ಬೆಂಗಳೂರು: ಚಾರಿತ್ರಿಕ ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ ರಾಜ್ಯ ಮಟ್ಟದ ಅನಿರ್ದಿಷ್ಟ ಹೋರಾಟ 7ನೇ ದಿನಕ್ಕೆ ಕಾಲಿಟಿದೆ. ಅನ್ನದಾತರ ಹೋರಾಟವನ್ನು ಬೆಂಬಲಿಸಿ ರಾಜ್ಯದ ಹಲವಾರು ಮಹಿಳಾ ಸಂಘಟನೆಗಳ ಕರೆಯ ಮೇಲೆ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ವಸುಂಧರಾ ಭೂಪತಿಯವರು ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಹೊಸ ಕೃಷಿ ಮಸೂದೆಗಳು ಜನವಿರೋಧಿ, ರೈತವಿರೋಧಿ, ಮಹಿಳಾ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಹಾಗೂ ಸಂವಿಧಾನ ವಿರೋಧಿಯಾಗಿದೆ ಹಾಗಾಗಿ ಈ ಕಾಯ್ದೆಗಳನ್ನು ರದ್ದುಪಡಿಸಬೇಕು. ಈ ಮಸೂದೆಗಳಿಂದ ರೈತರಿಗೆ ತೊಂದರೆಯಾಗಲಿದ್ದು, ಅವರು ಹೇಳಿದ ಜೀಜ ಬಿತ್ತನೆ, ಗೊಬ್ಬರ, ಜೌಷಧಿ ಖರೀದಿ ಹೀಗೆ ಅವರು ಹೇಳಿದಂತೆ ರೈತರು ಕೇಳಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಈಗಾಗಲೇ ಅಮೇರಿಕದಲ್ಲಿ ಅಮೇಜಾನ್ ಕಂಪನಿ ಭೂಮಿ ಕಬಳಿಸಿದಂತೆ ಮುದೊಂದು ದಿನ ಮುಂಡಗ ಹಣ ಪಡೆದ ರೈತು ತಮ್ಮ ಭೂಮಿಯನ್ನು ಕಳೆದುಕೊಳ್ಳಬೇಕಾದ ಸಂರ್ಭಗಳು ಉಂಟಾಗುತ್ತವೆ. ಆದ್ದರಿಂದ ಈ ಪರಿಸ್ಥಿತಿ ನಮ್ಮ ದೇಶದ ರೈತರಿಗೆ ಬರುವುದು ಬೇಡ ಎಂದು ಅವರು ಹೇಳಿದರು.
ರೈತ ಹೋರಾಟವನ್ನು ಬೆಂಬಲಿಸಿ ರಾಜ್ಯದ ಹಲವಾರು ಮಹಿಳಾ ಸಂಘಟನೆಗಳ ಭಾಗವಹಿಸಿದ್ದು, ಮೂರು ಕರಾಳ ಕೃಷಿ ಮಸೂದೆಗಳನ್ನು ಹಿಂದಕ್ಕೆ ಪಡೆಯಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒಕ್ಕೊರಲಿನಿಂದ ಒತ್ತಾಯಿಸಿದರು.
ಈ ಪ್ರತಿಭಟನಾ ಧರಣಿಯಲ್ಲಿಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷರಾದ ವಿಮಲಾ ಕೆ., ಕೆ.ಎಸ್ ಲಕ್ಷ್ಮೀ, ಕಾರ್ಯದರ್ಶಿ ಗೌರಮ್ಮ, ಸಾಹಿತಿ ಕೆ.ಶರೀಫಾ, ಎನ್.ಎಫ್.ಡಬ್ಲೂ.ಐ, ಎಐಎಂಎಸ್ಎಸ್, ಎಐಪಿಡಬ್ಲೂಎ ಸಂಘಟನೆಯ ನೂರಕ್ಕು ಹೆಚ್ಚು ಜನ ಭಾಗವಹಿಸಿದ್ದರು.