ಕೇಜ್ರಿವಾಲ್ ಬಂಗಲೆ ‘ಶೀಶ್ ಮಹಲ್’ ನವೀಕರಣ ಹಗರಣದ ತನಿಖೆಗೆ ಕೇಂದ್ರ ಆದೇಶ

ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಗಲೆ ‘ಶೀಶ್ ಮಹಲ್’ ನವೀಕರಣ ಮತ್ತು ಐಷಾರಾಮಿ ಸೌಲಭ್ಯಗಳ ವೆಚ್ಚದ ಬಗ್ಗೆ ಕೇಂದ್ರ ಜಾಗೃತ ಆಯೋಗ(ಸಿವಿಸಿ) ವಿವರವಾದ ತನಿಖೆಗೆ ಆದೇಶಿಸಿದೆ.

40,000 ಚದರ ಗಜಗಳಷ್ಟು(8 ಎಕರೆ) ವಿಸ್ತೀರ್ಣದ ಐಷಾರಾಮಿ ಮಹಲು(ಶೀಶ್ ಮಹಲ್) ನಿರ್ಮಿಸಲು ಕಟ್ಟಡ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ವಿವರವಾದ ತನಿಖೆ ನಡೆಸುವಂತೆ ಸಿವಿಸಿ ಕೇಂದ್ರ ಲೋಕೋಪಯೋಗಿ ಇಲಾಖೆ(ಸಿಪಿಡಬ್ಲ್ಯೂಡಿ)ಗೆ ಸೂಚಿಸಿದೆ.

ಇದನ್ನು ಓದಿ: ನವದಹಲಿ| ಆದಾಯ ತೆರಿಗೆ ಮಸೂದೆ-2025 ಮಂಡನೆ

ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಅವರ ದೂರಿನ ಮೇರೆಗೆ ಸಿಪಿಡಬ್ಲ್ಯೂಡಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ಸಿಎಂ ನಿವಾಸದ ಬಗ್ಗೆ ವಾಸ್ತವಿಕ ವರದಿಯನ್ನು ಸಲ್ಲಿಸಿದ ನಂತರ ಫೆಬ್ರವರಿ 13 ರಂದು ಸಿವಿಸಿ ತನಿಖೆಗೆ ಆದೇಶಿಸಿದೆ.

ಅಕ್ಟೋಬರ್ 14, 2024 ರಂದು, 6 ಫ್ಲ್ಯಾಗ್ ಸ್ಟಾಫ್ ರಸ್ತೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹಿಂದಿನ ನಿವಾಸದಲ್ಲಿ ಅಕ್ರಮ ನಿರ್ಮಾಣದ ಬಗ್ಗೆ ಗುಪ್ತಾ ಕೇಂದ್ರ ಜಾಗೃತ ಆಯೋಗ(ಸಿವಿಸಿ)ಕ್ಕೆ ದೂರು ನೀಡಿದ್ದರು.

40,000 ಚದರ ಗಜಗಳಷ್ಟು (8 ಎಕರೆ) ವಿಸ್ತೀರ್ಣದ ಐಷಾರಾಮಿ ಮಹಲು (‘ಶೀಶ್ ಮಹಲ್’) ನಿರ್ಮಿಸಲು ಕೇಜ್ರಿವಾಲ್ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಗುಪ್ತಾ ಆರೋಪಿಸಿದ್ದಾರೆ.

ರಾಜ್‌ಪುರ ರಸ್ತೆಯಲ್ಲಿರುವ ಪ್ಲಾಟ್ ಸಂಖ್ಯೆ 45 ಮತ್ತು 47(ಹಿಂದೆ ಟೈಪ್-ವಿ ಫ್ಲಾಟ್‌ಗಳಲ್ಲಿ ಹಿರಿಯ ಅಧಿಕಾರಿಗಳು ಮತ್ತು ನ್ಯಾಯಾಧೀಶರಿಗೆ ಹಂಚಿಕೆ ಮಾಡಲಾಗುತ್ತಿತ್ತು) ಮತ್ತು ಎರಡು ಬಂಗಲೆಗಳನ್ನು(8-ಎ & 8-ಬಿ, ಫ್ಲಾಗ್ ಸ್ಟಾಫ್ ರಸ್ತೆ) ಒಳಗೊಂಡಂತೆ ಸರ್ಕಾರಿ ಆಸ್ತಿಗಳನ್ನು ಕೆಡವಿ ಹೊಸ ನಿವಾಸದಲ್ಲಿ ವಿಲೀನಗೊಳಿಸಲಾಗಿದೆ. ಇದು ನೆಲದ ವ್ಯಾಪ್ತಿ ಮತ್ತು ನೆಲದ ವಿಸ್ತೀರ್ಣ ಅನುಪಾತ(ಎಫ್‌ಎಆರ್) ಮಾನದಂಡಗಳನ್ನು ಉಲ್ಲಂಘಿಸಿದೆ ಮತ್ತು ಸರಿಯಾದ ವಿನ್ಯಾಸ ಯೋಜನೆ ಅನುಮೋದನೆ ಹೊಂದಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ನೋಡಿ: SCSP/TSP ಯೋಜನೆಯ ದುರ್ಬಳಕೆ: ಈ ದಶಕದ ವಂಚನೆ Janashakthi Media |SCSP/TS |ವಾರದ ನೋಟ

Donate Janashakthi Media

Leave a Reply

Your email address will not be published. Required fields are marked *