ಮಂಡ್ಯದವರು ಛತ್ರಿಗಳು ಎಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಕ್ಕರೆ ನಾಡು ಮಂಡ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂದು ಛತ್ರಿ ಹಿಡಿದು ರಸ್ತೆಗೆ ಇಳಿದ ಅನ್ನದಾತರು ಕನಕಪುರದ ಬಂಡೆಯ ವಿರುದ್ಧ ಛತ್ರಿ ಚಳುವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ :-ಬೆಂಗಳೂರು| ರಾಜ್ಯದಲ್ಲಿ ನೇಮಕಾತಿ, ಬಡ್ತಿ ಪ್ರಕ್ರಿಯೆಗೆ ತಡೆ
ಡಿಸಿಎಂ ಡಿ.ಕೆ.ಶಿವಕುಮಾರ್ ಮಂಡ್ಯದವರು ಛತ್ರಿಗಳು ಎಂದು ಹೇಳಿದಾಗಿಂದ ಮಂಡ್ಯ ಜನರು ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋಮವಾರದ ಸಂಜೆಯವರೆಗೆ ಡಿಕೆಗೆ ಕ್ಷಮೆಯಾಚನೆ ಮಾಡಲು ಮಂಡ್ಯ ರೈತ ಸಂಘಟನೆಗಳು ಸಮಯ ನೀಡಿತ್ತು. ಆದರೆ ಡಿಕೆಶಿ ಇದುವರೆಗೆ ಕ್ಷಮೆಯಾಚನೆ ಮಾಡದ ಕಾರಣ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ರಸ್ತೆಗೆ ಇಳಿದು ಛತ್ರಿ ಚಳುವಳಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ :-ಎರಡು ಬಾರಿ ಹನಿಟ್ರ್ಯಾಪ್ ಗೆ ಯತ್ನಿಸಿದ್ದರು: ಕೆ.ಎನ್.ರಾಜಣ್ಣ
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಸಂಜಯ್ ವೃತ್ತದವರೆಗೆ ಛತ್ರಿ ಹಿಡಿದು ಮೆರವಣಿಗೆ ಬಂದ ಪ್ರತಿಭಟನಾಕಾರರು ಹಳೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಬಂಡೆ ಕಲ್ಲನ್ನು ಸುತ್ತಿಗೆಯಿಂದ ಹೊಡೆದು ಡಿಕೆಶಿಯನ್ನು ಇದೇ ರೀತಿ ಛಿದ್ರ ಮಾಡುತ್ತೇವೆ ಎಂದು ವಿಡಂಬನೆ ಮಾಡಿದರು. ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂದ ಡಿ.ಕೆ.ಶಿವಕುಮಾರ್ ನಿಜವಾದ ಛತ್ರಿ. ಮಂಡ್ಯ ಜಿಲ್ಲೆಯ ಜನರು ಛತ್ರಿಗಳು ಅಲ್ಲ, ಈ ಮಣ್ಣಲ್ಲಿ ಹುಟ್ಟಿದವರು ಸ್ವಾಭಿಮಾನಗಳು. ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರ ಮಂಡ್ಯದವರು. ಡಿ.ಕೆ.ಶಿವಕುಮಾರ್‌ಗೆ ಪೆನ್ನು ಪೇಪರ್ ನೀಡಿರುವವರು ಮಂಡ್ಯದವರು. ಇಂತಹ ಜನರನ್ನು ಛತ್ರಿಗಳು ಎಂದ ಶಿವಕುಮಾರ್ ನಿಜವಾದ ಅಂತರರಾಜ್ಯ ಛತ್ರಿ ಎಂದು ಕಿಡಿಕಾರಿದರು. ಈ ಹೋರಾಟ ಆರಂಭ ಮುಂದೆಯೂ ಶಿವಕುಮಾರ್ ಕ್ಷಮೆ ಕೇಳದಿದ್ದರೆ ಮಂಡ್ಯಗೆ ಬಂದ್ರೆ ಗೋ ಬ್ಯಾಕ್ ಚಳುವಳಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಒಟ್ಟಾರೆ ಮಂಡ್ಯದವರು ಛತ್ರಿಗಳು ಎಂದ ಕನಕಪುರದ ಬಂಡೆಯ ವಿರುದ್ಧ ಸಕ್ಕರೆ ನಾಡಿನ ಜನರು ಛತ್ರಿ ಚಳುವಳಿ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.