ಬೆಂಗಳೂರು| ಹಣಕ್ಕಾಗಿ ಬೇಡಿಕೆ ಟಿ ಜೆ ಅಬ್ರಾಹಂ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ಕೆಎಎಸ್‌ ಅಧಿಕಾರಿ ಬಿ.ಸುಧಾ ಅವರಿಗೆ ಹಣ ನೀಡುವಂತೆ ಬೇಡಿಕೆ ಇರಿಸಿದ್ದ ಆರೋಪದ ಅಡಿ ಟಿ.ಜೆ.ಅಬ್ರಾಹಂ ಹಾಗೂ ಮಧ್ಯವರ್ತಿ ಸುನೀಲ್‌ ಎಂಬುವವರ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ ಜೀವನಭೀಮಾನಗರ ಠಾಣೆ ಪೊಲೀಸರು, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ

ಕೆಎಎಸ್ ಅಧಿಕಾರಿ ಡಾ. ಬಿ ಸುಧಾ‌ ವಿರುದ್ಧ ಲೋಕಾಯುಕ್ತ, ಎಸಿಬಿ‌ಗೆ ಅಬ್ರಾಹಂ ದೂರು ನೀಡಿದ್ದರು. ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪದಡಿ ಅಬ್ರಾಹಂ ದೂರು ನೀಡಿದ್ದರು. ಈ ದೂರಿನ ಸಂಬಂಧ ಯಾವುದೇ ತೊಂದರೆ‌ ಕೊಡದಿರಲು , ಅಂದ್ರೆ ಈ ಪ್ರಕರಣ ಮುಂದುವರೆಸದಿರಲು ಅಬ್ರಾಹಂ ಡೀಲ್ ನಡೆಸಿದ್ದರು. ಸುನೀಲ್ ಎಂಬುವನನ್ನ ಬಳಸಿಕೊಂಡು ಅಬ್ರಾಹಂ ಈ ಡೀಲ್ ನಡಸಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಇಬ್ಬರ ವಿರುದ್ಧ FIR ದಾಖಲಾಗಿತ್ತು, ಹೀಗಾಗಿ ಬಂಧನ ಭೀತಿಯಿಂದ ಈ ಇಬ್ಬರೂ ನೀರಿಕ್ಷಣ ಜಾಮೀನು ಕೂಡ ಪಡೆದಿದ್ರು.

ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಐಸಿಎಸ್ ಮುಖಂಡ ದೆಹಲಿಯಲ್ಲಿ ಅರೆಸ್ಟ್!

ಈ ನಂತರದಲ್ಲಿ ಇಬ್ಬರಿಗೂ ಜೆಬಿ ನಗರ ಪೋಲಿಸರು ವಿಚಾರಣೆ ಗೆ ಠಾಣೆಗೆ ಬರುವಂತೆ ನೋಟಿಸ್ ನೀಡಿದ್ದರು.ಆರೋಪಿಗಳ ಕಾಲ್ ಡಿಟೈಲ್ಸ್, ದನಿ ಮಾದರಿ ವಿಡಿಯೋ ಪರೀಕ್ಷೆಯ ವರದಿಗಳನ್ನು ಎಫ್ ಎಸ್ ಎಲ್‌ಗೆ ಕಳುಹಿಸಲಾಗಿತ್ತು. ಆರೋಪಿಗಳು ಮಾಡಿದ್ದ ಕಾಲ್‌ ಡಿಟೈಲ್ಸ್, ಚಾಟ್ಸ್ ನ ಪೋಲಿಸರು ಸಂಗ್ರಹಿಸಿದ್ದರು. FSL ವರದಿ ಸೇರಿ ಹಲವು ಸಾಕ್ಷ್ಯಗಳನ್ನ ಸಂಗ್ರಹಿಸಿ ಉಲ್ಲೆಖ ಮಾಡಲಾಗಿದೆ.

ಮೂಡ ಹಗರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದ ಟಿ ಜೆ ಅಬ್ರಹಾಂ ಗೆ ಇದೀಗ ಈ ಸಂದರ್ಭದಲ್ಲಿ ಈ ಪ್ರಕರಣ ಮುಳುವಾಗಿ ಪರಿಣಮಿಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ನೋಡಿ: ಹಿರೋಷಿಮಾ, ನಾಗಸಾಕಿ ನಗರಗಳ ಮೇಲೆ ಅಮೇರಿಕಾ ಹಾಕಿದ ಅಣುಬಾಂಬಿನ ಭೀಕರತೆ ಬಿಚ್ಚಿಟ್ಟ ಯಮುನಾ ಗಾಂವ್ಕರ್

Donate Janashakthi Media

Leave a Reply

Your email address will not be published. Required fields are marked *