ಭಾಷೆ : ಮರಾಠಿ
ನಾಟಕಕಾರ: ಬಾದಲ್ ಸರ್ಕಾರ್
ನಿರ್ದೇಶನ : ಮಹೇಶ್ ಖಂಡಾರೆ
ತಂಡ : ಥಿಯೇಟರ್ ಫ್ಲೆಮಿಂಗ, ಪುಣೆ
ರಂಗಕರ್ಮಿ, ಸಂಘಟಕ ಪ್ರೊ. ಸಿ ಜಿ ಕೃಷ್ಣಸ್ವಾಮಿ ಅವರ ನೆನಪಿನಲ್ಲಿ ರಂಗನಿರಂತರ ಸಾಂಸ್ಕೃತಿಕ ಸಂಘ ಆಯೋಜಿಸಿರುವ 8ನೇ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಲ್ಕು ನಡೆಯುತ್ತಿದ್ದು, ಫೆಬ್ರವರಿ 20ರಂದು ಸಂಜೆ.7.15ಕ್ಕೆ ಬಂಗಾಳಿ ನಾಟಕಕಾರ ದಿವಂಗತ ಬಾದಲ್ ಸರ್ಕಾರ್ ಅವರ ರಚನೆ ಮಾಡಿರುವ ನಾಟಕ ಹತ್ತಮಾಲಾಚ್ಯ ಪಲ್ಯಾಡ್ ಪ್ರದರ್ಶನವಿದೆ.
ಇದನ್ನು ಓದಿ: ಫೆ.19ರಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ; 4ದಿನ – 4ವೇದಿಕೆ – 6ನಾಟಕ – 5ಕಿರುಚಿತ್ರ – 5ಕಾರ್ಯಕ್ರಮ
‘ಹತ್ತಮಲಾಚ್ಯ ಪಲ್ಯಾಡ್’ ಅಥವಾ ‘ಹತ್ತಮಲೆಯ ಆಚೆಗೆ’ ಎನ್ನುವ ನಾಟಕದಲ್ಲಿ, ಮೊಂಡುಸ್ವಭಾವದ ಇಬ್ಬರು ಕಳ್ಳರಾದ ಚಿಕ್ಕುರಾಂ ಮತ್ತು ವಿಕ್ಕುರಾಂ ಎನ್ನುವವರು ಸಿಕ್ಕಿಬೀಳುವ ಹೆದರಿಕೆಯಿಂದಾಗಿ ಒಂದು ನದಿಗೆ ಬೀಳುತ್ತಾರೆ. ಆ ನದಿ ಅವರನ್ನು ಹಿಂದೆಂದೂ ನೋಡಿಲ್ಲದ ಒಂದು ಜಗತ್ತಿಗೆ ಕೊಂಡುಹೋಗುತ್ತದೆ. ಈ ಅಪರಿಚಿತ ಪ್ರಪಂಚದಲ್ಲಿ ಕೊಳ್ಳುವುದು, ಮಾರುವುದು, ಹಣ ಯಾವುದೂ ಇಲ್ಲ. ಅಲ್ಲಿ ಹಿಂಸೆ ಕೂಡಾ ಇಲ್ಲ. ಅಲ್ಲಿರುವ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಮತ್ತು ಬಂದ ಫಲವನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ.
ಚಿಕ್ಕುರಾಂ ಮತ್ತು ವಿಕ್ಕುರಾಂ ಇಬ್ಬರಿಗೂ ಇದೊಂದು ಪರೀಕ್ಷೆಯಾಗಿಬಿಡುತ್ತದೆ. ಅವರು ತಮ್ಮ ಜಗತ್ತಿನ ಪಾಠಗಳನ್ನೆಲ್ಲಾ ಬಿಟ್ಟು ಇಲ್ಲಿ ಬದುಕಬಲ್ಲರೆ? ನಾಟಕ ಮುಂದುವರೆದಂತೆ ಅವರು ನಮ್ಮನ್ನೂ ಸಹ ನಮ್ಮ ಜಗತ್ತಿನ ಬಗ್ಗೆ, ನಮ್ಮದೇ ಪೂರ್ವಾಗ್ರಹಗಳ ಬಗ್ಗೆ ಚಿಂತಿಸಲು ಒತ್ತಾಯ ಮಾಡುತ್ತಾರೆ.
ಇದನ್ನು ಓದಿ: ಫೆ.20ರಿಂದ ಪುನೀತ್ ರಾಜ್ಕುಮಾರ್ ವೇದಿಕೆಯಲ್ಲಿ ಕಿರು ಚಿತ್ರೋತ್ಸವ ಪ್ರದರ್ಶನ
ನಾಟಕದ ನಿರ್ದೇಶಕ ಮಹೇಶ್ ಕಾಂಧಾರೆ ಪುಣೆಯ ಒಬ್ಬ ಯುವ ನಟ, ಬರಹಗಾರ ಮತ್ತು ನಿರ್ದೇಶಕ. ಕಳೆದ ಹತ್ತು ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಪುಣೆಯ ಸಾವಿತ್ರಿಬಾಯಿ ಪುಲೆ ವಿಶ್ವವಿದ್ಯಾಲಯ, ಲಲಿತ ಕಲಾ ಕೇಂದ್ರದಲ್ಲಿ ಕಲಿತ ಇವರು ಸ್ವರ್ಣ ಪದಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಅಲ್ಲಿ ಅನೇಕ ನಾಟಕಗಳಲ್ಲಿ ಭಾಗಿಯಾಗುವ ಅವಕಾಶವನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ.
ಥಿಯೇಟರ್ ಫ್ಲೆಮಿಂಗೋ, ಪುಣೆ ತಂಡವು ಒಂದು ಪ್ರವಾಸಿ ರಂಗಜಗತ್ತು. ಥಿಯೇಟರಿನ ಮೌಲ್ಯಗಳನ್ನು, ರಂಗಭೂಮಿಯ ಕಲೆಯನ್ನು ಯುವಜನಾಂಗಕ್ಕೆ ಪರಿಚಯಿಸುವುದು ತಂಡದ ಉದ್ದೇಶ.
ಕಲಾವಿದರಾದ ಶ್ರವಣ್ ಫೋಡ್ನೇಕರ್, ಪ್ರಣವ್ ತೆಂಗ್ಸೆ, ಪ್ರಜಾಕ್ತ ಕಾವ್ಲೇಕರ್ ಅವರು ಅಭಿನಯಿಸಿರುವ ಹತ್ತಮಾಲಾಚ್ಯ ಪಲ್ಯಾಡ್ ನಾಟಕ ಮರಾಠಿಗೆ ಅನುವಾದ ಮಾಡಿದವರು ಅನಿರುದ್ಧ ದಿಯೋಧರ್. ಹಾಡು ಮತ್ತು ಸಂಗೀತ ಸಂಯೋಜನೆ: ಶಿವಪ್ರಣವ್ ಅಲ್ವಾನಿ, ರಂಗವಿನ್ಯಾಸ : ಸತ್ಯಮ್ ಆಚಾರ್ಯ, ಶಬ್ಲೋ ಗಾಂವ್ಕರ್, ವಸ್ತ್ರವಿನ್ಯಾಸ : ಪ್ರಜಾಕ್ತ ಕಾವ್ಲೇಕರ್ ಅವರದು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ