ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ವಿದ್ದು ಉಚ್ಚಿಲ್‌ ನಿರ್ದೇಶನದ ಶೂದ್ರ ಶಿವ ನಾಟಕ ಪ್ರದರ್ಶನ

ಭಾಷೆ : ಕನ್ನಡ
ಪರಿಕಲ್ಪನೆ, ನಿರ್ದೇಶನ : ವಿದ್ದು ಉಚ್ಚಿಲ್‌
ತಂಡ : ರುದ್ರ ಥೇಟರ್, ಮಂಗಳೂರು

ಬೆಂಗಳೂರು: ಬಾಬು ಶಿವಪೂಜಾರಿಯವರ `ಶ್ರೀ ನಾರಾಯಣಗುರು ವಿಜಯ ದರ್ಶನ’ ಪ್ರೇರಣಾ ಪಠ್ಯವನ್ನು ಶರತ್ ಎಸ್. ನೀನಾಸಂ, ಮನೋಜ್ ವಾಮಾಂಜೂರು ಅವರು ರಂಗರೂಪಕ್ಕೆ ಇಳಿಸಿರುವ ʻಶೂದ್ರ ಶಿವʼ ನಾಟಕವನ್ನು ವಿದ್ದು ಉಚ್ಚಿಲ್‌ ನಿರ್ದೇಶನ ಮಾಡಿದ್ದಾರೆ. ಈ ನಾಟಕ ಇಂದು (ಫೆಬ್ರವರಿ 21) ಪ್ರದರ್ಶನಕ್ಕೆ ಸಿದ್ದವಾಗಿದೆ.

ರಂಗಕರ್ಮಿ, ಸಂಘಟಕ ಪ್ರೊ. ಸಿ ಜಿ ಕೃಷ್ಣಸ್ವಾಮಿ ಅವರ ನೆನಪಿನಲ್ಲಿ ಹಮ್ಮಿಕೊಂಡಿರುವ 8ನೇ ವರ್ಷದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ 19ರಿಂದ ಆರಂಭವಾಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದೆ. ಇಂದು ಮೂರನೇ ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಡಿ ಕೆ ಚೌಟ ವೇದಿಕೆಯಲ್ಲಿ ಸಂಜೆ 7.15ಕ್ಕೆ ಶೂದ್ರ ಶಿವ ನಾಟಕ ಪ್ರದರ್ಶನವಿದೆ.

ಇದನ್ನು ಓದಿ: ಫೆ.19ರಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ; 4ದಿನ – 4ವೇದಿಕೆ – 6ನಾಟಕ – 5ಕಿರುಚಿತ್ರ – 5ಕಾರ್ಯಕ್ರಮ

ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಆದರ್ಶಮಯವಾದದು. ದೇವಸ್ಥಾನದ ದಾರಿಯಲ್ಲಿ ನಡೆಯಲು ಅವಕಾಶವಿಲ್ಲದ ಸಮುದಾಯಗಳಿಗೆ ದೇವಸ್ಥಾನವನ್ನು ಕಟ್ಟಿಕೊಡುವುದು ಮತ್ತು ತನ್ನೊಳಗೆ ಆ ದೇವರ ಹುಡುಕಾಟದ ದಾರಿಯನ್ನು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ತೋರಿಸಿಕೊಟ್ಟು ಧರ್ಮ, ಜಾತಿ ತಾರತಮ್ಯಗಳ ಗೋಡೆಗಳನ್ನು ಒಡೆಯುವ, ಮೌಢ್ಯಗಳ ನಿರ್ಮೂಲನೆ ಮಾಡ ಹೊರಟ ಸುಧಾರಣಾ ಸಂತನೊಬ್ಬನ ಕಥೆ ಇದು. ಕೇರಳದ ಗುರು ಚಳುವಳಿಯ ಐತಿಹಾಸಿಕ ಹಿನ್ನೆಲೆಯನ್ನು ರಂಗ ತಂತ್ರಗಳೊಂದಿಗೆ ಹೆಣೆದುಕೊಂಡು ಗುರುವಿನ ಅರಿವನ್ನು ಜನಮಾನಸಕ್ಕಿಳಿಸುವ ಪ್ರಯತ್ನವಾಗಿದೆ.

ದ್ವೇಷ ರಹಿತವಾಗಿ ಮೈತ್ರಿ, ಸಮಾನತೆ ಮತ್ತು ಐಕ್ಯತೆಯಿಂದ  ಸಂಘಟಿತರಾಗಿ, ಶಕ್ತಿವಂತರಾಗಿ ಒಗ್ಗೂಡಿದ ಶಕ್ತಿಯಿಂದ ಸಾಮಾಜಿಕ, ಔದ್ಯೋಗಿಕ ಹಾಗೂ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂಬ ಸಂದೇಶ ಮತ್ತು ತತ್ವ ಆದರ್ಶಗಳು ಅಗತ್ಯವಿದೆ. ಗುರು ಚಳವಳಿಯ ಅರಿವು ವ್ಯಾಪ್ತಿ ವಿಸ್ತಾರಸುವ ಸಣ್ಣ ಪ್ರಯತ್ನವೇ `ಶೂದ್ರ ಶಿವ’ ನಾಟಕ.

ರುದ್ರ ಥೇಟರ್ ರಂಗ ಪಯಣ ರಂಗಭೂಮಿ ಮನೋರಂಜನೆಯೊಂದಿಗೆ ಹೊಸ ವಿಷಯ ಹೊಸ ಆಶಯದೊಂದಿಗೆ “ಬ್ರಹ್ಮಶ್ರೀ ನಾರಾಯಣ ಗುರುಗಳ’’ ಜೀವನ ಚರಿತ್ರೆ ಮತ್ತು ತತ್ವ ಸಂದೇಶಗಳನ್ನು ಒಳಗೊಂಡು ನಾಟಕವನ್ನು ನಿರ್ಮಿಸಿದೆ. 21 ಕಲಾವಿದರಿಗೆ ಸುಮಾರು 70 ದಿನಗಳು ರಂಗ ಕಾರ್ಯದ ಜೊತೆಗೆ ನಾಟಕ ಕಟ್ಟುವ ಪ್ರಕ್ರಿಯೆ ನಡೆಸುತ್ತಿದೆ.

ಇದನ್ನು ಓದಿ: ಫೆ.20ರಿಂದ ಪುನೀತ್‌ ರಾಜ್‌ಕುಮಾರ್‌ ವೇದಿಕೆಯಲ್ಲಿ ಕಿರು ಚಿತ್ರೋತ್ಸವ ಪ್ರದರ್ಶನ

ನಿರ್ದೇಶಕ ವಿದ್ದು ಉಚ್ಚಿಲ್‌ ದಕ್ಷಿಣ ಕನ್ನಡ ಜಿಲ್ಲೆಯವರು. ತುಳು ರಂಗಭೂಮಿಯ ಮೂಲಕ ರಂಗ ಪಯಣ ಆರಂಭಿಸಿದರು. 2010 – 2011ರಲ್ಲಿ ಮೈಸೂರು ರಂಗಾಯಣದಲ್ಲಿ ರಂಗ ಶಿಕ್ಷಣ ಪರ್ಯಟನ ತಂಡದಲ್ಲಿ ತಿರುಗಾಟ. ನಿರ್ದೇಶನದ ಕಡೆ ಹೆಚ್ಚಿನ ಒಲವು ಇವರಿಗೆ. ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮದಲ್ಲಿ ವಿಶೇಷ ಕ್ರಿಯಾಶೀಲತೆ ಹೊಂದಿರುವವರು. ದೇಶದ ವಿವಿದೆಡೆ ಹಲವಾರು ರಂಗ ಕಾರ್ಯಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಕನ್ನಡ, ಕೊಂಕಣಿ, ತುಳು ರಂಗಭೂಮಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಕಲಾವಿದರಾದ ಅಭಿಷೇಕ್ ಕೆ, ಪವನ್ ಮಿಟ್ಟ, ಸಂದೀಪ್ ಮಸ್ಕರೇನಸ್, ಚೈತ್ರ ಟಿ ಪಿ, ಮಂಜುನಾಥ್ ಹಳ್ಯಾಳ, ಜೀವನ್ ಸಿದ್ದಿ, ಕಾವ್ಯ ಎಲ್, ನಾಗೇಂದ್ರ ಶ್ರೀನಿವಾಸ, ಮಣಿ ಎನ್ ಕುಂಬ್ಳೆ, ಸುಮಂತ್, ರಾಜೇಂದ್ರ ಪ್ರಸಾದ್ ವಿ ಜಿ, ಸದಾನಂದ ಎಸ್, ಪ್ರಿಯಾಂಕ ಜಿ, ಗಣೇಶ್ ಪುತ್ತೂರು, ಅಶ್ವಥ್ ಕುಂದಾಪುರ, ಸುಧೀಶ್ ಕೆ , ಯೋಗೀಶ್ ಎಚ್ ನಾಯ್ಕ, ಶ್ರೀಧರ ಅಶೋಕ್ ಗೋಡಚಿ, ಜಯದೀಪ್ ಎ ಜಿ ಅಭಿನಯಿಸಿದ್ದಾರೆ.

ರಂಗ ವಿನ್ಯಾಸ: ಶಶಿಧರ ಅಡಪ, ಸಂಗೀತ: ಶರತ್ ಉಚ್ಚಿಲ, ಹಿನ್ನಲೆ ಗಾಯನ: ರವೀಂದ್ರ ಪ್ರಭು, ಸಂಗೀತ: ಬಾಲಚಂದ್ರ, ಯಶವಂತ್, ಮೇಘನ ಕುಂದಾಪುರ ಅವರು ಮಾಡಿದ್ದಾರೆ.

ಸಾಹಿತ್ಯ: ಮನೋಜ್‌ವಾಮಂಜೂರು, ಜಯಶ್ರೀ ಇಡ್ಕಿದು ಮತ್ತು ಬೆಳಕು: ನಿತೇಶ್ ಬಂಟ್ವಾಳ ಪ್ರವೀಣ್ ವಿಸ್ಮಯ, ವಸ್ತ್ರ ವಿನ್ಯಾಸ: ಶಿವರಾಂ ಕಲ್ಮಡ್ಕ, ತಂಡ ನಿರ್ವಹಣೆ: ಯೋಗೇಶ್ ಜಪ್ಪಿನಮೊಗರು, ಲೋಕೇಶ್ ಉಚ್ಚಿಲ. ಮಾರ್ಗದರ್ಶನ: ಪದ್ಮರಾಜ್ ಆರ್ ಅವರದ್ದಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *