ಬೆಂಗಳೂರು : ಕೆಇಎ ಪರೀಕ್ಷಾ ಅಕ್ರಮದ ಬೆನ್ನಲೆ ಇದೀಗ ಎಸ್‌ಎಸ್‌ಎಲ್‌ಸಿ ನಕಲಿ ಅಂಕ ಪಟ್ಟಿ ಹಗರಣ ಬೆಳಕಿಗೆ ಬಂದಿರುವುದು ಸಂಚಲನ ಮೂಡಿಸಿದೆ. 14 ಮಂದಿ ನಕಲಿ ಅಂಕಪಟ್ಟಿಯನ್ನು ಕೊಟ್ಟು ಕೇಂದ್ರ ಸರ್ಕಾರದ ನೌಕರಿಯನ್ನು ಗಿಟ್ಟಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಕಲಿ
ನಕಲಿ ಅಂಕಪಟ್ಟಿ ಸೃಷ್ಠಿಸಿ ಹುದ್ದೆ ಪಡೆದು ವಂಚನೆ ಮಾಡಿರುವ ಘಟನೆ ರಾಜ್ಯದ ವಿವಿಧ ಜಿಲ್ಲೆಗಳಲಿ ಕಂಡು ಬಂದಿದೆ. ಶಿರಸಿಯ ಅಂಚೆ ಕಚೇರಿಯಲ್ಲಿ ಗ್ರಾಮೀಣ ಅಂಚೆ ಸೇವಕರಾಗಿ 14 ಜನರು ಹುದ್ದೆ ಪಡೆದಿದ್ದಾರೆ. 2023ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ 14 ಮಂದಿ ಆಯ್ಕೆಯಾಗಿದ್ದರು. ಮಾರ್ಚ್ 2023ರಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿ ಹುದ್ದೆ ಪಡೆದಿದ್ದರು. ಅಂಕಪಟ್ಟಿಯ ಸತ್ಯಾಸತ್ಯತೆ ಪರಿಶೀಲಿಸಿದಾಗ ವಂಚನೆ ಬಯಲಾಗಿದೆ. ಈ ಕುರಿತು ಅಂಚೆ ಇಲಾಖೆಯ ಅಂಚೆ ನಿರೀಕ್ಷಕರಿಂದ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನು ಓದಿ : ಬದುಕಿನ ಓಟಕ್ಕೆ ಗೋಲಿಸೋಡ ಕಾಯಕ
ಕಲಬುರಗಿ ವಿಭಾಗದ ಕಲಬುರಗಿ ಜಿಲ್ಲೆಯಲ್ಲಿ 27, ವಿಜಯಪುರ ಜಿಲ್ಲೆಯಲ್ಲಿ 1, ಶಿರಸಿಯಲ್ಲಿ 2, ಯಾದಗಿರಿ ಜಿಲ್ಲೆಯಲ್ಲಿ 7, ಬೀದರ್ ಜಿಲ್ಲೆಯಲ್ಲಿ 4 ಮತ್ತು ರಾಯಚೂರು ಜಿಲ್ಲೆಯಲ್ಲಿ 1 ಸೇರಿ ಒಟ್ಟು 42 ನಕಲಿ ಅಂಕ ಪಟ್ಟಿ ಜಾಲ ಪತ್ತೆಯಾಗಿದೆ. ಅಂಚೆ ಇಲಾಖೆಯ 1,714 ಹುದ್ದೆಗಳ ನೇಮಕಾತಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕಲಬುರಗಿಯಲ್ಲಿ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ನಕಲಿ ಅಂಕ ಪಟ್ಟಿ ನೀಡಿ ಸಿಕ್ಕಿಬಿದ್ದಿದ್ದಾರೆ. ಅಂಚೆ ಇಲಾಖೆಯಿಂದ ಎಸ್ಎಸ್ಎಲ್‌ಸಿ ಅಂಕಪಟ್ಟಿ ಪರಿಶೀಲನೆ ವೇಳೆ 8 ಮಂದಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ.
ಓದಿಗೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ ಎಂದು ನಿತ್ಯ ಅಲೆದಾಟ ನಡೆಸುತ್ತಿರುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದ್ದರೆ, ಇನ್ನೊಂದೆಡೆ ಇಂತಹ ಕೃತ್ಯಗಳ ಮೂಲಕ ಉದ್ಯೋಗ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಇಂತವರ ವಿರುದ್ಧ ಹಾಗೂ ಇದರ ಹಿಂದೆ ಇರುವ ಜಾಲವನ್ನು ಪತ್ತೆ ಮಾಡಿ ಶಿಕ್ಷೆಯನ್ನು ವಿಧಿಸಬೇಕಿದೆ.
ಇದನ್ನು ನೋಡಿ : ಹಿಟ್ & ರನ್ ಪ್ರಕರಣಗಳ ಹೊಸ ಕಾನೂನಿಗೇಕೆ ಇಷ್ಟು ವಿರೋಧ? ಚಾಲಕರಿಗೆ ಇದು ತೂಗುಕತ್ತಿಯೇ? Janashakthi Media