ಚಂಡೀಗಢ: ಚಲೋ ದೆಹಲಿ ಆಂದೋಲನ ನಿರತ ರೈತರ ಮೇಲೆ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) ಜಾರಿಗೆ ತರಲು ಚಿಂತನೆ ನಡೆಸಿದ್ದ ಹರಿಯಾಣ ಸರ್ಕಾರದ ಪೊಲೀಸರು, ತಮ್ಮ ನಿರ್ಧಾರವನ್ನು ಇದೀಗ ಬದಲಿದ್ದಾರೆ. ಅಂಬಾಲ ಜಿಲ್ಲೆಯ ಕೆಲವು ರೈತ ಸಂಘದ ಮುಖಂಡರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ ಮಾಡುವುದನ್ನು ಮರುಪರಿಶೀಲಿಸಲಾಗಿದ್ದು, ಅದನ್ನು ಅನ್ವಯಿಸುವುದಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ಸಂಬಂಧಪಟ್ಟ ಎಲ್ಲರಿಗೂ ಸ್ಪಷ್ಟಪಡಿಸುವುದಾಗಿ ಅಂಬಾಲ ರೇಂಜ್ ಐಜಿಪಿ ಸಿಭಾಶ್ ಕಬಿರಾಜ್ ತಿಳಿಸಿದ್ದಾರೆ.
“ಶಾಂತಿ ಕಾಪಾಡಿಕೊಳ್ಳುವುದು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸಲು ಹರ್ಯಾಣ ಪೊಲೀಸರು ಪ್ರತಿಭಟನಾಕಾರರು ಮತ್ತು ಅವರ ನಾಯಕರಿಗೆ ಮನವಿ ಮಾಡುತ್ತಾರೆ” ಎಂದು ಅವರು ಹೇಳಿದ್ದಾರೆ. ಚಲೋ ದೆಹಲಿ ಆಂದೋಲನ ನಡೆಸುತ್ತಿರುವ ರೈತರು ಇನ್ನೂ ಹರಿಯಾಣ ಪ್ರವೇಶಿಸದ ಕಾರಣ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ರೈತರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕ್ರಮವನ್ನು ಸದ್ಯಕ್ಕೆ ಪೊಲೀಸರು ಆರಂಭಿಸುವುದಿಲ್ಲ ಎಂದು ಕಬಿರಾಜ್ ಹೇಳಿದ್ದಾರೆ.
ಇದನ್ನೂ ಓದಿ: ಕೇರಳ ಲೋಕಸಭೆ | 15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಐ(ಎಂ)
ರೈತರು ರಾಜ್ಯವನ್ನು ಪ್ರವೇಶಿಸಿ ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟುಮಾಡಿದರೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುತ್ತದೆ. ರೈತರ ಪ್ರತಿಭಟನೆಯ ವೇಳೆ ಶಂಭು ಗಡಿಯಲ್ಲಿ 30 ಪೊಲೀಸರು ಗಾಯಗೊಂಡಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. ಚಲೋ ದೆಹಲಿ
ಇದಕ್ಕೂ ಮೊದಲು ಹರ್ಯಾಣ ಪೊಲೀಸರು ರೈತ ಮುಖಂಡರು ಮತ್ತು ಸಂಘಗಳ ವಿರುದ್ಧ ಎನ್‌ಎಸ್‌ಎ ಪ್ರಾರಂಭಿಸಲು ನಿರ್ಧರಿಸಿದ್ದರು ಮತ್ತು ಸಾರ್ವಜನಿಕ ಆಸ್ತಿಗೆ ಉಂಟಾದ ಯಾವುದೇ ಹಾನಿಗೆ ಪ್ರತಿಭಟನಾಕಾರರು ಪರಿಹಾರವನ್ನು ಪಾವತಿಸಬೇಕಾಗುತ್ತದೆ ಎಂದು ನಿರ್ಧರಿಸಲಾಗಿತ್ತು. “ರೈತ ಚಳವಳಿಯ ಸಮಯದಲ್ಲಿ ಸರ್ಕಾರಿ ಆಸ್ತಿ ನಷ್ಟವನ್ನು ಸರಿದೂಗಿಸಲು ಪ್ರತಿಭಟನಾಕಾರರ ಆಸ್ತಿ ಜಪ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಲಾಗಿದೆ” ಎಂದು ಪೊಲೀಸರು ಹೇಳಿದ್ದರು.
किसान आन्दोलन के दौरान हुई सरकारी सम्पति के नुकसान की भरपाई आन्दोलनकारियो की सम्पति की कुर्की और बैंक खातो को सीज करने की कार्यवाही शुरू ।
अम्बाला पुलिस @police_haryana @AdgpAmbalaRange @DGPHaryana pic.twitter.com/97sCHZGvp1— Ambala Police (@AmbalaPolice) February 22, 2024
ಇದನ್ನೂ ಓದಿ: ಮೈಸೂರು | ತೆರಿಗೆ ಪಾಲಿನಲ್ಲಿ ಕೇಂದ್ರದಿಂದ ಅನ್ಯಾಯ : ಕರ್ನಾಟಕ ಜನರಂಗದಿಂದ ಅಹೋರಾತ್ರಿ ಧರಣಿ
ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯ ವೇಳೆ ಸರ್ಕಾರಿ ಮತ್ತು ಖಾಸಗಿ ಆಸ್ತಿಗೆ ಹಾನಿಯನ್ನುಂಟುಮಾಡಿದರೆ, ಅವರ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡು ಹಾನಿಯನ್ನು ಸರಿದೂಗಿಸಲಾಗುತ್ತದೆ ಎಂದು ಸಾರ್ವಜನಿಕರಿಗೆ ಈ ಹಿಂದೆ ತಿಳಿಸಲಾಗಿತ್ತು.
“ಈ ನಿಟ್ಟಿನಲ್ಲಿ, (ರೈತ) ಸಂಘಗಳ ಚಳವಳಿಗಾರರು ಮತ್ತು ಪದಾಧಿಕಾರಿಗಳ ವಿರುದ್ಧ ಸರ್ಕಾರವು ಕ್ರಮ ತೆಗೆದುಕೊಳ್ಳುತ್ತಿದೆ. ಈ ಆಂದೋಲನದ ಸಮಯದಲ್ಲಿ ಯಾವುದೇ ಸಾಮಾನ್ಯ ವ್ಯಕ್ತಿ ಯಾವುದೇ ಆಸ್ತಿ ನಷ್ಟವನ್ನು ಅನುಭವಿಸಿದ್ದರೆ, ಅವರು ಆಡಳಿತಕ್ಕೆ ನಷ್ಟದ ವಿವರಗಳನ್ನು ನೀಡಬಹುದು” ಎಂದು ಹರ್ಯಾಣ ಪೊಲೀಸ್ ತನ್ನ ‘ಎಕ್ಸ್’ ಖಾತೆಯಲ್ಲಿ ಹೇಳಿಕೊಂಡಿತ್ತು.
ಫೆಬ್ರವರಿ 13 ರಂದು ಪ್ರಾರಂಭವಾದ ‘ದೆಹಲಿ ಚಲೋ’ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಪ್ರತಿಭಟನಾ ನಿರತ ರೈತರು ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲಿರುವ ಶಂಭು ಮತ್ತು ಖಾನೌರಿ ಪಾಯಿಂಟ್‌ಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಎರಡು ಗಡಿ ಪಾಯಿಂಟ್‌ಗಳಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ರೈತರು ಘರ್ಷಣೆ ನಡೆಸಿದ್ದಾರೆ.
ವಿಡಿಯೊ ನೋಡಿ: ‘ತತ್ವಜ್ಞಾನಿ ಬಸವಣ್ಣ ಸಾಂಸ್ಕೃತಿಕ ನಾಯಕ’ ಹಿನ್ನೆಲೆ ಮತ್ತು ಆಗಬೇಕಾದ ಕೆಲಸಗಳು – ವಿಶ್ಲೇಷಣೆ : ಮೀನಾಕ್ಷಿ ಬಾಳಿ