಿ ಕಟ್ಟದಿರುವುದು ಈ ಅವಘಡಕ್ಕೆ ಮೂಲ ಕಾರಣವಾಗಿದ್ದು ಬಿ.ಬಿಎಂ.ಪಿ ಯ ಈ ನಿರ್ಲಕ್ಷ್ಯವನ್ನು ಖಂಡಿಸಲಾಗಿದೆ‌. ನಾಗರತ್ನಾವರು ಬಡ ದಲಿತ ಮಹಿಳೆಯಾಗಿದ್ದು ಬಿ.ಬಿ.ಎಂ.ಪಿ ಯ ಒಣ ತ್ಯಾಜ್ಯ ಘಟಕದ ದಿನಗೂಲಿಕಾರಳಾಗಿದ್ದಾಳೆ.

ಈ ಹಿನ್ನಲೆಯಲ್ಲಿ ಬಡ ದಲಿತ ಕುಟುಂಬವನ್ನು  ಸ್ಥಳಿಯ ಶಾಸಕ ಸೋಮಶೇಖರ್ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಭೇಟಿ ಮಾಡಿಲ್ಲ ..ತನ್ನದೇ ಸಂಸ್ಥೆಯ ಬಿ.ಬಿ.ಎಂ.ಪಿ ಲೇಬರ್ ಮನೆಗೆ ಯಾವೊಬ್ಬ ಬಿ.ಬಿ.ಎಂ.ಪಿ ಉನ್ನತ ಅಧಿಕಾರಿ ಭೇಟಿ ನೀಡಿಲ್ಲದಿರುವುದು ಅತ್ಯಂತ ಬೇಜಾಬ್ದಾರಿ ವರ್ತನೆಯಾಗಿದೆ ಎಂದು ನಿಯೋಗ ಆರೀಪಿಸಿದೆ.

ಈ ಹಿನ್ನಲೆಯಲ್ಲಿ ಮೃತ ಮಕ್ಕಳ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿಯನ್ನು ನೀಡಬೇಕು, ಕುಟುಂಬಕ್ಕೆ 50 ಲಕ್ಷ ಪರಿಹಾರವನ್ನು ಘೋಷಿಸಬೇಕೆಂದು ನಿಯೋಗ ಒತ್ತಾಯಿಸಿದೆ.

ಇದನ್ನು ನೋಡಿ : ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ಥ : ಕೆರೆಯಂತಾದ ರಸ್ತೆಗಳು! Janashakthi Media

Donate Janashakthi Media

Leave a Reply

Your email address will not be published. Required fields are marked *