ಈ ಬಾರಿಯ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿಸಿ ಸಂಭ್ರಮಿಸೋಣ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಈ ಬಾರಿಯ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿಸಿ ಸಂಭ್ರಮಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನರಲ್ಲಿ ಮನವಿ ಮಾಡಿದ್ದಾರೆ.

ಜಲಮೂಲಗಳ ಸಂರಕ್ಷಣೆಯ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಪಿಒಪಿ ಇಂದ ತಯಾರಿಸಿದ, ಭಾರಲೋಹಯುಕ್ತ ಬಣ್ಣದಿಂದ ಅಲಂಕರಿಸಿದ ಗಣಪತಿ ವಿಗ್ರಹಗಳ ಮಾರಾಟ ಮತ್ತು ನೀರಿನಲ್ಲಿ ವಿಸರ್ಜನೆ ಮಾಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿ ಆದೇಶ ನೀಡಿದೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಚತುರ್ಥಿ, ಮೊಹರಂ ಸರಳ ಆಚರಣೆಗೆ ಮಾರ್ಗಸೂಚಿ ಪ್ರಕಟ

ಜಲಚರಗಳ ಜೀವ ರಕ್ಷಣೆ, ನೀರಿನ ಆಕರಗಳ ಸಂರಕ್ಷಣೆಯ ಹೊಣೆಯನ್ನು ಅರಿತು ಮಣ್ಣಿನ ಗಣಪತಿಯನ್ನಷ್ಟೇ ಪೂಜಿಸೋಣ. ಈ ಬಾರಿಯ ಚೌತಿಯನ್ನು ಪರಿಸರ ಸ್ನೇಹಿಯಾಗಿಸಿ ಸಂಭ್ರಮಿಸೋಣ ಎಂದು ಕರೆ ನೀಡಿದ್ದಾರೆ. ಗಣೇಶ 

ವಿಡಿಯೋ ನೋಡಿ:ಚೇಳುಗಳ ಜಾತ್ರೆ : ಚೇಳುಗಳ ಜೊತೆ ಜನರ ಸಂಭ್ರಮ, ಉಳಿಯಬೇಕಿದೆ ಚೇಳಿನ ಸಂತತಿ Janashakthi Media

 

Donate Janashakthi Media

Leave a Reply

Your email address will not be published. Required fields are marked *