ಬೆಂಗಳೂರು: ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ವಿತರಣೆ ನಂತರವು ಆದಾಯ ಕೊರತೆಯ(ಪಿ.ಡಿ.ಆರ್.ಡಿ) 4ನೇ ಮಾಸಿಕ ಅನುದಾನ ಮೊತ್ತ 9,871.00 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಈ ಕಂತಿನ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ 39,484.00 ಕೋಟಿ ರೂ ಹಣವನ್ನು ವಿತರಣೆ ನಂತರದ ಆದಾಯ ಕೊರತೆಯಡಿ ಬಿಡುಗಡೆ ಮಾಡಿದಂತಾಗಿದೆ.
ರಾಜ್ಯಕ್ಕೆ ಈ ಕಂತಿನಲ್ಲಿ 135.92 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, 2021-22ನೇ ಸಾಲಿನಲ್ಲಿ ಒಟ್ಟು 543.67 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಇದನ್ನು ಓದಿ: ಕೇಂದ್ರ ಸಚಿವರಿಗೆ ಖಾತೆಗಳ ಹಂಚಿಕೆ: ಅಶ್ವಿನಿ ವೈಷ್ಣವ್‌ಗೆ ರೈಲ್ವೆ-ಮನ್ಸುಖ್ ಮಾಂಡವಿಯಾಗೆ ಆರೋಗ್ಯ ಖಾತೆ
ವಿತರಣೆ ನಂತರದ ಆದಾಯ ಕೊರತೆ ಅನುದಾನವನ್ನು ಸಂವಿಧಾನದ 275ನೇ ಪರಿಚ್ಛೇದದಡಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ. ರಾಜ್ಯಗಳಿಗೆ ವಿತರಣೆ ನಂತರದ ಆದಾಯ ಕೊರತೆ ಅಂತರವನ್ನು ಪೂರೈಸಲು ಮಾಸಿಕ ಕಂತುಗಳಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಪ್ರಕಾರ ಅನುದಾನ ಬಿಡುಗಡೆ ಮಾಡಲಾಗುತ್ತದೆ. 2021-22ನೇ ಸಾಲಿನಲ್ಲಿ 17 ರಾಜ್ಯಗಳಿಗೆ ಪಿಡಿಆರ್‌ಡಿ ಅನುದಾನ ಬಿಡುಗಡೆ ಮಾಡುವಂತೆ ಆಯೋಗ ಶಿಫಾರಸ್ಸು ಮಾಡಿತ್ತು.
ಅರ್ಹ ರಾಜ್ಯಗಳು ಅನುದಾನವನ್ನು ಸ್ವೀಕರಿಸಲಿವೆ ಮತ್ತು 2021-22ನೇ ಸಾಲಿನಲ್ಲಿ ಹಂಚಿಕೆಯ ನಂತರದ ವೆಚ್ಚ ಹಾಗೂ ಆದಾಯದ ಅಂತರವನ್ನು ಪರಿಗಣಿಸಿ ಆಯೋಗ ತೀರ್ಮಾನ ತೆಗೆದುಕೊಳ್ಳಲಿದೆ.
ಇದನ್ನು ಓದಿ: ಕೇಂದ್ರ ಸಚಿವ ಸಂಪುಟ: ರಾಜ್ಯದ ನಾಲ್ವರು ಒಳಗೊಂಡು 43 ಮಂದಿ ಪ್ರಮಾಣ ವಚನ ಸ್ವೀಕಾರ
2021–22ನೇ ಹಣಕಾಸು ಸಾಲಿನಲ್ಲಿ 17 ರಾಜ್ಯಗಳಿಗೆ 15ನೇ ಹಣಕಾಸು ಆಯೋಗ ಒಟ್ಟು 1,18,452 ಕೋಟಿ ರೂಪಾಯಿ ವಿತರಣೆ ನಂತರದ ಆದಾಯ ಕೊರತೆ ಅನುದಾನ ಬಿಡುಗಡೆ ಮಾಡುವಂತೆ ಶಿಫಾರಸ್ಸು ಮಾಡಿತ್ತು. ಈ ಪೈಕಿ 4 ಕಂತಿನಲ್ಲಿ ಈ ವರೆಗೆ 39,484 ಕೋಟಿ ರೂಪಾಯಿ (ಶೇ 33.33 ರಷ್ಟು) ಬಿಡುಗಡೆ ಮಾಡಲಾಗಿದೆ.
ಪಿಡಿಆರ್‌ಡಿ ಅನುದಾನ ಬಿಡುಗಡೆಗೆ 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ ರಾಜ್ಯಗಳೆಂದರೆ: ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ. ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು.