ನವದೆಹಲಿ: ವಿವಾದಿತ ಚಂಡೀಗಢ ಮೇಯರ್ ಪಟ್ಟವನ್ನು ಬಿಜೆಪಿಯ ಮನೋಜ್ ಸೋಂಕರ್ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಗಂಟೆಗಳ ಮೊದಲು ಈ ಘಟನೆ ನಡೆದಿದೆ. ಎಎಪಿ ಮತ್ತು ಕಾಂಗ್ರೆಸ್ ಮೈತ್ರಿ ಬಹುಮತವಿದ್ದರೂ ಚುನಾವಣಾಧಿಕಾರಿಯನ್ನು ಬಳಸಿಕೊಂಡು ಬಿಜೆಪಿ ಅಕ್ರಮವಾಗಿ ಮೇಯರ್ ಸ್ಥಾನವನ್ನು ವಶಪಡಿಸಿಕೊಂಡಿದೆ ಎಂದು ಎಎಪಿ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿತ್ತು.
ಬಿಜೆಪಿಯ ಮನೋಜ್ ಸೋಂಕರ್ ರಾಜೀನಾಮೆ ನೀಡುವುದರೊಂದಿಗೆ ಹೊಸ ಮೇಯರ್ ಚುನಾವಣೆಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ನಡುವೆ ಮೂರು ಆಮ್ ಆದ್ಮಿ ಪಕ್ಷದ (ಎಎಪಿ) ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಮುನ್ಸಿಪಲ್ ಕಾರ್ಪೊರೇಷನ್ ಹೌಸ್‌ನಲ್ಲಿ ಬಿಜೆಪಿ ಅಭ್ಯರ್ಥಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ.
ಇದನ್ನೂ ಓದಿ: ಖ್ಯಾತ ಉರ್ದು ಕವಿ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ರಾಮಭದ್ರಾಚಾರ್ಯಗೆ ಜ್ಞಾನಪೀಠ ಪ್ರಶಸ್ತಿ
35 ಸದಸ್ಯ ಬಲವಿರುವ ಚಂಡೀಗಢ ಮುನ್ಸಿಪಲ್ ಕಾರ್ಪೋರೇಷನ್ ಹೌಸ್‌ನಲ್ಲಿ ಬಿಜೆಪಿ 14 ಕೌನ್ಸಿಲರ್‌ಗಳು ಮತ್ತು ಒಬ್ಬ ಪದನಿಮಿತ್ತ ಸದಸ್ಯ ಸೇರಿ ಪ್ರಸ್ತುತ ಒಟ್ಟು 15 ಮತಗಳನ್ನು ಬಿಜೆಪಿ ಹೊಂದಿದೆ. ಇದಕ್ಕೂ ಮೊದಲು ಎಎಪಿ 13 ಕೌನ್ಸಿಲರ್‌ಗಳನ್ನು ಮತ್ತು ಕಾಂಗ್ರೆಸ್ ಏಳು ಸದಸ್ಯರನ್ನು ಹೊಂದಿದೆ. ಶಿರೋಮಣಿ ಅಕಾಲಿ ದಳವು ಸದನದಲ್ಲಿ ಒಬ್ಬ ಕೌನ್ಸಿಲರ್ ಅನ್ನು ಹೊಂದಿದೆ. ಎಎಪಿಯ ಮೂವರು ಬಿಜೆಪಿ ಸೇರಿರುವುದರಿಂದ ಬಿಜೆಪಿ 18 ಮತಗಳನ್ನು ಹೊಂದುವುದರೊಂದಿಗೆ ಎಎಪಿ 10 ಮತಗಳಿಗೆ ಇಳಿಯಲಿದೆ.
ಜನವರಿ 30 ರಂದು ಚಂಡೀಗಢದ ಮೇಯರ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪ್ರೇರಿತ ಚುನಾವಣಾಧಿಕಾರಿ ಅಂಚೆ ಮತಪತ್ರಗಳನ್ನು ತಿರುಚಿದ್ದಾರೆ ಎಂದು ಆರೋಪಿಸಿ ಎಎಪಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ನಿಗದಿಪಡಿಸಿದೆ. ಇದೇ ವೇಳೆ ಚುನಾವಣಾಧಿಕಾರಿ ಮತಪತ್ರಗಳ ಮೇಲೆ ಗೀಚುವ ವಿಡಿಯೊವನ್ನು ಎಎಪಿ ಬಿಡುಗಡೆ ಮಾಡಿತ್ತು.
ವಿಡಿಯೊ ನೋಡಿ:ಪಿಚ್ಚರ್ ಪಯಣ -145ಚಿತ್ರ: ಯಜಮಾನನಿರ್ದೇಶನ : ಆರ್, ಶೇಷಾದ್ರಿ, ರಾಧಾ ಭಾರತಿಕಥೆ ಹೇಳುವವರು: ಭಾವನಾ ಮರಾಠೆ