ಚೆಸ್‌ ವಿಶ್ವಕಪ್: 2ನೇ ಸ್ಥಾನಕ್ಕೆ ತೃಪ್ತಿಪಟ್ಟ ಭಾರತದ ಗ್ರಾಂಡ್ ಮಾಸ್ಟರ್ ಪ್ರಜ್ಞಾನಂದ

ಬಾಕು: ಅಜೆರ್ಬೈಜಾನ್‌ನಲ್ಲಿ ಗುರುವಾರ ನಡೆದ ಫಿಡೆ ಚೆಸ್‌ ವಿಶ್ವಕಪ್-2023ರಲ್ಲಿ ಭಾರತದ 18 ವರ್ಷದ ಗ್ರಾಂಡ್‌ ಮಾಸ್ಟರ್‌ ರಮೇಶ್‌ ಬಾಬು ಪ್ರಜ್ಞಾನಂದ ಅವರು ಎರಡನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ಅವರ ವಿರೋಧಿ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಫಿಡೆ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಮತ್ತು ಬುಧವಾರ ಇಬ್ಬರು ಆಟಗಾರರು ತಲಾ ಒಂದು ಡ್ರಾ ಪಂದ್ಯ ಮಾಡಿಕೊಂಡಿದ್ದರು.

ಪ್ರತಿಷ್ಠಿತ ಆಟಗಾರರಿದ್ದ ಪಂದ್ಯಾವಳಿಯಲ್ಲಿಅವರು ಸ್ಥಾನ ಪಡೆದಿದ್ದರಿಂದ ಅಂತಿಮ ಆಟದಲ್ಲಿ ಪ್ರಜ್ಞಾನಂದ ಅವರು ಸೋತರೂ FIDE ವಿಶ್ವಕಪ್‌ನ ಈ ಪಂದ್ಯವು ಅವರಿಗೆ ಐತಿಹಾಸಿಕ ಘಟನೆಯಾಗಿ ಉಳಿಯಲಿದೆ. ಫೈನಲ್‌ಗೆ ತಲುಪುವ ದಾರಿಯಲ್ಲಿಅವರು ವಿಶ್ವದ ನಂಬರ್‌ 2 ಆಟಗಾರ ಹಿಕರು ನಕಮುರಾ ಮತ್ತು 3 ನೇ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದ್ದರು.

ಇದನ್ನೂ ಓದಿ: ಅಣ್ವಸ್ತ್ರ ಘಟಕದ ಕಲುಷಿತ ನೀರು ಪೆಸಿಫಿಕ್‌ ಸಾಗರಕ್ಕೆ: ಜಪಾನ್‌ ನಡೆಗೆ ಚೀನಾ ಖಂಡನೆ

18 ವರ್ಷಕ್ಕೆ ವಿಶ್ವಕಪ್‌ ಪಂದ್ಯಾಟಕ್ಕೆ ಕಾಲಿಟ್ಟಿರುವ ಪ್ರಜ್ಞಾನಂದ ಅವರು, ವಿಶ್ವಕಪ್‌ನ ಫೈನಲ್ ತಲುಪಿದ ಅತ್ಯಂತ ಕಿರಿಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ವಿಶ್ವ ಚೆಸ್‌ ರ‍್ಯಾಂಕಿಂಗ್‌ನಲ್ಲಿ 31ನೇ ಸ್ಥಾನದಲ್ಲಿರುವ ಪ್ರಜ್ಞಾನಂದ ಅವರು ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ ಅತ್ಯಂತ ಕಡಿಮೆ ಶ್ರೇಯಾಂಕದ ಆಟಗಾರರಾಗಿದ್ದಾರೆ.

ಮಂಗಳವಾರ ಮತ್ತು ಬುಧವಾರ ಇಬ್ಬರು ಆಟಗಾರರು ತಲಾ ಒಂದು ಪಂದ್ಯ ಡ್ರಾ ಮಾಡಿಕೊಂಡಿದ್ದ ಹಿನ್ನೆಲೆ ಫಲಿತಾಂಶ ನಿರ್ಧರಿಸಲು ಇಂದು ಟೈ-ಬ್ರೇಕರ್ ಪಂದ್ಯ ನಡೆಸಲಾಯಿತು. ಪ್ರಜ್ಞಾನಂದ 47 ನಡೆಗಳಲ್ಲಿ ಮೊದಲ ಟೈ-ಬ್ರೇಕರ್‌ನಲ್ಲಿ ಸೋಲುಂಡರು. ಮೊದಲ ಟೈಬ್ರೇಕರ್‌ನಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು ಅಂತಿಮವಾಗಿ ಕಾರ್ಲ್‌ಸನ್ ಮೇಲುಗೈ ಸಾಧಿಸಿದರು. ಎರಡನೇ ಟೈ-ಬ್ರೇಕರ್‌ನಲ್ಲಿ ಪ್ರಜ್ಞಾನಂದ ವಿರುದ್ಧ ಡ್ರಾ ಮಾಡಿಕೊಂಡ ನಂತರ ಕಾರ್ಲ್‌ಸನ್ 1.5 ಅಂತರದಿಂದ ಪಂದ್ಯವನ್ನು ಜಯಿಸಿದರು.

ವಿಡಿಯೊ ನೋಡಿ: ಸೌಜನ್ಯಳಿಗೆ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಸಂಘದ ಸಾಲ ಕಟ್ಟುವುದಿಲ್ಲ

Donate Janashakthi Media

Leave a Reply

Your email address will not be published. Required fields are marked *