ಬೆಂಗಳೂರು | ಕುವೆಂಪು ಸಾಹಿತ್ಯ ಕೇವಲ ಕಲೆ ಅಲ್ಲ, ವೈಚಾರಿಕ ಚಳುವಳಿ: ಬಂಜಗೆರೆ ಜಯಪ್ರಕಾಶ್

ಬೆಂಗಳೂರು: ಕುವೆಂಪು ಅವರ ಸಾಹಿತ್ಯವು ಕೇವಲ ಸಾಹಿತ್ಯಿಕ ಸೌಂದರ್ಯಕ್ಕಷ್ಟೇ ಸೀಮಿತವಾಗದೇ, ಸಮಾಜವನ್ನು ವೈಚಾರಿಕವಾಗಿ ರೂಪಿಸುವ ಮಹತ್ತರ ಚಿಂತನಾ ಪರಂಪರೆಯಾಗಿದೆ ಎಂದು ಸಾಹಿತಿ ಮತ್ತು ಚಿಂತಕ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು. ಬೆಂಗಳೂರು

ನಗರದ ನ್ಯಾಷನಲ್ ಕಾಲೇಜು ಜಯನಗರದಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಜನಶಿಕ್ಷಣ ಟ್ರಸ್ಟ್, ಬೆಂಗಳೂರು ಹಾಗೂ ನ್ಯಾಷನಲ್ ಕಾಲೇಜು, ಸ್ವಾಯತ್ತ, ಜಯನಗರ, ಬೆಂಗಳೂರು, ಕನ್ನಡ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಚಕೋರ-ಬೆಂಗಳೂರು ದಕ್ಷಿಣ : ಉಪನ್ಯಾಸ ಮಾಲಿಕೆ – ೧೧” ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಕುವೆಂಪು ಸಾಹಿತ್ಯವು ಅಂಧಶ್ರದ್ಧೆ, ಜಾತಿ ಭೇದ, ಲಿಂಗ ಅಸಮಾನತೆ ಮತ್ತು ಶೋಷಣೆಯ ವಿರುದ್ಧ ಮಾನವ ಬುದ್ಧಿವಂತಿಕೆಯನ್ನು ಜಾಗೃತಗೊಳಿಸುತ್ತದೆ. ಅವರ ಬರಹಗಳಲ್ಲಿ ವ್ಯಕ್ತಿಯ ಸ್ವಾತಂತ್ರ್ಯ, ಚಿಂತನೆಯ ಮುಕ್ತತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಆಳವಾಗಿ ಅಡಕವಾಗಿವೆ ಎಂದು ಬಂಜಗೆರೆ ಜಯಪ್ರಕಾಶ್ ವಿವರಿಸಿದರು.

ಇದನ್ನೂ ಓದಿ : ಮೈಸೂರು | ಜಂಟಿ ಅಧಿವೇಶನ ಕಡ್ಡಾಯ ಕರೆಯಲು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ

“ವಿಶ್ವಮಾನವ” ಎಂಬ ಕುವೆಂಪು ಅವರ ಕಲ್ಪನೆ ಕೇವಲ ತತ್ತ್ವವಲ್ಲ; ಅದು ವೈಚಾರಿಕ ಬದುಕಿನ ಮಾರ್ಗಸೂಚಿಯಾಗಿದೆ. ಈ ಕಲ್ಪನೆಯ ಮೂಲಕ ಕುವೆಂಪು ಮಾನವನನ್ನು ಧರ್ಮ, ಜಾತಿ ಮತ್ತು ಭಾಷೆಯ ಗಡಿ ಮೀರಿ ಯೋಚಿಸಲು ಪ್ರೇರೇಪಿಸಿದ್ದಾರೆ ಎಂದು ಅವರು ಹೇಳಿದರು.

ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಅಂಧನಂಬಿಕೆ, ದ್ವೇಷ ಮತ್ತು ಅಸಹಿಷ್ಣುತೆಗಳ ಸಂದರ್ಭದಲ್ಲಿ ಕುವೆಂಪು ಸಾಹಿತ್ಯದ ವೈಚಾರಿಕತೆಯನ್ನು ಹೊಸ ತಲೆಮಾರಿಗೆ ತಲುಪಿಸುವ ಅಗತ್ಯವಿದೆ. ಶಿಕ್ಷಣ ಕ್ಷೇತ್ರದಲ್ಲಿ ಕುವೆಂಪು ಅವರ ಚಿಂತನೆಗಳನ್ನು ಗಂಭೀರವಾಗಿ ಅಧ್ಯಯನ ಮಾಡುವ ಮೂಲಕ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕಾಗಿದೆ ಎಂದು ಬಂಜಗೆರೆ ಜಯಪ್ರಕಾಶ್‌ ಸಲಹೆ ನೀಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸುಮಾ ಸತೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು,  ಚಕೋರ ಬೆಂಗಳೂರು ದಕ್ಷಿಣದ ಸಂಚಾಲಕರಾದ ಡಾ. ಲಕ್ಷ್ಮಿ ನಾರಾಯಣ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ವೇದಿಕೆಯ ಮೇಲೆ ಜನಶಿಕ್ಷಣ ಟ್ರಸ್ಟ್‌ನ ಟ್ರಸ್ಟಿ  ವಸಂತರಾಜ್ ಎನ್ ಕೆ,  ಪ್ರಾಂಶುಪಾಲರಾದ ಡಾ. ಸಿ. ವಿಜಯಲಕ್ಷ್ಮಿ,  ಪ್ರಾಧ್ಯಾಪಕರುಗಳಾದ ಶಿವಣ್ಣ, ರಾಜಣ್ಣ ಕೆ.  ಚಂದನ, ಡಾ. ವಿ. ಸವಿತಾ,   ಸಹನ. ಕೆ ಹಾಗೂ ನೂರಾರು ವಿಧ್ಯಾರ್ಥಿಗಳು ಭಾಗವಹಿಸಿದರು.

ಇದನ್ನೂ ನೋಡಿ : ಸಂಕ್ರಾಂತಿ ಕವಿಗೋಷ್ಠಿ | ಕಾವ್ಯಗಳ ಹುಗ್ಗಿಯ ಸಂಭ್ರಮ Janashakthi Media

Donate Janashakthi Media

Leave a Reply

Your email address will not be published. Required fields are marked *