ಕೇಂದ್ರದಿಂದ ರಾಜ್ಯಗಳಿಗೆ ₹75 ಸಾವಿರ ಕೋಟಿ ಜಿಎಸ್‌ಟಿ ಸಾಲ ಬಿಡುಗಡೆ

ನವದೆಹಲಿ: ರಾಜ್ಯಗಳಲ್ಲಿ ಕೇಂದ್ರ ಸರಕಾರವು ಜಿಎಸ್‌ಟಿ ಹಣವನ್ನು ಬಿಡುಗಡೆ ಮಾಡಿದ್ದು ಸಾಲದ ರೂಪದಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ  ₹75,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಆದಾಯ ಕೊರತೆ ನೀಗಿಸಿಕೊಳ್ಳಲು ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಒಟ್ಟಾರೆಯಾಗಿ ಜಿಎಸ್‌ಟಿ ಹಣವಾಗಿ ಒಟ್ಟು ₹2.59 ಲಕ್ಷ ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಜಿಎಸ್‌ಟಿ ಪರಿಹಾರ ಹಣ ₹ 1 ಲಕ್ಷ ಕೋಟಿ ಹಾಗೂ ಸಾಲದ ರೂಪದಲ್ಲಿ ₹ 1.59 ಲಕ್ಷ ಕೋಟಿ ಹಣ ರಾಜ್ಯಗಳಿಗೆ ನೀಡಲಿದೆ. ಸಾಲದ ರೂಪದಲ್ಲಿ ಈಗ ಮೊದಲ ಕಂತಿನಂತೆ ₹75,000 ಕೋಟಿ ಹಣ ಸಾಲದ ರೂಪದಲ್ಲಿ ಬಿಡುಗಡೆ ಮಾಡಿದೆ.

ಇದನ್ನು ಓದಿ: ಜಿಎಸ್‌ಟಿ ಪರಿಹಾರ ಬದಲಿಗೆ ಕೇಂದ್ರದಿಂದ ಸಾಲ

ದೇಶದ ಪ್ರಮುಖ ತೆರಿಗೆ ವ್ಯಾಪ್ತಿಯು ಕೇಂದ್ರ ಸರಕಾರದ ಸುಪರ್ದಿಯಲ್ಲಿರುವುದರಿಂದ ದೊಡ್ಡ ಮೊತ್ತದ ಹಣ ಕೇಂದ್ರ ಸರಕಾರವೇ ರಾಜ್ಯಗಳಿಗೆ ನೀಡಬೇಕಿದೆ. ಆದರೆ, ಮೇ 28ರಂದು ನಡೆದ 43ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳ ಸಂಪನ್ಮೂಲಗಳ ಕ್ರೂಢೀಕರಣಕ್ಕಾಗಿ ₹1.59 ಲಕ್ಷ ಕೋಟಿ ಸಾಲ ಪಡೆದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲು ನಿರ್ಧರಿಸಿತ್ತು.

ಕೇಂದ್ರ ಸರ್ಕಾರ ಬಿಡುಗಡೆ ಸಾಲದ ರೂಪದ ₹ 75 ಸಾವಿರ ಕೋಟಿ ಹಣದಲ್ಲಿ ಕರ್ನಾಟಕಕ್ಕೆ ₹ 8542 ಕೋಟಿ ಮೊತ್ತ ಹಣಕಾಸು ಇಲಾಖೆಯಿಂದ ಬಿಡುಗಡೆಯಾಗಿದೆ. ಜಿಎಸ್‌ಟಿ ಪರಿಹಾರದ ಬದಲಾಗಿ ಸಾಲ ಸೌಲಭ್ಯದಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸು ಸಚಿವಾಲಯ ₹75 ಸಾವಿರ ಕೋಟಿ ಸಾಲ ಬಿಡುಗಡೆ ಮಾಡಿದೆ. ಸೆಸ್ ಸಂಗ್ರಹದಿಂದ ಪ್ರತಿ 2 ತಿಂಗಳಿಗೊಮ್ಮೆ ಬಿಡುಗಡೆಯಾಗುವ ಸಾಮಾನ್ಯ ಜಿಎಸ್‌ಟಿ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ಪ್ರಕಟಿಸಿದೆ.

ಇದನ್ನು ಓದಿ: ಮೇ 28ಕ್ಕೆ 43ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಿಗದಿ – ನಿರ್ಮಲಾ ಸೀತಾರಾಮನ್

₹75,000 ಕೋಟಿ ಹಣವು ಕೇಂದ್ರ ಸರ್ಕಾರವು 5 ವರ್ಷದ ಸೆಕ್ಯೂರಿಟಿಯಾಗಿ ಸಾಲವನ್ನು ಪಡೆದಿದೆ. ಒಟ್ಟು ₹68,500 ಕೋಟಿ ಮತ್ತು 2 ವರ್ಷದ ಸೆಕ್ಯೂರಿಟಿಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ನೀಡಲಾಗಿದೆ.

ಎಲ್ಲಾ ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಹಾರ ಕೊರತೆಯ ಹಣವನ್ನು ನೀಗಿಸಿಕೊಳ್ಳಲು ಸಾಲ ಪಡೆಯುವ ಬಗ್ಗೆ ಒಪ್ಪಿಕೊಂಡಿವೆ. ಬಾಕಿ ಮೊತ್ತವನ್ನು 2021-22ರ ದ್ವಿತೀಯಾರ್ಧದಲ್ಲಿ ಸ್ಥಿರ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಜಿಎಸ್​ಟಿ ಜಾರಿಯಾಗಿ ನಾಲ್ಕು ವರ್ಷ ಆಗಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಜಿಎಸ್​ಟಿ ಪರಿಹಾರ ಕುರಿತು ಚರ್ಚೆ ನಡೆಯಲಿದೆ. ವಿಶೇಷ ಕಲಾಪದಲ್ಲಿ ಇದರ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.

Donate Janashakthi Media

Leave a Reply

Your email address will not be published. Required fields are marked *