ಚಾರ್ಮಾಡಿ ಘಾಟಿ: ಸೌಂದರ್ಯ ವೀಕ್ಷಣೆ ಕಾರಣ,ಸುಗಮ ಸಂಚಾರಕ್ಕೆ ಅಡ್ಡಿ

ಮಂಗಳೂರು: ಚಾರ್ಮಾಡಿ ಘಾಟಿಯ ಸೌಂದರ್ಯ ವೀಕ್ಷಣೆ ನೆಪದಲ್ಲಿ ಪ್ರವಾಸಿಗರು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಚಾರ್ಮಾಡಿ ಘಾಟಿ ಪರಿಸರದಲ್ಲೂ ಉತ್ತಮ ಮಳೆ ಸುರಿಯುತ್ತಿದ್ದು ಇಲ್ಲಿನ ತೊರೆ,ಹಳ್ಳ, ಜಲಪಾತಗಳು ತುಂಬಿಕೊಂಡು ಆಕರ್ಷಣೀಯ ವಾಗಿವೆ.ಇದರಿಂದ ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಅಧಿಕಗೊಂಡಿದ್ದು, ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಇತರ ವಾಹನ ಸವಾರರು ಭಾರಿ ಸಮಸ್ಯೆ ಎದುರಿಸುವಂತಾಗಿದೆ.

ಭಾನುವಾರ ರಜಾ ದಿನವಾದ ಕಾರಣ ಈ ರಸ್ತೆಯಲ್ಲಿ ಅತಿ ಹೆಚ್ಚಿನ ವಾಹನ ಸಂಚಾರವು ಇತ್ತು. ಜತೆಗೆ ಮಳೆ ಹಾಗೂ ಭಾರಿ ಮಂಜು ಕವಿದ ವಾತಾವರಣದೊಂದಿಗೆ ವಾಹನ ಚಲಾಯಿಸುವುದು ಸವಾಲಾಗಿತ್ತು. ಇದರ ಮಧ್ಯೆ ನೂರಾರು ಪ್ರವಾಸಿಗರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವ ಮೂಲಕ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದರು. ಇದರಿಂದ ಘಾಟಿ ಪರಿಸರದಲ್ಲಿ ವಾಹನಗಳ ಭಾರಿ ಸರದಿಯು ಕಂಡು ಬಂತು.
-ರಸ್ತೆಯಲ್ಲೆ ನೃತ್ಯ-
ಜಲಪಾತ ಪರಿಸರಗಳಲ್ಲಿ ವಾಹನ ನಿಲ್ಲಿಸಿ ರಸ್ತೆ ಮಧ್ಯೆ ನೃತ್ಯ ಮಾಡುವುದುಕೇಕೆ ಹಾಕುವುದನ್ನು ಮುಂದುವರಿಸಿದ ಹಲವು ಪ್ರವಾಸಿಗರು ಇತರ ವೀಕ್ಷಕರಿಗೆ ಮುಜುಗರದ ವಾತಾವರಣವನ್ನು ಸೃಷ್ಟಿಸಿದರು. ವಾಹನ ಸವಾರರು ಸಾಕಷ್ಟು ಎಚ್ಚರಿಕೆಯಿಂದ ವಾಹನ ಚಲಾಯಿಸಿದರು ಅವರಲ್ಲಿ ಮಾತಿನ ಚಕಮತಿಯನ್ನು ನಡೆಸುವುದು ಕಂಡುಬಂತು. ಸದಾ ರಸ್ತೆಯನ್ನು ಆಕ್ರಮಿಸಿದ ಹಲವು ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದ ಸನ್ನಿವೇಶಗಳು ಕಂಡುಬಂದವು.
ಇದರ ಜತೆ ಜಾರುವ ಬಂಡೆಗಳನ್ನು ಏರುವುದು ಮಕ್ಕಳನ್ನು ಹತ್ತಿಸಿ ಫೋಟೋ ಕ್ಲಿಕ್ಕಿಸುವುದು ಕಂಡುಬಂತು. ಅಪಾಯಕಾರಿ ತೊರೆಗಳಿಗೆ ಇಳಿದು ಮೋಜು-ಮಸ್ತಿ ನಡೆಸುವವರ ಸಂಖ್ಯೆಯು ಇತ್ತು.

ಇದನ್ನೂ ಓದಿ:ಕರಾವಳಿ ಜಿಲ್ಲೆಗಳಲ್ಲಿ ಮಳೆ ಹಾನಿ ಅಧಿಕಾರಿಗಳ ಜೊತೆ ಸಿಎಂ ಚರ್ಚೆ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಗೆ ಸೂಚನೆ

ಇಲಾಖೆ ನಿರ್ಲಕ್ಷ- ಪ್ರವಾಸಿಗರ,ವಾಹನ ಸವಾರರ ಸುರಕ್ಷತೆ ಕಾಪಾಡಬೇಕಾದ ಅರಣ್ಯ,ಪೊಲೀಸ್ ಇಲಾಖೆ ಚಾರ್ಮಾಡಿ ಘಾಟಿ ಪರಿಸರದಲ್ಲಿ ನಡೆಯುತ್ತಿರುವ ಅನಗತ್ಯ ಚಟುವಟಿಕೆಗಳತ್ತ ಗಮನಹರಿಸುವುದು ಅಗತ್ಯವಾಗಿದೆ. ಚಿಕ್ಕಮಗಳೂರು ವಿಭಾಗದಲ್ಲಿ ಹೆಚ್ಚಿನ ಜಲಪಾತ,ತೊರೆ,ಹಳ್ಳಗಳಿದ್ದು ಈ ಪ್ರದೇಶದಲ್ಲಿ ವಾಹನ ಸವಾರರಿಗೆ ಪ್ರವಾಸಿಗರಿಂದ ಭಾರಿ ಸಮಸ್ಯೆ ಇದ್ದರೂ ಇಲ್ಲಿ ಯಾವುದೇ ಗಸ್ತು, ಅಗತ್ಯ ಸೂಚನಾ ಫಲಕಗಳು ಇಲ್ಲದಿರುವುದು ವಿಪರ್ಯಾಸವಾಗಿದೆ. ಇತ್ತೀಚೆಗೆ ಬಣಕಲ್ ನ ಸಂಘವೊಂದು ಘಾಟಿ ಪ್ರದೇಶದಲ್ಲಿ ಪ್ರವಾಸಿಗರ ಮೋಜು-ಮಸ್ತಿ ವಿರೋಧಿಸಿ ಅಭಿಯಾನ ನಡೆಸಿದರು ಅದು ಯಾವುದೇ ಪ್ರಯೋಜನ ನೀಡಿಲ್ಲ ಸಾರ್ವಜನಿಕರು ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *