ಚಾಮರಾಜನಗರ ಜಿಲ್ಲಾಸ್ಪತ್ರೆ ಘಟನೆ ಸರಕಾರದ ದುರಾಡಳಿತಕ್ಕೆ ಸಾಕ್ಷಿ-ಸಿಪಿಐ(ಎಂ)

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ 24 ಘಂಟೆಯಲ್ಲಿ ಆಮ್ಲಜನಕ ದೊರೆಯದೇ 24 ಸಾವುಗಳು ಸಂಭವಿಸಿವೆಯೆಂಬ ಅಘಾತಕಾರಿ ವರದಿ ಬಂದಿದೆ. ಇದು ಸರಕಾರದ ದಿವ್ಯ ನಿರ್ಲಕ್ಷ್ಯ ಮತ್ತು ದುರಾಡಳಿತದ ಫಲವಾಗಿದೆಯೆಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಆರೋಪಿಸಿದ್ದಾರೆ.

ಇದನ್ನು ಓದಿ: ಆಕ್ಸಿಜನ್ ಕೊರತೆ ಚಾಮರಾಜನಗರದಲ್ಲಿ 24 ಮಂದಿ ಸಾವು

ಈ ಬಗ್ಗೆ ಹೇಳಿಕೆ ನೀಡಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿನ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ.

ಈ ಘಟನೆಯಿಂದಾಗಿ ಅಮಾಯಕ ಪ್ರಜೆಗಳು ಸಾವಿಗೀಡಾಗಬೇಕಾಯಿತು. ಅದರಿಂದಾಗಿ ಆ ಕುಟುಂಬಗಳು ತೀವ್ರ ದುಃಖವನ್ನು ಅನುಭವಿಸಬೇಕಾಗಿ ಬಂದಿತು. ಈ ಸಾವುಗಳಿಗೆ ಸರಕಾರವೇ ನೇರ ಹೊಣೆಗಾರನಾಗಿದೆ ಎಂದು ಸಿಪಿಐ(ಎಂ) ಪಕ್ಷವು ಹೇಳಿದೆ.

ಇದನ್ನು ಓದಿ: ಉಸಿರಾಡೋಕ್ಕೆ ಕಷ್ಟ ಆಗುತ್ತೆ ಎಂದು ಫೋನ್‌ ಮಾಡಿದ್ದ ನವವಿವಾಹಿತ 2ತಾಸಲ್ಲೇ ಪ್ರಾಣಬಿಟ್ಟ

ಉನ್ನತ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಸರಕಾರ ಹೇಳಿರುವುದು ತನ್ನ ಹೊಣೆಗಾರಿಕೆಯನ್ನು ಮುಚ್ಚಿಟ್ಟುಕೊಳ್ಳುವ ದುರುಳ ತಂತ್ರವಾಗಿದೆ. ತಕ್ಷಣವೇ, ಸದರಿ ಪ್ರಕರಣವನ್ನು ಸ್ವತಂತ್ರವಾದ ಉನ್ನತ ನ್ಯಾಯಾಂಗ ತನಿಖೆಗೊಳಪಡಿಸಲು ಮತ್ತು ಆ ಮೂಲಕ ನಿಜವಾದ ಅಪರಾಧಿಗಳನ್ನು ಶಿಕ್ಷಿಸಲು ಅಗತ್ಯ ಕ್ರಮ ವಹಿಸಬೇಕೆಂದು ಸಿಪಿಐ(ಎಂ) ಮುಖ್ಯಮಂತ್ರಿಗಳನ್ನು ಬಲವಾಗಿ ಒತ್ತಾಯಿಸಿದೆ.

ಅದೇ ರೀತಿ, ಸಾವಿಗೀಡಾದ ನಾಗರೀಕರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ಸಿಪಿಐ(ಎಂ) ವ್ಯಕ್ತಪಡಿಸಿದೆ. ಸದರಿ ಕುಟುಂಬಗಳಿಗೆ ತಕ್ಷಣವೇ, ರಾಜ್ಯ ಸರಕಾರ 10 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆಯೂ ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *