ಹೊಸದಿಲ್ಲಿ: ದೇಶದ ಅತಿದೊಡ್ಡ ಹಾಲಿನ ಸಂಸ್ಥೆಯಾದ ಅಮುಲ್ ಸಂಸ್ಥೆಯು ಪ್ಲಾಸ್ಟಿಕ್ ಸ್ಟ್ರಾ ನೀಷೇಧದ ಯೋಜನೆಯನ್ನು ಮುಂದೂಡಲು ಸರ್ಕಾರಕ್ಕೆ ಪತ್ರ ಬರೆದಿದೆ.
ಈ ಕ್ರಮವು ರೈತರು ಮತ್ತು ವಿಶ್ವದ ಅತಿದೊಡ್ಡ ಉತ್ಪನ್ನದ ಉತ್ಪಾದಕರ ಹಾಲಿನ ಬಳಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ಹೇಳಿದೆ. ಮೇ 28ರಂದು ಬರೆಯಲಾದ ಪತ್ರದಲ್ಲಿ ಅಮುಲ್ ಸಂಸ್ಥೆ ತನ್ನ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿದೆ.
ಸಣ್ಣ ಪ್ಯಾಕ್ ಜ್ಯೂಸ್ ಮತ್ತು ಹಾಲಿನ ಉತ್ಪನ್ನಗಳೊಂದಿಗೆ ಪ್ಯಾಕ್ ಮಾಡಲಾದ ಸ್ಟ್ರಾಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಜುಲೈ 1 ರಂದು ನಿರ್ಧರಿಸಿತ್ತು. ಆದ್ದರಿಂದ ಇದಕ್ಕಿಂತ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಅಮುಲ್ ಈ ಪತ್ರವನ್ನು ಕಳುಹಿಸಿದೆ. ಅಮುಲ್ ಪ್ರತಿ ವರ್ಷ ಪ್ಲಾಸ್ಟಿಕ್ ಸ್ಟ್ರಾಗಳನ್ನು ಜೋಡಿಸಿ ಶತಕೋಟಿ ಸಣ್ಣ ಡೈರಿ ಪೆಟ್ಟಿಗೆಗಳನ್ನು ಮಾರಾಟ ಮಾಡುತ್ತದೆ.
ಆದರೆ, ಸರ್ಕಾರದ ಈ ನಿರ್ಧಾರದಿಂದ ಅಮುಲ್ ಮತ್ತು ಪೆಪ್ಸಿಕೋ ಇಂಕ್ ಮತ್ತು ಕೋಕಾ,ಕೋಲಾ ಸೇರಿದಂತೆ ಜಾಗತಿಕ ಪಾನೀಯಗಳ ಕಂಪನಿಗಳು ಬೆಚ್ಚಿಬಿದ್ದಿದೆ. ಹೀಗಾಗಿ, ಸರ್ಕಾರವು ತನ್ನ ನಿಲುವನ್ನು ಬದಲಾಯಿಸಲು ನಿರಾಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.