ಸಮಾನತೆ ಹಾಗೂ ಸೌಹಾರ್ದತೆಗಾಗಿ ಎಸ್ಎಫ್ಐ 16ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ

ಚಿಕ್ಕಬಳ್ಳಾಪುರ: ಶಿಕ್ಷಣದ ಸಾರ್ವತ್ರಿಕ, ಸಮಾನತೆ ಹಾಗೂ ಸೌಹಾರ್ದತೆಗಾಗಿ ಆಗ್ರಹಿಸಿ ಎಸ್‌ಎಫ್‌ಐ 16ನೇ ರಾಜ್ಯ ಸಮ್ಮೇಳನಕ್ಕೆ ಚಿಕ್ಕಬಳ್ಳಾಪುರದಲ್ಲಿ ಚಾಲನೆ ಸಿಕ್ಕಿದೆ. ಸಮಾನತೆ 

ಸಮ್ಮೇಳನದ ಭಾಗವಾಗಿ ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿರುವ ವಿದ್ಯಾರ್ಥಿಗಳು ನಗರದ ಮುಖ್ಯ ರಸ್ತೆಗಳಲ್ಲಿ ಬೃಹತ್ ಮೆರವಣೆಗೆ ನಡೆಸಿದರು.

ಇದನ್ನೂ ಓದಿ: ಅತ್ಯಾಚಾರ ಎಸಗಿ, ಸಂತ್ರಸ್ತೆಗೆ 10 ಲಕ್ಷರೂ ಆಮಿಷ ನೀಡಿದ ಸ್ವಾಮೀಜಿ

ಬಳಿಕ ನಗರದ ಕೆಇಬಿ ಸಮುದಾಯ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶವನ್ನು ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಖ್ಯಾತ ಸಾಹಿತಿ ಗೊಲ್ಲಹಳ್ಳಿ ಶಿವ ಪ್ರಸಾದ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಚಾಲನೆ ನೀಡಿದರು.

ಸಮ್ಮೇಳನದಲ್ಲಿ ಎಸ್ ಎಫ್ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ.ಸಾನು, ರಾಜ್ಯಾಧ್ಯಕ್ಷ ಅಮರೇಶ್, ರಾಜ್ಯ ಕಾರ್ಯದರ್ಶಿ ಭೀಮನಗೌಡ, ಜಿಲ್ಲಾ ಅಧ್ಯಕ್ಷ ಸೋಮಶೇಖರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಇದನ್ನೂ ನೋಡಿ: ಮೂಡಾ ವಿಷಯ ಎಂಬುದು ಕೇವಲ ಸಿದ್ದರಾಮಯ್ಯನ ಹೆಸರು ಕೆಡಿಸುವ ಹುನ್ನಾರವಷ್ಟೇ! – ಸಂತೋಷ್ ಲಾಡ್ Janashakthi Media

Donate Janashakthi Media

Leave a Reply

Your email address will not be published. Required fields are marked *