ತಿರುವನಂತಪುರಂ : ರಮೇಶ್ ಚೆನ್ನಿತ್ತಾಲ ಅವರು ನಕಲಿ ಮತದಾರರು ಎಂದು ರಾಜ್ಯದ 140 ಕ್ಷೇತ್ರಗಳ ಸುಮಾರು 4 ಲಕ್ಷ ಜನರ ಮತವಿವರಗಳು ಮತ್ತು ವೈಯುಕ್ತಿಕ ಮಾಹಿತಿಯನ್ನು ಸಿಂಗಾಪುರ ಮೂಲದ ಕಂಪನಿಗೆ ಸೋರಿಕೆ ಮಾಡಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವರು ಹಾಗೂ ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯರಾದ ಎಂ.ಎ. ಬೇಬಿ ಅವರು ಆರೋಪಿಸಿದ್ದಾರೆ.
ಇದನ್ನು ಓದಿ : ಕೇರಳದಿಂದ ರಾಜ್ಯಸಭಾ ಸದಸ್ಯರ ಚುನಾವಣೆ: ಚುನಾವಣಾ ಆಯೋಗದ ಹಿಂಜರಿಕೆ ಏಕೆ?
ಯುಡಿಎಫ್ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ರಮೇಶ್ ಚೆನ್ನಿತ್ತಾಲ ಅವರು ಆಪರೇಷನ್ ಟ್ವಿನ್ಸ್ ವೆಬ್ (https://operationtwins.com/) ನಲ್ಲಿ ಕ್ಷೇತ್ರವಾರು ಬಹಿರಂಗಗೊಂಡಿರುವ ಸುಮಾರು 4,34,000 ಮತದಾರರ ವಿವರಗಳು ಬಹಿರಂಗಗೊಂಡಿದೆ. ವಿರೋಧ ಪಕ್ಷದ ನಾಯಕರು ವಿವರಗಳನ್ನು ಬಹಿರಂಗಪಡಿಸುವ ಬಗ್ಗೆ ವ್ಯಕ್ತಿಗಳ ಅನುಮತಿ ಪಡೆದಿಲ್ಲ.
ಭಾವಚಿತ್ರ ಸಮೇತ ವೈಯುಕ್ತಿಕ ವಿವರಗಳು ವಿದೇಶಿ ಕಂಪನಿಗೆ ಹಸ್ತಾಂತರಿಸಿರುವುದು ಕ್ರಿಮಿನಲ್ ಅಪರಾಧವಾಗಿದೆ. ಅವರ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳಬೇಕೆಂದು ಎಂ.ಎ.ಬೇಬಿ ಹೇಳಿದ್ದಾರೆ.