ಬೆಂಗಳೂರು: ಲೈಂಗಿಕ ಪ್ರಕರಣದ ಆರೋಪಿ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣನನ್ನು ಶತಾಯಗತಾಯ ಬಂಧಿಸುವಂತೆ ಸಮಾನ ಮನಸ್ಕರು “ಹಾಸನ ಚಲೋ” ಜಾಥಾವನ್ನು ಹಮ್ಮಿಕೊಂಡಿದ್ದಾರೆ.
ಜಯನಗರ ಮತ್ತು ಬಸವನಗುಡಿ ವಲಯದ ಸಮಾನ ಮನಸ್ಕರೆಲ್ಲಾ ಈ ಚಲೋ ಹಾಸನ್ ಜಾಥಾವನ್ನು ಹಮ್ಮಿಕೊಂಡಿದ್ದಾರೆ.
ಇದನ್ನು ಓದಿ : ಕಾರು ಗುದ್ದಿ ಆರು ವರ್ಷದ ಬಾಲಕಿ ಮೃತ
ಪ್ರಕರಣ ಹೊರಬೀಳುತ್ತಿದ್ದಂತೆ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದು,ಸದ್ಯ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದ್ದು,ಎಸ್‌ಐಟಿ ಆರೋಪಿಗಾಗಿ ಶೋಧಿಸುತ್ತಿದೆ. ಪ್ರಜ್ವಲ್ನ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಕೇಂದ್ರದ ವಿದೇಶಾಂಗ ಸಚಿವಾಲಯ ಕ್ರಮಕೈಗೊಂಡಿದೆ ಎಂದು ವರದಿಯಾಗಿದೆ.
ಇಂದು ಪ್ರೆಸ್ ಕ್ಲಬ್ ನಲ್ಲಿ ನಾವೆದ್ದು ನಿಲ್ಲದಿದ್ದರೆ ವೇದಿಕೆಯ ಕಡೆಯಿಂದ ಹಾಸನ ಚಲೋಗೆ ಬೆಂಬಲಿಸಿ, ಲೈಂಗಿಕ ದೌರ್ಜನ್ಯ ಕ್ಕೆ ಒಳಗಾದ ಮಹಿಳೆಯರು ಅಪರಾಧಿ ಭಾವದಲ್ಲಿ ನರಳದೇ ಧೈರ್ಯವಾಗಿ ಮುಂದೆ ಬಂದು ದೂರು ದಾಖಲಿಸಲು ಕೋರುವ ಹಾಗೂ ಸಮಾಜದ ಬಂಧುಗಳು ಮಹಿಳೆಯರನ್ನು ದೂಷಿಸದೇ ಅವರ ಜೊತೆ ನ್ಯಾಯಕ್ಕಾಗಿ ನಿಲ್ಲುವಂತೆ ವಿನಂತಿಸುವ ಕರಪತ್ರ ಬಿಡುಗಡೆ ಮಾಡಲಾಯಿತು ಈ ವೇಳೆ ಕೆ.ಎಸ್. ವಿಮಲಾ, ಅಖಿಲಾ ವಿಧ್ಯಾಸಂದ್ರ, ಮಮತಾ ಯಜಮಾನ, ಅಕ್ಕೈ ಪದ್ಮಶಾಲಿ, ಮಲ್ಲಿಗೆ, ಮೈತ್ರೇಯಿ ಇದ್ದರು.
ಈ ನಿಟ್ಟಿನಲ್ಲಿ ಇಂದು ಸೋಮವಾರ ಮೇ27ರ ಸಂಜೆ 5.30ರ ಹೊತ್ತಿಗೆ ಎನ್‌ಆರ್‌ಕಾಲೋನಿ ಬಸ್‌ನಿಲ್ದಾಣದ ಬಳಿ ಜಾಥಾ ಪ್ರಯುಕ್ತ ಸಮಾನಮನಸ್ಕರು ಪ್ರಜ್ವಲ್ ರೇವಣ್ಣ ಬಂಧಿಸಿ ಎಂಬ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಜನವಾದಿ ಮಹಿಳಾ ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.ಇನ್ನು ಮೇ 30ರ ಗುರುವಾರ “ಚಲೋ ಹಾಸನ್ ” ನಡೆಯಲಿದೆ.
ಇದನ್ನು ನೋಡಿ : ದೇವೇಗೌಡ್ರೆ ಜನ ನಿಮಗೆ ಅಧಿಕಾರ ಕೊಟ್ರು – ನೀವು ವಿಕೃತಿ ಕಾಮಿಯನ್ನು ಕೊಟ್ರಿ. ನಿಮಗೆ ನಾವು ತಕ್ಕ ಪಾಠ ಕಲಿಸುತ್ತೇವೆ.