ಬೆಂಗಳೂರು: ಬಿಜೆಪಿ ಟಿಕೆಟ್ ನೀಡುದಾಗಿ ಹೇಳಿ ಉದ್ಯಮಿಯೊಬ್ಬರಿಂದ ಕೋಟ್ಯಾಂತರ ರೂಪಾಯಿ ಪಡೆದು ವಂಚನೆ ಮಾಡಿ ಬಂಧನಕ್ಕೊಳಗಾದ ದ್ವೇಷ ಭಾಷಣಕಾರ್ತಿ ಚೈತ್ರ ಕುಂದಾಪುರ ಹಗರಣದ ಹಿಂದಿರುವ ”ಪ್ರಭಾವಿ”ಗಳ ತನಿಖೆ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 20ರ ಬುಧವಾರದಂದು ”ಆಗ್ರಹ ಸಭೆ” ನಡೆಯಲಿದೆ.
ಸಭೆಯು ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿಯಿರುವ ಅಲುಮ್ನಿ ಹಾಲ್‌ನಲ್ಲಿ ಸಂಜೆ 5:30ಕ್ಕೆ ನಡೆಯಲಿದೆ. ”ಇನ್ನು ಮಲಗಿದರೆ ಏಳುವಾಗ ವಿಧಾನಸೌಧ ಇರುವುದಿಲ್ಲ. ಧರ್ಮ ರಕ್ಷಣೆ, ರಾಷ್ಟ್ರೀಯತೆ ಹೆಸರಿನಲ್ಲಿ ಯುವಜನತೆಯ ಬಲಿ ಪಡೆದು ನಡೆಸುವ ಬಹುಕೋಟಿ ಹಗರಣವನ್ನು ಬಯಲು ಮಾಡೋಣ” ಎಂದು ಆಗ್ರಹ ಸಭೆಯ ಆಹ್ವಾನ ಪತ್ರಿಕೆ ಹೇಳಿದೆ.
ಇದನ್ನೂ ಓದಿ: ಬೊಮ್ಮಾಯಿ ಅವರದ್ದು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲಹೆ: ಡಿಸಿಎಂ ಡಿ.ಕೆ.ಶಿವಕುಮಾರ್
ಉಡುಪಿಯ ಬೈಂದೂರಿನ ಹೊಟೇಲ್ ಉದ್ಯಮಿ ಬಾಬು ಪೂಜಾರಿ ಅವರಿಗೆ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಇತ್ತಿಚೆಗೆ ಬಂಧಿಸಿದ್ದರು. ಪ್ರಕರಣ ದಾಖಲಾದ ಮೇಲೆ ಚೈತ್ರ ಕುಂದಾಪುರ ತಲೆಮರೆಸಿಕೊಂಡಿದ್ದರು. ಅವರನ್ನು ಪೊಲೀಸರು ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬಾಬು ಪೂಜಾರಿ ಅವರಿಗೆ 7 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂಬ ಆರೋಪ ಬಂಧನಕ್ಕೊಳಟ್ಟವರ ಮೇಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ, ಗಗನ್ ಕಡೂರು, ಶ್ರೀಕಾಂತ ನಾಯಕ್, ಪ್ರಸಾದ್ ಹಾಗೂ ಇಂದು ಬಂಧನಕ್ಕೊಳಗಾದ ಸನ್ಯಾಸಿ ಅಭಿನವ ಹಾಲಶ್ರಿ ಸೇರಿ ಒಟ್ಟು ಐವರನ್ನು ಈವರೆಗೆ ಬಂಧಿಸಲಾಗಿದೆ.
ಬಿಜೆಪಿ ಪರ ಸಂಘಟನೆಗಳ ಸಭೆಗಳಲ್ಲಿ ದ್ವೇಷ ಭಾಷಣ ಮಾಡುತ್ತಿದ್ದ ಚೈತ್ರಾ ಕುಂದಾಪುರ ಸಾಮಾಜಿಕ ಸಾಮರಸ್ಯ ಕದಡಿವ ಕೃತ್ಯವನ್ನು ನಿರಂತರವಾಗಿ ಮಾಡುತ್ತಿದ್ದರು. ಕೊಮುಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಚೈತ್ರ ಮೇಲೆ ರಾಜ್ಯದ ಹಲವು ಕಡೆ ದೂರು ದಾಖಲಾಗಿತ್ತು.
ವಿಡಿಯೊ ನೋಡಿ: “ಹೈದರಾಬಾದ್ ವಿಮೋಚನಾ ದಿನ” ಮರೆಮಾಚಿದ ಸತ್ಯಗಳೇನು? ಜಿ.ಎನ್. ನಾಗರಾಜ್ ವಿಶ್ಲೇಷಣೆಯಲ್ಲಿ | Janashakthi Media