ಉದ್ಯಮಿ ರಾಜ್ ಕುಂದ್ರಾ  ಹಾಗೂ ನಟಿ  ಶಿಲ್ಪಾ ಶೆಟ್ಟಿವಿರುದ್ಧ ವಂಚನೆ ಪ್ರಕರಣ ದಾಖಲು

ಮುಂಬೈ : ಉದ್ಯಮಿ  ರಾಜ್ ಕುಂದ್ರಾ  ಹಾಗೂ ಬಾಲಿವುಡ್ ನಟಿ  ಪತ್ನಿ ಶಿಲ್ಪಾ ಶೆಟ್ಟಿವಿರುದ್ಧ ವಂಚನೆ ಪ್ರಕರಣ ಗುರುವಾರ ದಾಖಲಾಗಿದೆ.
ಮುಂಬೈ

ಉದ್ಯಮಿ ದೀಪಕ್ ಕೊಠಾರಿ ಅವರಿಗೆ ವಂಚಿಸಲಾಗಿದೆ ಎನ್ನಲಾದ ಬೆಸ್ಟ್ ಡೀಲ್‌ ಟಿವಿ ಕಂಪನಿಗೆ ಸಂಬಂಧಿಸಿದಂತೆ ₹60.4 ಕೋಟಿ ಮೊತ್ತದ ಸಾಲ ಮತ್ತು ಹೂಡಿಕೆ ಎಂಬ ಆರೋಪ ಸಂಬಂಧ ಜುಹು ಪೊಲೀಸ್ ಠಾಣೆಯ ಆರ್ಥಿಕ ವಂಚನೆ ವಿಭಾಗವು ಪ್ರಕರಣ ದಾಖಲಿಸಿಕೊಂಡಿದೆ.

ಮುಂಬೈ

ಇದನ್ನೂ ಓದಿ: ಜಸ್ಟೀಸ್‌ ನಾಗಮೋಹನ್‌ ದಾಸ್‌ ವರದಿಯಲ್ಲಿ ತಾಂತ್ರಿಕವಾಗಿ ಸಮಸ್ಯೆ ಇದ್ದರೂ ತಾತ್ವಿಕವಾಗಿ ಸರಿ ಇದೆ: ಕೋಟಿಗಾನಹಳ್ಳಿ ರಾಮಯ್ಯ

‘ಆರೋಪವನ್ನು ಶಿಲ್ಪಾ ಶೆಟ್ಟಿ ಹಾಗೂ ರಾಜ್‌ ಕುಂದ್ರಾ ನಿರಾಕರಿಸಿದ್ದಾರೆ. ಬಹಳ ಹಿಂದೆ ನಡೆದ ವ್ಯವಹಾರವಿದು. ಕಂಪನಿಯು ಆರ್ಥಿಕ ಸಂಕಷ್ಟ ಎದುರಿಸಿತ್ತು ಮತ್ತು ದೀರ್ಘಕಾಲದ ಕಾನೂನು ಸಂಘರ್ಷ ಎದುರಿಸುತ್ತಿತ್ತು’ ಎಂದು ಶಿಲ್ಪಾ ಶೆಟ್ಟಿ ಪರ ವಕೀಲ ಪ್ರಶಾಂತ್ ಪಾಟೀಲ್ ತಿಳಿಸಿದ್ದಾರೆ.

‘ಈ ಪ್ರಕರಣದಲ್ಲಿ ನನ್ನ ಕಕ್ಷೀದಾರರು ಯಾವುದೇ ಕ್ರಿಮಿನಲ್‌ ಕೃತ್ಯ ನಡೆಸಿಲ್ಲ. ಪೊಲೀಸರು ಕೇಳಿರುವ ಎಲ್ಲಾ ದಾಖಲೆಗಳನ್ನು ಕಾಲಕಾಲಕ್ಕೆ ಸಲ್ಲಿಸಿದ್ದಾರೆ. ಹಣದ ವ್ಯವಹಾರದ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಇದೊಂದು ಆಧಾರ ರಹಿತ ಆರೋಪವಾಗಿದ್ದು, ನನ್ನ ಕಕ್ಷಿದಾರರು ಸುಳ್ಳು ಆರೋಪ ಹೊರಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನೂ ನೋಡಿ : ಅಮೆರಿಕಾದ ಎದೆ ನಡುಗಿಸಿದ್ದ ಮಹಾನ್‌ ನಾಯಕ ಫಿಡೆಲ್‌ ಕ್ಯಾಸ್ಟ್ರೊ Janashakthi Media

Donate Janashakthi Media

Leave a Reply

Your email address will not be published. Required fields are marked *