ಆಂದ್ರಪ್ರದೇಶ: ತೆಲುಗು ದೇಶಂ ಪಾರ್ಟಿ ಮುಖಂಡ ಎನ್.ಆರ್. ಚಂದ್ರ ಬಾಬು ನಾಯ್ಡು ಅವರಿಂದು ಬುಧವಾರ ನಾಲ್ಕನೇ ಬಾರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ನಾಯ್ಡುನೊಂದಿಗೆ ಜಜನಾ ಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲದೇ ನಾಯ್ಡು ಪುತ್ರ ನಾ.ರಾ. ಲೋಕೇಶ್ ಕೂಡ ಸಚಿವರಾಗಿ ಪ್ರಮಾನ ವಚನ ಸ್ವೀಕರಿಸಿದರು. ಇವರೊಂದಿಗೆ ಇನ್ನೂ 23 ಮಂದಿ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯಪಾಲ ಅಬ್ದುಲ್ ನಜೀರ್ ಅವರು ಸಿಎಂ, ಡಿಸಿಎಂ ಹಾಗು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ವಿಜಯವಾಡ ಹೊರವಲಯದಲ್ಲಿನ ಗನ್ನವಾರಂ ವಿಮಾನ ನಿಲ್ದಾಣದ ಬಳಿಯ ಕೇಸರಪಳ್ಳಿ ಪ್ರದೇಶದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದನ್ನೂ ಓದಿ: “ಅಮರಾವತಿ” ಆಂದ್ರಪ್ರದೇಶದ ನೂತನ ರಾಜಧಾನಿ
ಚಂದ್ರಬಾಬು ನಾಯ್ಡು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 1995ರಲ್ಲಿ ಅವಿಭಜಿತ ಆಂಧ್ರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದರು. ಈ ಅವಧಿಯಲ್ಲೆ ಎರಡು ಅವಧಿಗೆ ಅವರು ರಾಜ್ಯದ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು. ನಂತರ 2014ರಲ್ಲಿ ಮೂರನೇ ಬಾರಿ ಮುಖ್ಯಮಂತ್ರಿ ಸ್ತಾನ ಅಲಂಕರಿಸಿದ್ದ ನಾಯ್ಡು 2019ರವರೆಗೆ ಸಿಎಂ ಆಗಿದ್ದರು. ನಾಲ್ಕನೇ
ಪವನ್ ಕಲ್ಯಾಣ, ನಾರಾ ಲೋಕೇಶ್, ಅಚ್ಚೆನ್ನಾಯ್ಡು, ಕೊಲ್ಲು ರವೀಂದ್ರ, ನಾದೆಂದ್ಲ ಮನೋಹರ್ ಪಿ. ನಾರಾಯಣ, ವಂಗಲಪುಡಿ ಅನಿತಾ, ಸತ್ಯಕುಮಾರ್ ಯಾದವ್, ನಿಮ್ಮಲಾ ರಾಮನಾಯ್ಡು, ಎನ್.ಎಂ.ಡಿ. ಫಾರೂಕ್, ಆನಂ ರಾಮನಾರಾಯಣ ರೆಡ್ಡಿ, ಪಯ್ಯಾವುಲ ಕೇಶವ್, ಅನಗಣಿ ಸತ್ಯ ಪ್ರಸಾದ್, ಕೊಲುಸು ಪಾರ್ಥಸಾರಥಿ, ಬಾಲವೀರಾಂಜನೇಯಸ್ವಾಮಿ, ಗೊಟ್ಟಿಪಾಟಿ ರವಿ, ಕಂದುಲ ದುರ್ಗೇಶ್, ಗುಮ್ಮಡಿ ಸಂಧ್ಯಾ ರಾಣಿ, ಬಿ.ಸಿ. ಜನಾರ್ದನರೆಡ್ಡಿ, ಟಿ.ಜಿ. ಭರತ್, ಎಸ್.ಸವಿತಾ, ವಾಸಮಶೆಟ್ಟಿ ಸುಭಾಷ್, ಕೊಂಡಪಲ್ಲಿ ಶ್ರೀನಿವಾಸ್, ರಾಮಪ್ರಸಾದ್ ರೆಡ್ಡಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ನಂತರ ವೇದಿಕೆ ಮೇಲೆ ಉಪಸ್ಥಿತರಿದ್ದ ಪ್ರಧಾನಿ ಮೋದಿ ಬಳಿಗೆ ಆಗಮಿಸಿದ ನಾಯ್ಡುವನ್ನು ಮೋದಿ ಅಪ್ಪಿಕೊಂಡಿದ್ದು ಕಂಡು ಬಂದಿತು. ಕೇಂದ್ರ ಸಚಿವರಾದ ಅಮಿತ್ ಶಾ, ಜೆ.ಪಿ. ನಡ್ಡಾ ಮತ್ತು ಬಂಡಿ ಸಂಜಯ್ ಕುಮಾರ್ ಉಪಸ್ಥಿತರಿದ್ದರು.
ಇದನ್ನೂ ನೋಡಿ: ಮಾರ್ಕ್ಸ್‌ವಾದ ಮತ್ತು ಅದರ ಆಧಾರಿತ ಚಳುವಳಿಗಳ ಕೊಲೆಗೆ ನಿರಂತರವಾಗಿ ಹಲವು ಪ್ರಯತ್ನಗಳು” ನಡೆದಿವೆ Janashakthi Media