ಬೆಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 09ರಂದು ಪ್ರಕಟವಾಗಿದ್ದು, ಶೇ 86 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆನ್ಲೈನ್ ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಬಳಿಕ ಶಿಕ್ಷಣ ಸಚಿವ ಮಧುಬಂಗಾರಪ್ಪ ಏಪ್ರಿಲ್ 09ರ ಸಂಜೆ 6ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ಇದಕ್ಕೂ ಮೊದಲು ಆನ್ಲೈನ್ನಲ್ಲಿ https://karresults.nic.in ವೆಬ್‌ಸೈಟ್ ಮೂಲಕ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು. ಒಂದು ವೇಳೆ ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ ಮೂಲಕವೂ ರಿಸ್ಟಲ್ ಚೆಕ್ ಮಾಡಬಹುದಾಗಿದ್ದು ಹೇಗೆ ಎನ್ನುವುದನ್ನು ಸುದ್ದಿಯ ಕೊನೆಯಲ್ಲಿ ಕೊಡಲಾಗಿದೆ.
ಶೇ.86ರಷ್ಟು ಮಕ್ಕಳು ಉತ್ತೀರ್ಣ
ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಹೌದು…2025-26ನೇ ಸಾಲಿನ ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಶೇ.86ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ: ಕೇರಳ ವಿಧಾನಸಭಾ ಚುನಾವಣೆ: 33.28% ಮತದಾನ ದಾಖಲು
ಅಂದರೆ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ.
ವಾಣಿಜ್ಯ ವಿಭಾಗದಲ್ಲಿ ದಿಶಾ ಫಸ್ಟ್
ವಾಣಿಜ್ಯ ವಿಭಾಗದಲ್ಲಿ ದಿಶಾ ಎನ್ನುವ ದಕ್ಷಿಣಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ 600 ಅಂಕಗಳಿಗೆ 600 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಪರೀಕ್ಷೆಗೆ ಎದುರಿಸಿದ ವಿದ್ಯಾರ್ಥಿಗಳ ಸಂಖ್ಯೆ
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ ರಾಜ್ಯಾದ್ಯಂತ ಒಟ್ಟು 1217 ಕೇಂದ್ರಗಳಲ್ಲಿ ನಡೆದಿದ್ದು, 5174 ಕಾಲೇಜುಗಳ ಒಟ್ಟು 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಣಿ ಮಾಡಿಕೊಂಡಿದ್ದರು. ಈ ಪೈಕಿ ಸೈನ್ಸ್ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯ ವಿಭಾಗದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.
ನಿಮ್ಮ ರಿಸಲ್ಟ್ ಹೀಗೆ ಚೆಕ್ ಮಾಡಿ
ದ್ವಿತೀಯ ಪಿಯುಸಿ ಫಲಿತಾಂಶದ ಮಾಹಿತಿ ಅಧಿಕೃತ ವೆಬ್‌ಸೈಟ್ https://karresults.nic.in ಲಿಂಕ್ ಮೂಲಕ ರಿಸಲ್ಟ್ ವೀಕ್ಷಿಸಬಹುದಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ, ‘Submit’ ಬಟನ್ ಒತ್ತಿದ ತಕ್ಷಣ ಅಂಕಪಟ್ಟಿ ಪರದೆ ಓಪನ್ ಆಗಲಿದೆ. ಇನ್ನುಳಿದಂತೆ ಕರ್ನಾಟಕ ಒನ್ ಮೊಬೈಲ್ ಆ್ಯಪ್ ನಲ್ಲಿ ಸಿಗಲಿದೆ. ವಿದ್ಯಾರ್ಥಿಗಳ ಮೊಬೈಲ್‌ಗೆ SMS ಮೂಲಕ ಫಲಿತಾಂಶದ ಮಾಹಿತಿ ರವಾನೆಯಾಗುತ್ತದೆ. ಇನ್ನು ಈ ವರ್ಷ ಪ್ರಥಮ ಬಾರಿಗೆ ಡಿಜಿಲಾಕರ್‌ನಲ್ಲೂ https://www.digilocker.govt.in ನಲ್ಲೂ ರಿಸಲ್ಟ್ ವೀಕ್ಷಿಸಬಹುದಾಗಿದೆ.
ಇದನ್ನೂ ನೋಡಿ: ಕರ್ನಾಟಕದ ಮತದಾರರ ಪಟ್ಟಿ ಪರಿಶೀಲನೆ – ಮ್ಯಾಪಿಂಗ್ ಆಗದ ಮತದಾರರು ಎಷ್ಟು? Janashakthi Media
